ವಿಲ್ ಸ್ಮಿತ್

ಅಮೇರಿಕದ ಚಲನಚಿತ್ರ ನಟ

ವಿಲ್ಲರ್ಡ್ ಕ್ರಿಸ್ಟೋಫರ್ "ವಿಲ್" ಸ್ಮಿತ್, ಜೂ. (ಹುಟ್ಟಿದ್ದು ಸೆಪ್ಟೆಂಬರ್ 25,1968)[೧] ಒಬ್ಬ ಅಮೇರಿಕದ ನಟ, ಚಲನಚಿತ್ರ ನಿರ್ಮಾಪಕ ಮತ್ತು ಒಬ್ಬ ರಾಪ್ಪರ್ . ಅವರು ಸಂಗೀತ,ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಯಶಸ್ಸನ್ನು ಕಂಡಿದ್ದಾರೆ. 2007 ರ ಏಪ್ರಿಲ್‌ನಲ್ಲಿ, Newsweek ಅವರನ್ನು ಭೂಮಿ ಮೇಲಿನ ಅತ್ಯಂತ ಪ್ರಭಾವಶಾಲಿ ನಟನೆಂದು ಹೇಳಿತು.[೨] ಸ್ಮಿತ್ ಅವರನ್ನು ನಾಲ್ಕು ಬಾರಿ ಗೋಲ್ಡನ್ ಗ್ಲೋಬ್ ಅವಾರ್ಡ್‌ಗಳಿಗೆ, ಎರಡು ಬಾರಿ ಅಕಾಡೆಮಿ ಅವಾರ್ಡ್‌ಗಳಿಗೆ ನಾಮನಿರ್ದೇಶಿತಗೊಂಡಿದ್ದಾರೆ ಮತ್ತು ಅನೇಕ ಗ್ರಾಮಿ ಅವಾರ್ಡ್ಗಳನ್ನು ಗೆದ್ದಿದ್ದಾರೆ.

ವಿಲ್ ಸ್ಮಿತ್

Smith in September 2009
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
Willard Christopher Smith, Jr.
(1968-09-25) ಸೆಪ್ಟೆಂಬರ್ ೨೫, ೧೯೬೮ (ವಯಸ್ಸು ೫೫)
Wynnefield, West Philadelphia, Pennsylvania, U.S.
ಬೇರೆ ಹೆಸರುಗಳುThe Fresh Prince
ವೃತ್ತಿನಟ, rapper, film producer, record producer, television producer
ವರ್ಷಗಳು ಸಕ್ರಿಯ1985–present
ಪತಿ/ಪತ್ನಿSheree Zampino (1992–1995)
Jada Pinkett Smith (1997–present)
Official website

ಎಂಬತ್ತರ ದಶಕದ ಕೊನೆಯಲ್ಲಿ, ಸ್ಮಿತ್ ಅವರುದಿ ಫ್ರೆಂಚ್ ಪ್ರಿಂನ್ಸ್ ಎಂಬ ಹೆಸರಿನಡಿಯಲ್ಲಿ ರಾಪ್ಪರ್‌ನಲ್ಲಿ ಪ್ರಸಿದ್ಧಿ ಪಡೆದರು. 1990 ರಲ್ಲಿ, ಅವರು ದಿ ಫ್ರೆಂಚ್ ಪ್ರಿಂನ್ಸ್ ಆಫ್ ಬೆಲ್-ಏರ್ ಎಂಬ ಜನಪ್ರಿಯ ದೂರದರ್ಶನ ದಾರಾವಾಹಿಯಲ್ಲಿ ನಟಿಸಲು ಪ್ರಾರಂಭಿಸಿದಾಗ ಅವರ ಪ್ರಖ್ಯಾತಿ ಹೆಚ್ಚಾಯಿತು. ಆ ಧಾರಾವಾಹಿಯು ಸತತವಾಗಿ ಆರು ವರ್ಷಗಳಕಾಲ (1990 - 1996) NBCಯಲ್ಲಿ ಪ್ರದರ್ಶನಗೊಂಡಿತು ಮತ್ತು ನಂತರ ಇತರೆ ಹಲವು ವಾಹಿನಿಗಳಲ್ಲಿ ನಿರಂತರವಾಗಿ ಪ್ರಸಾರಗೊಂಡಿತು. ತೊಂಬತ್ತರ ದಶಕದ ಮಧ್ಯದಲ್ಲಿ, ಸ್ಮಿತ್‌ ಅವರು ದೂರದರ್ಶನದ ಅಭಿನಯದಿಂದ ಚಲನಚಿತ್ರ ಅಭಿನಯಕ್ಕೆ ಕಾಲಿಟ್ಟರು ಮತ್ತು ಅಂತಿಮವಾಗಿ ಪ್ರಪಂಚದಾದ್ಯಂತ ದೊಡ್ಡಪ್ರಮಾಣದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸುಕಂಡ ಅನೇಕ ಬ್ಲಾಕ್‌ಬಸ್ಟರ್ ಚಲನಚಿತ್ರಗಳಲ್ಲಿ ನಟಿಸಿದರು. ಅನುಕ್ರಮವಾಗಿ ಎಂಟು ಚಲನಚಿತ್ರಗಳು ಸ್ವದೇಶದ ಗಲ್ಲಾಪೆಟ್ಟಿಗೆಯಲ್ಲಿ $100 ಮಿಲಿಯನ್‌ಗಿಂತಲೂ ಹೆಚ್ಚು ಹಣ ಸಂಪಾದಿಸಿರುವ ಚಿತ್ರಗಳಲ್ಲಿ ನಟಿಸಿರುವ ಇತಿಹಾಸದ ಏಕೈಕ ನಟರಾಗಿದ್ದಾರೆ ಹಾಗೂ ಎಂಟು ಅನುಕ್ರಮ ಚಲನಚಿತ್ರಗಳಲ್ಲಿ ಯಶಸ್ಸು ಕಂಡ ಏಕೈಕ ನಟನಾಗಿದ್ದು ತನ್ನ ದೇಶದ ಎಲ್ಲಾ ನಟರಲ್ಲಿ #1 ಸ್ಥಾನದ ತಾರೆಯಾಗಿದ್ದಾರೆ.

ಇವರು ನಟಿಸಿದ ಹತ್ತೊಂಬತ್ತು ಕಾಲ್ಪನಿಕ ಚಲನಚಿತ್ರಗಳಲ್ಲಿ ಹದಿನಾಲ್ಕು ಚಲನಚಿತ್ರಗಳು ಪ್ರಪಂಚದ್ಯಾದಂತ $100 ಮಿಲಿಯನ್‌‌ಗಿಂತಲೂ ಹೆಚ್ಚು ಹಣ ಸಂಪಾದಿಸಿದೆ, ಅದರಲ್ಲಿ ನಾಲ್ಕು ಚಿತ್ರಗಳು ಪ್ರಪಂಚದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ $500 ಮಿಲಿಯನ್‌‌ಗಿಂತಲೂ ಹೆಚ್ಚು ಹಣ ಸಂಪಾದಿಸಿದೆ.

ಅವರ ಅತ್ಯಂತ ಆರ್ಥಿಕವಾಗಿ ಯಶಸ್ಸುಕಂಡ ಚಲನಚಿತ್ರಗಳೆಂದರೆ ಬ್ಯಾಡ್ ಬಾಯ್ಸ್, ಬ್ಯಾಡ್ ಬಾಯ್ಸ್ II , ಇಂಡಿಪೆಂಡೆಂನ್ಸ್ ಡೇ , ಮೆನ್ ಇನ್ ಬ್ಲ್ಯಾಕ್ , ಮೆನ್ ಇನ್ ಬ್ಲ್ಯಾಕ್ II , ಐ, ರೊಬೊಟ್ , ದಿ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ , ಐ ಆಮ್ ಲೆಜೆಂಡ್ , ಹ್ಯಾನ್ಕಾಕ್ , ವೈಲ್ಡ್ ವೈಲ್ಡ್ ವೆಸ್ಟ್ , ಎನಿಮಿ ಆಫ್ ದ ಸ್ಟೇಟ್ , ಶಾರ್ಕ್ ಟೇಲ್ , ಹಿಚ್ ಮತ್ತು ಸೆವೆನ್ ಪೌಂಡ್ಸ್ .

ಅಲಿ ಮತ್ತು ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಶನ್ನಲ್ಲಿ ಅವರ ಅಭಿನಯಕ್ಕಾಗಿ ವಿಮರ್ಶಾತ್ಮಕವಾಗಿ ಶ್ಲಾಘಿಸಲಾಯಿತು.

ಕುಟುಂಬ ಮತ್ತು ಜೀವನಾರಂಭ ಬದಲಾಯಿಸಿ

ಸ್ಮಿತ್ ಹುಟ್ಟಿದ್ದು ಮತ್ತು ಬೆಳದಿದ್ದು ನಾರ್ಥ್‌ವೆಸ್ಟ್ ಫಿಲಾಡೆಲ್ಫಿಯವೆಸ್ಟ್ ಫಿಲಾಡೆಲ್ಫಿಯ ಮತ್ತು ಜರ್ಮನ್‌ಟೌನ್ನಲ್ಲಿ.

ಅವರ ತಾಯಿ, ಕ್ಯಾರೋಲಿನ್ (ನೀ ಬ್ರೈಠ್),ಶಾಲೆಯ ವ್ಯವಸ್ಥಾಪಕಿಯಾಗಿ ಫಿಲಾಡೆಲ್ಫಿಯ ಶಾಲೆಯಲ್ಲಿ ಹಾಗೂ ಅವರ ತಂದೆ, ವಿಲ್ಲರ್ಡ್ ಕ್ರಿಸ್ಟೋಫರ್ ಸ್ಮಿತ್ Sr ಅವರು ಶೈತ್ಯೀಕರಣ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.[೩][೪] ಅವರನ್ನು ಬಾಪ್ಟಿಸ್ಟ್ ಆಗಿ ಬೆಳೆಸಿದರು.[೫] ಅವರು ಹದಿಮೂರನೆ ವಯಸ್ಸಿನವರಾಗಿದ್ದಾಗ ಅವರ ತಂದೆ ತಾಯಿ ಬೇರೆಯಾದರು ಹಾಗೂ ಅವರು ಮೂವತ್ತೆರಡು ವರ್ಷದವರಿದ್ದಾಗ ವಿಚ್ಚೇದನ ಪಡೆದರು.[೬] ಸ್ಮಿತ್ ಅವರ ಆಕರ್ಷಕ ನಿಲುವು ಹಾಗೂ ತುಂಟ ವರ್ತನೆಯಿಂದ ತಮ್ಮ ಶಾಲೆಯಲ್ಲಿ ಅವರನ್ನು "ಪ್ರಿನ್ಸ್" ಎಂಬ ಅಡ್ಡ ಹೆಸರಿನಿಂದ ಕರೆಯಲ್ಪಟ್ಟರು, ಕೊನೆಯಲ್ಲಿ "ಫ್ರೆಂಚ್ ಪ್ರಿನ್ಸ್"ಎಂದು ಬದಲಾಯಿತು. ಹದಿಹರೆಯದಲ್ಲಿದ್ದಾಗಲೆ, ಸ್ಮಿತ್ ರಾಪ್ಪಿಂಗ್‌ ಅನ್ನು ಪ್ರಾರಂಭಿಸಿದ್ದರು ಮತ್ತು ಕೊನೆಗೆ ಒಂದು ಪಾರ್ಟಿಯಲ್ಲಿ ಪರಿಚಯವಾದ ಜೆಫ್ ಟೌನ್ಸ್‌ನ ಸಹಕಾರದಲ್ಲಿ ಅದನ್ನು ಮುಂದುವರೆಸಿದರು. (a.k.a.DJ ಜಾಝಿ ಜೆಫ್). ಅವರು ವೆಸ್ಟ್ ಫಿಲಡೆಲ್ಫಿಯಓವರ್ ಬ್ರೂಕ್ ಹೈ ಸ್ಕೂಲ್ನಲ್ಲಿ ಕಲಿತರು.

ಸ್ಮಿತ್ ಅವರು ಗೀತೆಯನ್ನು ರಚನೆ ಮಾಡುವಾಗ ಮತ್ತು ಟೌನ್ಸ್‌ನ ಮಿಕ್ಸಿಂಗ್ ಮತ್ತು ಸ್ಕ್ರಾಚಿಂಗ್‌ನಲ್ಲಿ ಇದ್ದ ಪಾಂಡಿತ್ಯದೊಂದಿಗೆ ಡಿಜೆ ಜಾಝಿ ಜೆಫ್ ಮತ್ತು ದಿ ಫ್ರೆಶ್ ಪ್ರಿನ್ಸ್ ಜೋಡಿಯ ಉಗಮವಾಯಿತು - ಈ ಸಂಯೋಗವು 1980 ಮತ್ತು 1990ರ ಪಾಪ್ ಮತ್ತು ಹಿಪ್-ಹಾಪ್ ಲೋಕಪ್ರಿಯವಾಯಿತು.

ವ್ಯಾಪಕವಾಗಿ ವರದಿಯಾಗಿರುವ ಪ್ರಕಾರ ಸ್ಮಿತ್ ಅವರು Massachusetts Institute of Technology (MIT)[೭] ಯಲ್ಲಿ ಹಾಜರಿರಲು ವಿದ್ಯಾರ್ಥಿ ವೇತನವನ್ನು ನಿರಾಕರಿಸಿದರು, ಅವರು MITಗೆ ಯಾವತ್ತು ಅರ್ಜಿ ಹಾಕಿರಲಿಲ್ಲ.[೮] ಸ್ಮಿತ್ ಅವರ ಪ್ರಕಾರ, "ನನ್ನ ತಾಯಿ,ಸ್ಕೂಲ್ ಬೋರ್ಡ್ ಆಫ್ ಫಿಲಡೆಲ್ಫಿಯನಲ್ಲಿ ಕೆಲಸ ಮಾಡಿದ್ದಾರೆ, ಅವರ ಸ್ನೇಹಿತರಲ್ಲಿ ಒಬ್ಬರು MIT ನಲ್ಲಿ ಅಡ್ಮಿಶನ್ಸ್ ಆಫಿಸರ್ ಆಗಿದ್ದರು. ನನ್ನ SAT ಸ್ಕೋರ್ ಹೆಚ್ಚಾಗಿತ್ತು ಮತ್ತು ಅವರಿಗೆ ಕಪ್ಪು ವರ್ಣದ ಮಕ್ಕಳು ಬೇಕಾಗಿದ್ದರು,ನನಗೆ ಸುಲಭವಾಗಿ ದಾಖಲಾತಿ ಸಿಗುತಿತ್ತು. ಆದರೆ ನನಗೆಕಾಲೇಜು ಸೇರುವ ಉದ್ದೇಶವಿರಲಿಲ್ಲ."[೯]

ಧ್ವನಿ ಮುದ್ರಣ ಮತ್ತು ನಟನೆಯ ವೃತ್ತಿಜೀವನ ಬದಲಾಯಿಸಿ

Will Smith
ಜನ್ಮನಾಮWill Smith
ಅಡ್ಡಹೆಸರುFresh Prince
ಮೂಲಸ್ಥಳWynnefield, West Philadelphia, Pennsylvania, United States
ಸಂಗೀತ ಶೈಲಿPop, hip hop
ವೃತ್ತಿRapper, actor
ಸಕ್ರಿಯ ವರ್ಷಗಳು1986–present
L‍abelsColumbia, Interscope
Associated actsDJ Jazzy Jeff & The Fresh Prince
ಅಧೀಕೃತ ಜಾಲತಾಣ[೧]

ಆರಂಭಿಕ ವೃತ್ತಿಜೀವನ, 1993–1997 ಬದಲಾಯಿಸಿ

ಸ್ಮಿತ್ MCಯಾಗಿ , turntablist ಮತ್ತು ನಿರ್ಮಾಪಕನಾಗಿ ಅವರ ಬಾಲ್ಯದ ಸ್ನೇಹಿತ ಜೆಫ್ರಿ "ಡಿಜೆ ಜಾಝಿ ಜೆಫ್" ಟೌನ್ಸ್‌ ಅಲ್ಲದೆ ಹ್ಯೂಮನ್ ಬೀಟ್ ಬಾಕ್ಸ್ ಆಗಿ ರೆಡಿ ರಾಕ್ C (ಕ್ಲಾರೆನ್ಸ್ ಹೋಮ್ಸ್) ಎಲ್ಲ ಒಟ್ಟಾಗಿ ಹಿಪ್-ಹಾಪ್ ಜೋಡಿ ಡಿಜೆ ಜಾಝಿ ಜೆಫ್ ಮತ್ತು ದಿ ಫ್ರೆಶ್ ಪ್ರಿನ್ಸ್‌ ಅನ್ನು ಪ್ರಾರಂಭಿಸಿದರು . ಈ ಮೂವರ ತಂಡವು ತಮ್ಮ ವಿನೋದಶೀಲ ಪ್ರದರ್ಶನಗಳಿಂದ, ಆಕಾಶವಾಣಿ- ಪ್ರಿಯವಾಗಿರುವ ಹಾಡುಗಳಿಂದ ಜನಪ್ರಿಯವಾಯಿತು, ಅದರಲ್ಲಿ "ಪೇರೆಂಟ್ಸ್ ಜಸ್ಟ್ ಡೋಂಟ್ ಅಂಡರ್ಸ್ಟ್ಯಾಂಡ್" ಮತ್ತು "ಸಮ್ಮರ್‌ ಟೈಮ್‌ ಪ್ರಮುಖವಾದವು. ರ್ಯಾಪ್ ವಿಭಾಗದಲ್ಲಿ (1988) ಅವರ ಮೊಟ್ಟ ಮೊದಲ ಗ್ರ್ಯಾಮ್ಮಿ ಅವಾರ್ಡ್ ಗೆದ್ದಾಗ ಅವರು ಹಲವಾರು ವಿಮರ್ಶಾತ್ಮಕ ಹೇಳಿಕೆಗಳನ್ನು ಪಡೆದುಕೊಂಡರು. 1991ರಲ್ಲಿ ಪ್ರಖ್ಯಾತ ತಾರೆಯರ ಗುಂಪಿನ ಗಲ್ಫ್ ವಾರ್ ಹಾಡಿಗೆ "ವಾಯ್ಸಸ್ ದಟ್ ಕೇರ್", ಎಂಬ ಒಂದು ಸಾಲು ಅವರದ್ದಾಗಿತ್ತು. ಸ್ಮಿತ್ ಅವರು ತಮ್ಮ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಹಣವನ್ನು ದುಂದುವ್ಯಚ್ಛ ಮಾಡುತ್ತಿದ್ದರು ಮತ್ತು ಆದಾಯ ತೆರಿಗೆ ಪಾವತಿಸುತ್ತಿರಲಿಲ್ಲ. ದ ಇಂಟರ್ನಲ್ ರೆವೆನ್ಯು ಸರ್ವೀಸ್ ಸ್ಮಿತ್ ಅವರ ವಿರುದ್ಧ $2.8 ಮಿಲಿಯನ್ ತೆರಿಗೆ ಹೇರಿತು, ಅವರ ಸ್ವತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿತು, ಹಾಗೂ ಅವರ ಆದಾಯವನ್ನು ವ್ಯವಸ್ಥಿತಗೊಳಿಸಿತು.

1993ರಲ್ಲಿ ವಿಲ್ ಸ್ಮಿತ್

1990ರಲ್ಲಿ ಸ್ಮಿತ್ ಅವರು ಪೂರ್ತಿ ನಷ್ಟದಲ್ಲಿದಾಗ ,NBCದೂರದರ್ಶನ ವಾಹಿನಿಯು ಒಂದು ಹಾಸ್ಯ ದಾರವಾಹಿ ದಿ ಫ್ರೆಶ್ ಪ್ರಿನ್ಸ್ ಆಫ್ ಬೆಲ್-ಏರ್ ನಿರ್ಮಾಣಕ್ಕಾಗಿ ಅವರಜೊತೆ ಒಪ್ಪಂದ ಮಾಡಿಕೊಂಡಿತು. ಆ ಕಾರ್ಯಕ್ರಮವು ಬಹಳ ಸಫಲಗೊಂಡಿತು ಮತ್ತು ಅದರಿಂದ ನಟನಾ ವೃತ್ತಿಯು ಪ್ರಾರಂಭಗೊಂಡಿತು. ಸ್ಮಿತ್ "ಪ್ರಪಂಚದ ಅತಿದೊಡ್ಡ ಚಿತ್ರತಾರೆ" ಆಗಬೇಕೆಂಬ ಗುರಿ ಹಾಕಿಕೊಂಡರು, ಅದಕ್ಕಾಗಿ ಅವರು ಗಲ್ಲಾಪೆಟ್ಟಿಗೆಯ ಯಶಸ್ಸುಗಳ' ಸಾಮಾನ್ಯ ಲಕ್ಶಣಗಳನ್ನು ಅಧ್ಯಯನ ಮಾಡುತ್ತಿದ್ದರು.[೬] ಅವರು ದಿ ಫ್ರೆಶ್ ಪ್ರಿನ್ಸ್ ಆಫ್ ಬೆಲ್-ಏರ್ ನಲ್ಲಿ ಅಭಿನಯಿಸುತ್ತಿರುವಾಗಲೆ ಅವರ ಮೊದಲ ನಾಟಕೀಯ ಚಿತ್ರಸಿಕ್ಸ್ ಡಿಗ್ರೀ ಆಫ್ ಸೆಪರೇಶನ್ ಗಮನ ಸೆಳೆದದರೂ,ಸ್ಮಿತ್ ಅವರು ಹೆಸರುವಾಸಿಯಾಗಿದ್ದು ಸಹ ನಟಿಮಾರ್ಟಿನ್ ಲಾರೆನ್ಸ್‌ರೊಂದಿಗೆ ಬಡ್ಡಿ ಕಾಪ್ ಫಿಲ್ಮ್ ಬ್ಯಾಡ್ ಬಾಯ್ಸ್ (1995)ಗಳಲ್ಲಿನ ತಮ್ಮ ಪಾತ್ರಗಳಿಂದ .

ಪ್ರಮುಖ ಬೆಳವಣಿಗೆ, 1997–2000 ಬದಲಾಯಿಸಿ

ದಿ ಫ್ರೆಶ್ ಪ್ರಿನ್ಸ್ ಆಫ್ ಬೆಲ್-ಏರ್ ಮೇ 20,1996ರಲ್ಲಿ ಕೊನೆಗೊಂಡನಂತರ, ಸ್ಮಿತ್ ಅವರು ಬಹಳಶ್ಟು ಚಲನಚಿತ್ರಗಳಲ್ಲಿ ಅಭಿನಯಿಸುತ್ತಿರುವಾಗಲೆ ಏಕವ್ಯಕ್ತಿ ಸಂಗೀತ ವೃತ್ತಿಯಲ್ಲಿ ಯಶಸ್ಸನ್ನು ಕಂಡರು. ಮೊದಲ ಎರಡು ಚಲನಚಿತ್ರಗಳು ಅದ್ಧೂರಿ ಯಶಸ್ಸನ್ನು ಕಂಡವು: ಇಂಡಿಪೆಂಡೆನ್ಸ್ ಡೇ (1996), ಅದರಲ್ಲಿ ಅವರು ಅಂಜಿಕೆಯಿಲ್ಲದ ಮತ್ತು ಆತ್ಮವಿಶ್ವಾಸಹೊಂದಿದ ಪೈಲಟ್‍೬ನ ಪಾತ್ರ ನಿರ್ವಹಿಸಿದ್ದರು,ಮೆನ್ ಇನ್ ಬ್ಲ್ಯಾಕ್ (1997) ,ಅದರಲ್ಲಿ ಅವರು ಹಾಸ್ಯದ ಹಾಗು ಆತ್ಮವಿಶ್ವಾಸಹೊಂದಿದ ಏಜೆಂಟ್ Jನ ಪಾತ್ರ ಟಾಮಿ ಲೀ ಜೋನ್ಸ್' ಡೆಡ್ಪ್ಯಾನ್ ಏಜೆಂಟ್ K ಎದುರು ನಿರ್ವಹಿಸಿದ್ದರು. ಸ್ಮಿತ್ ಅವರ ಮೆನ್ ಇನ್ ಬ್ಲ್ಯಾಕ್ ನ ನಟನೆಯು ವಿಮರ್ಶಕರಿಂದ ಶ್ಲಾಘಿಸಲ್ಪಟ್ಟಿತು. ಮೊದಲಿಗೆ ಅವರು ಮೆನ್ ಇನ್ ಬ್ಲ್ಯಾಕ್ ನಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲು ನಿರಾಕರಿಸಿದ್ದರು, ಆದರೆ ಅವರ ಹೆಂಡತಿಜಡ ಪಿಂಕೆಟ್ ಸ್ಮಿತ್ ಅವರು ಪುಸಲಾಯಿಸಿ ಆ ಪಾತ್ರ ನಿರ್ವಹಿಸಲು ಒಪ್ಪಿಸಿದರು. ಈ ಎರಡು ಚಿತ್ರಗಳು ಸ್ಮಿತ್ ಅವರ ಹೆಸರನ್ನು ಒಬ್ಬ ನಂಬಲರ್ಹ ತಾರೆಯಾಗಿ ಸ್ಥಾಪಿಸಿದವು. 1998ರಲ್ಲಿ ಜೆನಿ ಹಾಕ್ಮನ್ ಅವರ ಜೊತೆ ಎನಿಮಿ ಅಫ್ ದಿ ಸ್ಟೇಟ್‌ ನಲ್ಲಿ ನಟಿಸಿದರು.[೧೦] ಸ್ಮಿತ್ ಅವರು ದಿ ಮ್ಯಾಟ್ರಿಕ್ಸ್ನಿಯೊನ ಪಾತ್ರವನ್ನು ವೈಲ್ಡ್ ವೈಲ್ಡ್ ವೆಸ್ಟ್ ಚಿತ್ರಒಪ್ಪಿಕೊಂಡಿದ್ದರಿಂದ ನಿರ್ವಹಿಸಲು ನಿರಾಕರಿದರು.ವೈಲ್ಡ್ ವೈಲ್ಡ್ ವೆಸ್ಟ್ ನ ಸೋಲಿನ ನಂತರವು ಸ್ಮಿತ್ ಅವರು ಅವರ ನಿರ್ಣಯದಿಂದ ಅವರಿಗೆ ಏನು ವಿಷಾದವಿಲ್ಲವೆಂದು ಹೇಳಿ, ಕೀನು ರೀವಿಸ್'ನವರ ನಿಯೊ ಪಾತ್ರದ ಅಭಿನಯವು ಸ್ಮಿತ್ ಅವರ ಅಭಿನಯಕಿಂತ ಅಧ್ಬುತವಾಗಿತ್ತು ಎಂದು ಹೇಳಿದರು. ಸ್ಮಿತ್ ಅವರು ಮುಂದೆ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಕಂಡ ಹಲವು ಚಲಚಿತ್ರಗಳಲ್ಲಿ ಮುಖ್ಯ ಪಾತ್ರಗಳನ್ನು ಗಳಿಸಿದರು ಅದರಲ್ಲಿ ಮೆನ್ ಇನ್ ಬ್ಲ್ಯಾಕ್ II , ಬ್ಯಾಡ್ ಬಾಯ್ಸ್II , ಹಿಚ್ , ಮತ್ತು ಐ, ರೋಬೋಟ್ .

ಸ್ಮಿತ್ ಅವರು ತೊಂಬತ್ತರ ಉದ್ದಕ್ಕು ಬಹಳಶ್ಟು ಉತ್ತಮ ಗೀತೆಗಳನ್ನು ಬಿಡುಗಡೆಗೊಳಿಸಿದರು,ಅದರಲ್ಲಿ ಅನೇಕ ಗೀತೆಗಳು ಅವರ ಇತ್ತೀಚೆಗೆ ಬಿಡುಗಡೆಗೊಂಡ ಚಿತ್ರಗಳದ್ದಾಗಿತ್ತು. ಅದರಲ್ಲಿ ಹೆಸರುವಾಸಿ ಯಾದ ಪ್ರಮುಖ ಗೀತೆಗಳೆಂದರೆ "ಮೆನ್ ಇನ್ ಬ್ಲ್ಯಾಕ್", "ಗೆಟ್ಟಿನ್' ಜಿಗ್ಗಿ ವಿಟ್ ಇಟ್" (ಅದು ಜಿಗ್ಗಿ ಯನ್ನು 1998ರಲ್ಲಿ ಬಹಳ ಜನಪ್ರಿಯವಾಗಿಸಿತು ), ಮತ್ತು "ಜಸ್ಟ್ ದಿ ಟು ಆಫ್ ಅಸ್", ಅವರ ಮಗನಿಗೆ ಒಂದು ಮಮತೆಯ ಸಂದೇಶವಾಗಿತ್ತು . ಅವರ ಮೊದಲ ಎರಡು ಏಕವ್ಯಕ್ತಿ ಆಲ್ಬಮ್‌ಗಳಾದ ಬಿಗ್ ವಿಲ್ಲೀ ಸ್ಟೈಲ್ (1997) ಮತ್ತು ವಿಲ್ಲೇನ್ನಿಯಮ್ (1999)ಗಳು ಮಲ್ಟಿ-ಪ್ಲಾಟಿನಂಗೆ ಹೋದವು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು, 2001 ರಿಂದ ವರ್ತಮಾನದ ವರೆಗೆ ಬದಲಾಯಿಸಿ

2001ರಲ್ಲಿ ಸ್ಮಿತ್ ಅವರ ಅಲಿ ಚಿತ್ರದ, ಉತ್ತಮ ನಟ ಅಕಾಡೆಮಿ ಅವಾರ್ಡ್‌ಗೆ ನಾಮನಿರ್ದೇಶಿತಗೊಂಡಿತು, ಅದರಲ್ಲಿ ಅವರು ಕ್ಯಾಸ್ಸಿಯಸ್ ಕ್ಲೆ ಎಂದು ಹೆಸರುವಾಸಿಯಾದ ಬಾಕ್ಸರ್ ಮೊಹಮ್ಮದ್ ಅಲಿ, ಅವರ ಪಾತ್ರ ನಿರ್ವಹಿಸಿದ್ದರು. ಸ್ಮಿತ್ ಅವರನ್ನು ಅವರ ಇನ್ನೊಂದು ನಿಜ-ಜೀವನದ ಚಿತ್ರ ದಿ ಪರ್ಸೂಟ್ ಆಫ್ ಹ್ಯಾಪಿನೆಸ್ ಗಾಗಿ, ಆಸ್ಕರ್ನ ಉತ್ತಮ ನಟ ನೇಮಿಸಲಾಯಿತು, ಅದರಲ್ಲಿ ಅವರು rags-to-riches ಕಥೆಯ ಕ್ರಿಸ್ ಗಾರ್ಡ್ನರ್ನ ಪಾತ್ರ ನಿರ್ವಹಿಸಿದ್ದಾರೆ.

2002ರಲ್ಲಿ ಸ್ಮಿತ್ ಅವರ ಬಿಡುಗಡೆಗೊಂಡ ಮೂರನೆ ಗಾನ ಸುರಳಿ ಕೊಲಂಬಿಯ ರೆಕಾರ್ಡ್ಸ್, ಬಾರ್ನ್ ಟು ರೇನ್ ,ಅವರ ಹಳೆಯ ಪ್ರಯತ್ನಕ್ಕೆ ಹೋಲಿಸಿದರೆ ಮಾರುಕಟ್ಟೆಯಲ್ಲಿ ಸೋಲುಕಂಡವು, ಮತ್ತು ಗ್ರೇಟೆಸ್ಟ್ ಹಿಟ್ಸ್ ಬಿಡುಗಡೆಯ ಜಾಹೀರಾತು ಮಾಡದಿರುವುದರಿಂದ,ಅವರನ್ನು ಲೇಬಲ್‌ನಿಂದ ತೆಗೆಯಲ್ಪಟ್ಟಿತು. ಮುಂದೆ ಅವರು ಇಂಟರ್‌ಸ್ಕೋಪ್ ರೆಕಾರ್ಡ್ಸ್ ಜೊತೆ ಧ್ವನಿಮುದ್ರಣ ಒಪ್ಪಂದ ಮಾಡಿಕೊಂಡರು. ಒಂದು ವರ್ಷದ ನಂತರ, ಸ್ಮಿತ್ ಮತ್ತು ಅವರ ಹೆಂಡತಿ ಜಡ ಪಿಂಕೆಟ್ ಸ್ಮಿತ್ UPN ( ನಂತರದಲ್ಲಿ CW) ಹಾಸ್ಯ ದಾರಾವಾಹಿ ಆಲ್ ಆಫ್ ಅಸ್ ಸೃಷ್ಟಿಸಿದರು, ಅದು ಅವರ ಜೀವನದ ಮೇಲೆ ಅಧಾರಿತವಾಗಿತ್ತು ಆ ಕಾರ್ಯಕ್ರಮವು 2003ರ ಸೆಪ್ಟಂಬರ್‌ನಲ್ಲಿ UPN ನಲ್ಲಿ ಬಿತ್ತರಗೊಂಡಿತು ಮತ್ತು ದ CW ವರ್ಗವಾಗುವ ಮುಂಚೆ ಮೂರು ಋತುಗಳವರೆಗೆ ಬಿತ್ತರಗೊಂಡಿತು. CW 2007ರ ಮೇ ರಲ್ಲಿ ಆಲ್ ಆಫ್ ಅಸ್ ಅನ್ನು ರದ್ದುಗೊಳಿಸಿತು. ಸ್ಮಿತ್ ಅವರು ತಾವಾಗಿಯೇ ಜೆರ್ಸಿ ಗರ್ಲ್ ನಲ್ಲಿ ಕಾಣಿಕೊಂಡರು ಮತ್ತು ಅದರಲ್ಲಿ ಸೈಲೆಂಟ್ ಬಾಬ್ ಸಂಭಾಷಣೆ ನೀಡಿದರು ಅದು ಕೆವಿನ್ ಸ್ಮಿತ್‌ನ ಎಲ್ಲ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಮುಖ ಪಾತ್ರದ ಸನ್ನಿವೇಶವು "ವಿಲ್ ಸ್ಮಿತ್ ಬರೀ ಒಬ್ಬ ರಾಪ್ಪರ್ " ಎಂಬ ಹೇಳಿಕೆಗಾಗಿಯಾಗಿತ್ತು.

2005ರಲ್ಲಿ, ಸ್ಮಿತ್ ಅವರು ಇಪ್ಪತ್ನಾಲ್ಕು ಗಂಟೆಯಲ್ಲಿ ಮೂರು ಪ್ರಿಮಿಯರ್ ಗಳಲ್ಲಿ ಭಾಗವಹಿಸಿದಕ್ಕೆ Guinness Book of World Recordsನಲ್ಲಿ ನಮೂದಿಸಲಾಯಿತು.[೧೧] ಜುಲೈ 2, 2005ರಂದು ಸೆನಾನ ತಾಯ್ನೆಲ ಫಿಲಡೆಲ್ಫಿಯಾದಲ್ಲಿ ಭಾರೀ ಸಂಖ್ಯೆಯ ಜನರು ಸೇರಿದ್ದ ಒಂದು ಪ್ರದರ್ಶನ ಲೈವ್ 8 ಕಾರ್ನ್ಸರ್ಟ್‌ನಲ್ಲಿ ನಿರೂಪಕನಾಗಿ ಕಾರ್ಯ ನಿರ್ವಹಿಸಿದ, ಜೊತೆಗೆ DJ ಜಾಝಿ ಜೆಫ್‌ರ ಜೊತೆಗೆ ಕೂಡಾ ಒಂದು ಪ್ರದರ್ಶನದಲ್ಲಿ ಭಾಗವಹಿಸಿದ್ದನು. ಈ ಅವಧಿಯಲ್ಲಿ, ಸ್ಮಿತ್ ಅವರು ತಮ್ಮ ನಾಲ್ಕನೆ ಸ್ಟುಡಿಯೊ ಆಲ್ಬಮ್ ಯಶಸ್ಸನ್ನು ಕಂಡ Lost & Found ಬಿಡುಗಡೆಗೊಳಿಸಿದರು. "ಸ್ವಿಚ್", ಮುಖ್ಯವಾಹಿನಿಯೊಂದರಿಂದ ಆಕರ್ಷಿತವಾದ ಈ ಆಲ್ಬಮ್ ಏಕವ್ಯಕ್ತಿ ಪ್ರದರ್ಶನವಾಗಿ ಭಾರಿ ಜಯಗಳಿಸಿತು. ಈ ಸಿಂಗಲ್‌ನಿಂದ ಹಿಪ್-ಹಾಪ್‌ನಲ್ಲಿ ಅಗ್ರಸ್ಥಾನ ತಂದುಕೊಟ್ಟು ಕೆಲವು ತಿಂಗಳುಗಳ ಕಾಲ ಪಟ್ಟಿಯ ಮೊದಲ ಸ್ಥಾನದಲ್ಲಿತ್ತು. "ಸ್ವಿಚ್‌"ನಲ್ಲಿನ ನಿರ್ವಹಣೆಗಾಗಿ ಸ್ಮಿತ್ ಅವರು Nickelodeonನಲ್ಲಿ 2005ರ ಕಿಡ್ಸ್ ಚಾಯ್ಸ್ ಅವಾರ್ಡ್ಸ್ ಪಡೆದುಕೊಂಡರು, ಜೊತೆಗೆ 2005ರಲ್ಲಿ BET ಅವಾರ್ಡ್ಸ್ ಕೂಡಾ ಸಿಕ್ಕಿತು.

ಅವರು NBA ಅಂತಿಮಸುತ್ತಿನ(ಸ್ಯಾನ್ ಆಂಟೋನಿಯೋ vs. ಡೆಟ್ರಾಯ್ಟ್) ಎರಡನೇ ಆಟದಲ್ಲಿ "ಸ್ವಿಚ್" ಆಲ್ಬಮ್‌ನ ಪ್ರಚಾರಕ್ಕಾಗಿ ಭಾಗವಹಿಸಿದ್ದರು, ಸ್ಮಿತ್ ಅವರು ಭಾರತಕ್ಕೆ ಭೇಟಿನೀಡಿದಾಗ, "Indian Idol" ಕಾರ್ಯಕ್ರಮಕ್ಕೆ ವಿಶೇಷ ಭೇಟಿ ನೀಡಿದರು.

ಅವರು ಕಿರುತೆರೆಯ ಧಾರಾವಾಹಿ ಇಟ್ ಟೇಕ್ಸ್ ಎ ಥೀಫ್ ನ ರಿಮೇಕ್ ಚಿತ್ರದಲ್ಲಿ ನಟಿಸಲು ತಯಾರಿ ನಡೆಸುತ್ತಿದ್ದಾರೆ.[೧೨]

2008ರಲ್ಲಿ ಸ್ಮಿತ್

ಡಿಸೆಂಬರ್ 10, 2007ರಂದು, ಹಾಲಿವುಡ್ ಬೋಲಿವರ್ಡ್‌ನಲ್ಲಿ ಗ್ರಾಮನ್ ಚೈನೀಸ್ ಥಿಯೇಟರ್ ಹತ್ತಿರ ಸ್ಮಿತ್ ಗುರುತಿಸಲ್ಪಟ್ಟರು. ಸ್ಮಿತ್ ಅವರು ವಿಶ್ವದ ಪರಿಚಿತ ಥಿಯೇಟರ್‌ನ ಮುಂಭಾಗದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ತಮ್ಮ ಕೈ ಮತ್ತು ಪಾದದ ಗುರುತಿನ ಮುದ್ರೆ ಒತ್ತಿದರು.[೧೩] ಆ ತಿಂಗಳ ನಂತರದಲ್ಲಿ, ಸ್ಮಿಥ್ ಅಭಿನಯಿಸಿದ ಚಿತ್ರ I Am Legend ಡಿಸೆಂಬರ್ 14, 2007ರಂದು ತೆರೆಕಂಡಿತು, ಸಕಾರಾತ್ಮಕ ಪ್ರತಿಕ್ರಿಯೆಗಳಿಂದಾಗಿ,[೧೪] ಯುನೈಟೆಡ್ ಸ್ಟೇಟ್ಸ್‌ ಆ ಚಿತ್ರದ ಬಿಡುಗಡೆಯು ಡಿಸೆಂಬರ್‌ನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.[೧೫] ಸ್ಮಿತ್ ತಾನೇ ಹೇಳುವಂತೆ ಆತ ಈ ಚಿತ್ರವನ್ನು "ಅಗ್ರೆಸ್ಸಿವ್‌ಲಿ ಯುನ್ನೀಕ್" ಎಂದು ಹೊಗಳಿದ್ದಾರೆ. ಒಬ್ಬ ವಿಮರ್ಶಕ ಹೇಳುವಂತೆ ಚಿತ್ರದ ಆರ್ಥಿಕ ಯಶಸ್ಸು "ಹಾಲಿವುಡ್‌ನ ಗಲ್ಲಾಪೆಟ್ಟಿಗೆಯ ಮೊದಲ ಸ್ಥಾನದಲ್ಲಿ ಗಟ್ಟಿಯಾಗಿ ತಳವೂರುತ್ತದೆ"[೧೬] ಡಿಸೆಂಬರ್ 1, 2008ರಲ್ಲಿ, TV ಗೈಡ್ ವರದಿಯಲ್ಲಿ ಸ್ಮಿತ್ ಅಮೇರಿಕಾದ ಅತ್ಯಂತ ಮೋಡಿಮಾಡಿದ 2008ರ ಮೊದಲ ಹತ್ತು ಜನರಲ್ಲಿ ಒಬ್ಬ ಎಂದಿದ್ದಾನೆ, ಆ ಬಾರ್ಬರಾ ವಾಲ್ಟರ್ಸ್ ABC ವಿಶೇಷ ಕಾರ್ಯಕ್ರಮ ಡಿಸೆಂಬರ್ 4, 2008ರಂದು ಪ್ರಸಾರವಾಯಿತು.[೧೭]

ಪ್ರಸ್ತುತ ಸ್ಮಿತ್ The Last Pharaoh ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ, ಅದರಲ್ಲಿ ಅವರುin ಟಹರ್ಕಾ ಪಾತ್ರವನ್ನು ನಿಭಾಯಿಸುತ್ತಾರೆ.[೧೮]

ಪ್ರೆಸಿಡೆಂಟ್ ಬರಾಕ್ ಒಬಾಮ ಅವರು ಎಂದಾದರೂ ತಮ್ಮ ಜೀವನದ ಚಿತ್ರ ನಿರ್ಮಿಸುವುದಾದರೆ ಅದರ ಪಾತ್ರದಲ್ಲಿ ಸ್ಮಿತ್‌ರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಏಕೆಂದರೆ "ಅವರಿಗೆ ಕಿವಿಗಳಿವೆ" ಎಂದು ಹೇಳಿದ್ದಾರೆ. ಒಬಾಮ ಮತ್ತು ಸ್ಮಿತ್ ಇಬ್ಬರೂ 2008ರ ಚುನಾವಣೆಯ ಬಗ್ಗೆ ಚಲನಚಿತ್ರ ನಿರ್ಮಿಸುವ ಬಗ್ಗೆ ಚರ್ಚಿಸಿದ್ದಾರೆ, ಆದರೆ ಇದು ಒಬಾಮ ಅದ್ಯಕ್ಷ ಸ್ಥಾನದಲ್ಲಿರುವವರೆಗೂ ಸಾಧ್ಯವಿಲ್ಲ.[೧೯]

ವೈಯಕ್ತಿಕ ಜೀವನ ಬದಲಾಯಿಸಿ

ಸ್ಮಿತ್‌ ಅವರನ್ನು ಅವರ ತಂದೆ ತಾಯಿ, ವಿಲ್ಲರ್ಡ್ ಮತ್ತು ಕ್ಯಾರೋಲಿನ್ ವೆಸ್ಟ್ ಫಿಲಡೆಲ್ಫಿಯದಲ್ಲಿ ಬೆಳೆಸಿದರು. ಸ್ಮಿತ್ ತನ್ನ ತಂದೆಯು ಮೂರು ಮಕ್ಕಳನ್ನು ನೋಡಿಕೊಂಡಿದುದರ ಬಗ್ಗೆ ಮಾಡಿದ ತ್ಯಾಗಗಳ ಬಗ್ಗೆ ಹೀಗೆ ಹೇಳುತ್ತಾರೆ: " ನನ್ನ ತಂದೆಯು ತನ್ನ ಎಲ್ಲ ಮಕ್ಕಳಿಗೆ ಊಟ ಮಾಡಿಸುವುದು ಹಾಗೂ ಬಟ್ಟೆಹಾಕುವುದರ ಜೊತೆಯಲ್ಲಿ ಅವರು ನಮಗೋಸ್ಕರ ತಮ್ಮ ಸಮಯವನ್ನು ನೀಡುವುದರ ಜೊತೆಗೆ ಎಲ್ಲವನ್ನೂ ಅವರು ನಿರ್ವಹಿಸುತ್ತಿದ್ದ ರೀತಿಯನ್ನು ನಾನು ನೋಡಿದ್ದೇನೆ"[೨೦]. ಸ್ಮಿತ್ ಅವರು ಶಿರೀ ಝಾಂಪಿನೊ ಅವರನ್ನು 1992 ರಲ್ಲಿ ವಿವಾಹವಾದರು. ಅವರು "ಟ್ರೆ" ಎಂದು ಕರೆಯಲ್ಪಡುತ್ತಿದ್ದ ವಿಲ್ಲರ್ಡ್ ಕ್ರಿಸ್ಟೋಫರ್ ಅಮಿಥ್ III ಹೆಸರಿನ ಒಬ್ಬ ಮಗನನ್ನು ಹೊಂದಿದ್ದರು. ಆದರೆ 1995ರಲ್ಲಿ ವಿಚ್ಛೇದನ ಪಡೆದರು ಟ್ರೆ ಅವರ ತಂದೆಯ 1998ರ ಸಂಗೀತದ ವೀಡಿಯೋ "Just The Two Of Us"ನಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಮಿತ್ 1997ರಲ್ಲಿ ನಟಿಜಾಡ ಪಿಂಕೆಟ್ ಅವರನ್ನು ವಿವಾಹವಾದರು ಅವರಿಬ್ಬರಿಗೆ ಎರಡು ಮಕ್ಕಳಿದ್ದು: ಜಡೆನ್ ಕ್ರಿಸ್ಟೋಫರ್ ಸೈರ್ (ಹುಟ್ಟಿದ್ದು 1998), ಅವನು ತನ್ನ ತಂದೆಯ ಜೊತೆಯಲ್ಲಿ ದ ಪರ್ಸ್ಯೂಟ್ ಆಫ್ ಹ್ಯಾಪಿನೆಸ್‌ ನಲ್ಲಿ ಅಭಿನಯಿಸಿದ್ದಾನೆ, ಮತ್ತು ಮಗಳು ವಿಲ್ಲೋ ಕ್ಯಾಮಿಲ್ಲೆ ರೀನ್(ಹುಟ್ಟಿದ್ದು 2000), ಇವಳು ಕೂಡಾ ಸ್ಮಿತ್ ಅವರ ಮಗಳಾಗಿ "ಐ ಯಾಮ್ ಲಿಜೆಂಡ್‌"ನಲ್ಲಿ ಕಾಣಿಸಿಕೊಂಡಿದ್ದಾಳೆ . ಅವರು ತಮ್ಮ ಸೋದರನ ಜೊತೆ Treyball Development Inc.,[೨೧] ಹೊಂದಿದ್ದಾರೆ, Beverly Hills-ಮೂಲದ ಕಂಪನಿಯಾಗಿದ್ದು ಮೊದಲ ಮಗನ ಹೆಸರಿಡಲಾಗಿದೆ.

ಸ್ಮಿತ್ ಅವರು ಸತತವಾಗಿ Fortune Magazineನ "Richest 40" ಪಟ್ಟಿಯಲ್ಲಿದ್ದಾರೆ, ಅಮೇರಿಕದ ನಲವತ್ತು ವಯಸ್ಸಿನೊಳಗಿನ ನಲವತ್ತು ಅತಿ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಸ್ಮಿತ್ ಮತ್ತು ಅವರ ಕುಟುಂಬವು ಮಿಯಾಮಿ ಬೀಚ್, ಫ್ಲೋರಿಡಾಸ್ಟಾರ್ ಐಲ್ಯಾಂಡ್‌ನಲ್ಲಿ ಹಾಗೂ ಲಾಸ್ ಏಂಜಲೀಸ್, ಸ್ಟಾಕ್‌ಹೋಮ್, ಸ್ವೀಡನ್[೨೨] ಮತ್ತು ಫಿಲಡೆಲ್ಫಿಯಾದಲ್ಲಿ ಕೂಡಾ ವಾಸಿಸುತ್ತಾರೆ.

ಸ್ಮಿತ್ ಅವರು ಡೆಮೊಕ್ರಾಟ್‌ಬರಾಕ್ ಒಬಾಮಾ ರಾಷ್ಟ್ರಪತಿ ಚುನಾವಣೆ ಪ್ರಚಾರಕ್ಕಾಗಿ $4,600 ಹಣವನ್ನು ದಾನಮಾಡಿದ್ದಾರೆ [೨೩]

ಸ್ಮಿಥ್ ಅವರ ಹೇಳಿಕೆಪ್ರಕಾರ ಅವರು ,ವೈಜ್ಞಾನಿಕ ಧರ್ಮ ಒಳಗೊಂಡಂತೆ ವಿವಿದ ಧರ್ಮಗಳನ್ನು ವ್ಯಾಸಂಗ ಮಾಡಿದ್ದಾರೆ, ಮತ್ತು ವೈಜ್ಞಾನಿಕ ಧರ್ಮ ಮತ್ತು ನಂಬಿಕೆಯ ಬಗ್ಗೆ ಬಹಳ ಪ್ರಶಂಸನೀಯ ಮಾತನ್ನಾಡಿದ್ದಾರೆ. ವೈಜ್ಞಾನಿಕ ಧರ್ಮದ ಬಗ್ಗೆ ಪ್ರಶಂಸಿದರೂ, ಸ್ಮಿತ್ ಹೇಳುವಂತೆ " ನಾನು ವೈಜ್ಞಾನಿಕ ಧರ್ಮದ ಬಗ್ಗೆ ಮತ್ತು ಅದರ ಮೇಧಾವಿತನದ ಹಾಗೂ ಕ್ರಾಂತಿಯ ಹಾಗೂ ಅದರಲ್ಲಿನ ಧರ್ಮಶ್ರದ್ಧೆ ಇಲ್ಲದಿರುವ ಬಹಳಷ್ಟು ಆಲೋಚನೆಗಳು ನನ್ನಲ್ಲಿವೆ"[೨೪][೨೫] ಮತ್ತು " ತೊಂಬತ್ತೆಂಟು ಪ್ರತಿಶತ ಅದರ ತತ್ವಗಳು ಬೈಬಲ್‌ನ ತತ್ವಗಳನ್ನು ಹೋಲುತ್ತವೆ...... ನಾನು ಕೆಲವರು ಬಳಸುವ ಆತ್ಮ ಶಬ್ಧದ ಅರ್ಥ 'ಥೇಟನ್' ಎಂದು ನಾನು ಯೋಚಿಸುವುದಿಲ್ಲ ಅದಕ್ಕೆ ಕೂಡಾ ಬೇರೆ ಒಂದು ಅರ್ಥವಿದೆ."[೨೬] ಅವರು Church of Scientologyಯನ್ನು ಸೇರಿಕೊಂಡಿಲ್ಲವೆಂದು ಸ್ಪಷ್ಟಪಡಿಸಿ "ನಾನು ಒಬ್ಬ ಕ್ರಿಶ್ಚಿಯನ್. ನಾನು ಎಲ್ಲ ಧರ್ಮದ ವಿಧ್ಯಾರ್ಥಿ, ಮತ್ತು ನಾನು ಎಲ್ಲಾ ಜನರನ್ನು ಮತ್ತು ಎಲ್ಲಾ ದಾರಿಯನ್ನು ಗೌರವಿಸುತ್ತೇನೆ "ಎಂದು ಹೇಳಿದ್ದಾರೆ .[೨೭]

ಅದಾದನಂತರ ಅವರ ಹೆಂಡತಿ ಜಾಡ, Collateral ಎಂಬ ಚಲನಚಿತ್ರವನ್ನು ಕ್ರೂಸ್‌ನ ಜೊತೆ 2004ರಲ್ಲಿ ನಿರ್ಮಿಸಿದರು, ಆ ಜೋಡಿಯು USD$20,000 ಮೊತ್ತವನ್ನು HELP ಎಂದು ಕರೆಯಲ್ಪಡುವ ಹಾಲಿವುಡ್ ಎಜುಕೇಶನ್ ಅಂಡ್ ಲಿಟೆರಸಿ ಪ್ರೋಗ್ರಾಮ್, ಒಂದು ವೈಜ್ಞಾನಿಕ ಧರ್ಮದ ಅರಿವು ಮೂಡಿಸುವ ಪ್ರಚಾರ ಕಾರ್ಯಕ್ರಮಕ್ಕಾಗಿ ದಾನ ಮಾಡಿತು, ಅದು ವೈಜ್ಞಾನಿಕ ಧರ್ಮದ ಹೋಮ್ ಸ್ಕೂಲಿಂಗ್ ಸಿಸ್ಟಂನ ಅಡಿಪಾಯ .[೨೮]

ಧ್ವನಿಮುದ್ರಿಕೆ ಪಟ್ಟಿ ಬದಲಾಯಿಸಿ

ಚಲನಚಿತ್ರಗಳ ಪಟ್ಟಿ ಬದಲಾಯಿಸಿ

ವರ್ಷಚಿತ್ರಪಾತ್ರSalary (US$)[೨೯][verification needed]ಟಿಪ್ಪಣಿಗಳು
1986ಸ್ಯಾಟರ್ಡೇ ಮಾರ್ನಿಂಗ್ ವೀಡಿಯೋಸ್ನಿರೂಪಕTV
ABC ಆಫ್ಟರ್ ಸ್ಕೂಲ್ ಸ್ಪೆಶಲ್ - "ದ ಪರ್ಫೆಕ್ಟ್ ಡೇಟ್"HawkerTV
ದ ಫ್ರೆಶ್ ಪ್ರಿನ್ಸ್ ಆಫ್ ಬೆಲ್-ಏರ್ವಿಲಿಯಮ್ "ವಿಲ್" ಸ್ಮಿತ್TV (1990-1996)
2007ಹೂವುಪ್ರೆಶ್ ಪ್ರಿನ್ಸ್TV, ಕ್ಯಾಮಿಯೋ
ವೇರ್ ದ ಡೇ ಟೇಕ್ಸ್ ಯುಮನ್ನಿ50,000
1993ಮೇಡ್ ಇನ್ ಅಮೇರಿಕಾಟೀ ಕೇಕ್ ವಾಲ್ಟರ್ಸ್100,000
ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಶನ್ಪಾಲ್500,000
1995ಬ್ಯಾಡ್ ಬಾಯ್ಸ್ಡಿಟೆಕ್ಟಿವ್ ಮೈಕ್ ಲೋರಿ2,000,000
1996ಇಂಡಿಪೆಂಡೆನ್ಸ್ ಡೇಕ್ಯಾಪ್ಟನ್ ಸ್ಟೀವನ್ "ಸ್ಟೀವ್" ಹಿಲ್ಲರ್, USMC5,000,000MTV ಮೂವೀ ಪ್ರಶಸ್ತಿ‌ (ಅತ್ಯುತ್ತಮ ಚುಂಬನ)
1997ಮೆನ್ ಇನ್ ಬ್ಲ್ಯಾಕ್ಜೇಮ್ಸ್ ಡರ್ರೆಲ್ ಎಡ್ವರ್ಡ್ಸ್ / ಏಜೆಂತ್ J5,000,000ಎಮ್‌ಟಿವಿ ಮೂವೀ ಪ್ರಶಸ್ತಿ‌ (ಅತ್ಯುತ್ತಮ ಸೆಣಸಾಟ)
ಚಿತ್ರದ ಉತ್ತಮ ಹಾಡಿಗಾಗಿ MTV ಚಲನಚಿತ್ರ ಪ್ರಶಸ್ತಿ
1998ಎನಿಮಿ ಆಫ್ ದ ಸ್ಟೇಟ್ರಾಬರ್ಟ್ ಕ್ಲೇಯಾನ್ ಡೀನ್14,000,000ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
1999ಟೊರೆನ್ಸ್ ರೈಸಸ್ಕಿರುಪಾತ್ರ
ವೈಲ್ಡ್ ವೈಲ್ಡ್ ವೆಸ್ಟ್ಕ್ಯಾಪ್ಟನ್ ಜೇಮ್ಸ್ "ಜಿಮ್" ವೆಸ್ಟ್7,000,000
2000ವೆಲ್‌ಕಮ್ ಟು ಹಾಲಿವುಡ್ತಮ್ಮದೇ ನಿಜಜೀವನದ ಪಾತ್ರ
The Legend of Bagger VanceBagger Vance10,000,000ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
2001ಅಲಿಮೊಹಮ್ಮದ್ ಅಲಿ20,000,000ನಾಮನಿರ್ದೇಶಿತ – ಅಕಾಡೆಮಿ ಪ್ರಶಸ್ತಿ‌ (ಅತ್ಯುತ್ತಮ ನಟ)
ನಾಮನಿರ್ದೇಶಿತ — ಬ್ರಾಡ್‍ಕಾಸ್ಟ್ ಚಲನಚಿತ್ರದ ವಿಮರ್ಶಕರ ಸಂಘದ ಉತ್ತಮ ನಟ ಪ್ರಶಸ್ತಿ
| ನಾಮನಿರ್ದೇಶಿತ – ಗೋಲ್ಡನ್‌ ಗ್ಲೋಬ್‌ (ಅತ್ಯುತ್ತಮ ನಟ) – ಮೋಷನ್‌ ಪಿಕ್ಚರ್‌ ಡ್ರಾಮಾ
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
2007ಮೆನ್ ಇನ್ ಬ್ಲ್ಯಾಕ್ IIಜೇಮ್ಸ್ ಡಾರೆಲ್/ ಏಜೆಂಟ್ J20,000,000
+ 10% of the gross
ಉತ್ತಮನಟನೆಗೆ ಬೆಟ್ ಪ್ರಶಸ್ತಿ
ನಾಮನಿರ್ದೇಶಿತ — ಉತ್ತಮ ನಟನೆಗೆ ಬ್ಲ್ಯಾಕ್ ರೀಲ್ ಪ್ರಶಸ್ತಿ
ಗರ್ಲ್ ಫ್ರೆಂಡ್ ಬೈB2Kತಮ್ಮದೇ ನಿಜಜೀವನದ ಪಾತ್ರಸಂಗೀತ ವಿಡಿಯೊ
2003ಬ್ಯಾಡ್‌ ಬಾಯ್ಸ್‌ IIಡಿಟೆಕ್ಟಿವ್ ಮೈಕ್ ಲೋರಿ20,000,000
+ 20% of the gross
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
2004ಎ ಕ್ಲೋಸರ್ ವಾಕ್ನಿರೂಪಕ/ವಿವರಣೆಕಾರಡಾಕ್ಯುಮೆಂಟರಿ
ಜೆರ್ಸಿ ಗರ್ಲ್ತಮ್ಮದೇ ನಿಜಜೀವನದ ಪಾತ್ರಅನ್‌ಕ್ರೆಡಿಟೆಡ್ ಕ್ಯಾಮಿಯೊ
ಅಮೆರಿಕನ್ ಚಾಪರ್ತಮ್ಮದೇ ನಿಜಜೀವನದ ಪಾತ್ರTV, ಕ್ಯಾಮಿಯೋ
I, ರೋಬೋಟ್ಡಿಟೆಕ್ಟಿವ್ ಡೆಲ್ ಸ್ಪೂನರ್28,000,000ನಿರ್ಮಾಪಕ
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
ಶಾರ್ಕ್ ಟೆಲ್

ಆಸ್ಕರ್ ಪ್ರಶಸ್ತಿಗಳು

15,000,000

ಕರ್ತರಿ/ಕರ್ಮಣಿ ಪ್ರಯೋಗದ ರೂಪ(ಕರ್ತೃವಿಗೂ ಕ್ರಿಯೆಗೂ ಸಂಬಂಧ ರೂಪಿಸುವ ಕ್ರಿಯಾರೂಪಗಳಲ್ಲಿ ಒಂದು)

2005There's a God on the Micಡಾಕ್ಯುಮೆಂಟರಿ
HitchAlex "Hitch" Hitchens20,000,000ನಿರ್ಮಾಪಕ
ನಾಮನಿರ್ದೇಶಿತ — ಉತ್ತಮನಟನೆಗೆ BET ಪ್ರಶಸ್ತಿ
ನಾಮನಿರ್ದೇಶಿತ — ಉತ್ತಮ ನಟನಾಗಿ ಬ್ಲ್ಯಾಕ್ ಮೂವಿ ಪ್ರಶಸ್ತಿ
ನಾಮನಿರ್ದೇಶಿತ — ಉತ್ತಮ ನಟನಾಗಿ ಬ್ಲ್ಯಾಕ್ ರೀಲ್ ಪ್ರಶಸ್ತಿ
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
2006ದ ಪರ್ಸ್ಯೂಟ್ ಆಫ್ ಹ್ಯಾಪಿನೆಸ್ಕ್ರಿಸ್ ಗಾರ್ಡ್‌ನರ್10,000,000
+ 20% of the gross
ನಿರ್ಮಾಪಕ

ನಾಮನಿರ್ದೇಶಿತ – ಅಕಾಡೆಮಿ ಪ್ರಶಸ್ತಿ‌ (ಅತ್ಯುತ್ತಮ ನಟ)
ನಾಮನಿರ್ದೇಶಿತ — ಉತ್ತಮ ನಟನಾಗಿ ಬ್ಲ್ಯಾಕ್ ರೀಲ್ ಪ್ರಶಸ್ತಿ
ನಾಮನಿರ್ದೇಶಿತ — ಬ್ರಾಡ್‍ಕಾಸ್ಟ್ ಚಲನಚಿತ್ರದ ವಿಮರ್ಶಕರ ಸಂಘದ ಉತ್ತಮ ನಟ ಪ್ರಶಸ್ತಿ
ನಾಮನಿರ್ದೇಶಿತ – ಶಿಕಾಗೊ ಫಿಲ್ಮ್‌ ಕ್ರಿಟಿಕ್ಸ್‌ ಅಸೋಷಿಯೇಷನ್‌ ಪ್ರಶಸ್ತಿ‌ (ಅತ್ಯುತ್ತಮ ಪೋಷಕ ನಟ)
| ನಾಮನಿರ್ದೇಶಿತ – ಗೋಲ್ಡನ್‌ ಗ್ಲೋಬ್‌ (ಅತ್ಯುತ್ತಮ ನಟ) – ಮೋಷನ್‌ ಪಿಕ್ಚರ್‌ ಡ್ರಾಮಾ
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ
ನಾಮನಿರ್ದೇಶಿತ – ಸ್ಕ್ರೀನ್‌ ಆಕ್ಟರ್ಸ್‌ ಗಿಲ್ಡ್‌ ಪ್ರಶಸ್ತಿ‌ (ಮುಖ್ಯ ಪಾತ್ರದಲ್ಲಿ ಪುರುಷ ವಿಭಾಗದಲ್ಲಿ ಅತ್ಯುತ್ತಮ ನಟನೆ)

2007ಐಯಾಮ್ ಲಿಜೆಂಡ್Dr. ರಾಬರ್ಟ್ ನೆವಿಲ್ಲೆ25,000,000ನಿರ್ಮಾಪಕ

ಅತ್ಯುತ್ತಮ ನಟನೆಗಾಗಿ MTV ಮೂವೀ ಪ್ರಶಸ್ತಿ
ಸ್ಯಾಟರ್ನ್‌ ಪ್ರಶಸ್ತಿ‌ (ಅತ್ಯುತ್ತಮ ನಟ)
ನಾಮನಿರ್ದೇಶಿತ— BET ಉತ್ತಮ ನಟ ಪ್ರಶಸ್ತಿ
ನಾಮನಿರ್ದೇಶಿತ — ಒಂದು ಚಲನೆಯಲ್ಲಿರುವ ಚಿತ್ರದ ಅದ್ಭುತ ನಟನೆಗಾಗಿ NAACP ಇಮೇಜ್ ಪ್ರಶಸ್ತಿ

1996ಹ್ಯಾಂಕಾಕ್ಜಾನ್ ಹ್ಯಾಂಕಾಕ್20,000,000
+ 20% of the gross
ನಿರ್ಮಾಪಕ
ಲೇಕ್ ವೀವ್ ಟೆರ್ರೇಸ್ನಿರ್ಮಾಪಕ
ದ ಸೀಕ್ರೆಟ್ ಲೈಫ್ ಆಫ್ ಬೀಸ್ನಿರ್ಮಾಪಕ
ಸೆವೆನ್ ಪೌಂಡ್ಸ್ಬೆನ್ ಥಾಮಸ್ನಿರ್ಮಾಪಕ
2010ದ ಕರಾಟೆ ಕಿಡ್ನಿರ್ಮಾಪಕ

Box office grosses ಬದಲಾಯಿಸಿ

ವರ್ಷಶಿರೋನಾಮBudgetU.S. gross[೩೦]Worldwide gross[೩೦]
1992ವೇರ್ ದ ಡೇ ಟೇಕ್ಸ್ ಯುN/A$390,152$390,152
1993ಮೇಡ್ ಇನ್ ಅಮೇರಿಕಾ$44,942,695$104,942,695
ಸಿಕ್ಸ್ ಡಿಗ್ರೀಸ್ ಆಫ್ ಸೆಪರೇಷನ್$6,284,090$6,284,090
1995ಬ್ಯಾಡ್ ಬಾಯ್ಸ್$23m$65,647,413$141,247,413
1996ಇಂಡಿಪೆಂಡೆನ್ಸ್ ಡೇ$75m$306,169,255$817,400,878
1997ಮೆನ್ ಇನ್ ಬ್ಲ್ಯಾಕ್2007$250,690,539$587,790,539
1998ಎನಿಮಿ ಆಫ್ ದ ಸ್ಟೇಟ್$111,549,836$250,649,836
1999ವೈಲ್ಡ್ ವೈಲ್ಡ್ ವೆಸ್ಟ್$170m$113,805,681$222,105,681
2000ದ ಲಿಜೆಂಡ್ ಆಫ್ ಬ್ಯಾಗರ್ ವ್ಯಾನ್ಸ್$80m$30,695,227$39,235,486
2001ಅಲಿ$107m$58,183,966$84,383,966
2002ಮೆನ್ ಇನ್ ಬ್ಲ್ಯಾಕ್ II$140m$190,418,803$441,818,803
2003ಬ್ಯಾಡ್‌ ಬಾಯ್ಸ್‌ II$60m$138,540,870$272,940,870
2004I, ರೋಬೋಟ್$120m$144,801,023$348,601,023
ಶಾರ್ಕ್ ಟೆಲ್$75m$161,192,000$367,192,000
2005ಹಿಚ್$70m$177,784,257$366,784,257
2006ದ ಪರ್ಸ್ಯೂಟ್ ಆಫ್ ಹ್ಯಾಪಿನೆಸ್$55m$162,586,036$306,086,036
2007ಐ ಯಾಮ್ ಲಿಜೆಂಡ್2007$256,393,010$585,055,701
2008ಹ್ಯಾನ್‌ಕಾಕ್$227,946,274$624,346,274
ಸೆವೆನ್ ಪೌಂಡ್ಸ್$55m$69,369,933$168,482,448

ಇವನ್ನೂ ಗಮನಿಸಿ ಬದಲಾಯಿಸಿ

ಆಕರಗಳು ಬದಲಾಯಿಸಿ

ಹೆಚ್ಚಿನ ಓದಿಗಾಗಿ ಬದಲಾಯಿಸಿ

  • ಡೋಡೆನ್, ಮ್ಯಾಟ್ (2007). Will Smith . ಮಿನ್ನೇಪಾಲಿಸ್, ಮಿನ್ನೆಸೊಟಾ, ಯುನೈಟೆಡ್ ಸ್ಟೇಟ್ಸ್: Lerner Publications, ISBN 0-8225-6608-7

ಹೊರಗಿನ ಕೊಂಡಿಗಳು ಬದಲಾಯಿಸಿ

🔥 Top keywords: ಕುವೆಂಪುಮುಖ್ಯ ಪುಟಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡಭಾರತದ ರಾಷ್ಟ್ರಪತಿಗಳ ಪಟ್ಟಿದೇವನೂರು ಮಹಾದೇವಕನ್ನಡ ಗುಣಿತಾಕ್ಷರಗಳುಬಸವೇಶ್ವರಭಾರತದ ಸಂವಿಧಾನಪ್ರಲೋಭನೆದ.ರಾ.ಬೇಂದ್ರೆಜಲ ಮಾಲಿನ್ಯಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುಶಿವರಾಮ ಕಾರಂತಕರ್ನಾಟಕದ ಜಿಲ್ಲೆಗಳುಕರ್ನಾಟಕಬಿ. ಆರ್. ಅಂಬೇಡ್ಕರ್ಗೌತಮ ಬುದ್ಧನಿರ್ಮಲಾ ಸೀತಾರಾಮನ್ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಕರ್ನಾಟಕದ ಮುಖ್ಯಮಂತ್ರಿಗಳುತತ್ಸಮ-ತದ್ಭವಮಾಸ್ತಿ ವೆಂಕಟೇಶ ಅಯ್ಯಂಗಾರ್ಪೂರ್ಣಚಂದ್ರ ತೇಜಸ್ವಿವಿಭಕ್ತಿ ಪ್ರತ್ಯಯಗಳುವರ್ಗೀಯ ವ್ಯಂಜನಕೇಂದ್ರಾಡಳಿತ ಪ್ರದೇಶಗಳುಕನ್ನಡ ಸಾಹಿತ್ಯರಾಷ್ಟ್ರೀಯ ಸೇವಾ ಯೋಜನೆಮಹಾತ್ಮ ಗಾಂಧಿಕರ್ನಾಟಕದ ಇತಿಹಾಸಯು.ಆರ್.ಅನಂತಮೂರ್ತಿ