ಮ್ಯಾಕ್ಸ್ ಫಾನ್ ಲವೆ

ಮ್ಯಾಕ್ಸ್ ಫಾನ್ ಲವೆ (1879-1960) ಜರ್ಮನಿಯ ಒಬ್ಬ ಭೌತವಿಜ್ಞಾನಿ. ಎಂಟ್ರೊಪಿ ಪರಿಕಲ್ಪನೆಯನ್ನು ದ್ಯುತಿವಿಜ್ಞಾನಕ್ಕೆ (ಆಪ್ಟಿಕ್ಸ್) ಅನ್ವಯಿಸಿದ. ಹರಿವ ನೀರಿನಲ್ಲಿ ಬೆಳಕಿನ ವೇಗ ಕುರಿತ ಸೂತ್ರ ಐನ್‌ಸ್ಟೈನ್ ತಮ್ಮ ವಿಶೇಷ ಸಾಪೇಕ್ಷತಾ ಸಿದ್ಧಾಂತದಲ್ಲಿ (1905) ಪ್ರತಿಪಾದಿಸಿದ ಪ್ರಕಾರವೇ ಇದೆಯೆಂದು ರುಜುವಾತಿಸಿದ. ಸ್ಫಟಿಕಗಳಲ್ಲಿರುವ ಪರಮಾಣುಗಳು ಹೇಗೆ ಎಕ್ಸ್-ಕಿರಣಗಳನ್ನು ವಿವರ್ತಿಸುತ್ತವೆ ಎಂಬ ವಿದ್ಯಮಾನವನ್ನು ಆವಿಷ್ಕರಿಸಿದ (1912).[೧] ಈ ಆವಿಷ್ಕಾರ ಈತನಿಗೆ ನೊಬೆಲ್ ಪಾರಿತೋಷಿಕ ತಂದುಕೊಟ್ಟಿತು (1914). ಜ಼್ಯೂರಿಕ್ (1912), ಫ್ರ‍್ಯಾಂಕ್‌ಫರ್ಟ್ (1914) ಮತ್ತು ಬರ್ಲಿನ್ (1919) ನಗರಗಳ ವಿಶ್ವವಿದ್ಯಾಲಯಗಳಲ್ಲಿ ಸೇವೆಸಲ್ಲಿಸಿದ್ದ. ಬರ್ಲಿನ್-ಡಲ್‌ಹೆಲ್ಮ್‌ನಲ್ಲಿದ್ದ (ತತ್ಪೂರ್ವದ) ಕೈಸರ್ ವಿಲ್‌ಹೆಲ್ಮ್ ಇನ್‌ಸ್ಟಿಟ್ಯೂಟ್ ಫಾರ್ ಫಿಸಿಕ್ಸ್‌ನ ನಿರ್ದೇಶಕನಾಗಿ 71ನೆಯ ವಯಸ್ಸಿನಲ್ಲಿ ನೇಮಕಗೊಂಡ.

ಮ್ಯಾಕ್ಸ್ ಫಾನ್ ಲವೆ

ಉಲ್ಲೇಖಗಳು ಬದಲಾಯಿಸಿ

  1. Stoddart, Charlotte (1 March 2022). "Structural biology: How proteins got their close-up". Knowable Magazine. doi:10.1146/knowable-022822-1. Retrieved 25 March 2022.

ಹೊರಗಿನ ಕೊಂಡಿಗಳು ಬದಲಾಯಿಸಿ

🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್