ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ

ಆಲ್ಫ್ರೆಡ್ ನೊಬೆಲ್ರಿಂದ 1895 ರಲ್ಲಿ ಸ್ಥಾಪಿಸಲ್ಪಟ್ಟ ಐದು ನಾಬೆಲ್ ಬಹುಮಾನಗಳಲ್ಲಿ ಒಂದಾಗಿದೆ

ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯು (ಸ್ವೀಡನ್‌ನ ಭಾಷೆ - Nobelpriset i fysik) ಸ್ವೀಡನ್‌ನ ರಾಜವಂಶದ ವಿಜ್ಞಾನ ಅಕಾಡೆಮಿಯಿಂದ ವರ್ಷಕೊಮ್ಮೆ ನೀಡಲಾಗುತ್ತದೆ. ಅದು ಆಲ್‌ಫ್ರೆಡ್ ನೊಬೆಲ್‌ರ ಉಯಿಲಿನಿಂದ ೧೮೯೫ರಲ್ಲಿ ಸ್ಥಾಪಿತವಾದ ಐದು ನೊಬೆಲ್ ಪ್ರಶಸ್ತಿಗಳ ಪೈಕಿ ಒಂದು ಮತ್ತು ೧೯೦೧ರಿಂದ ನೀಡಲಾಗುತ್ತಿದೆ; ರಸಾಯನಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ, ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ, ನೊಬೆಲ್ ಶಾಂತಿ ಪ್ರಶಸ್ತಿ, ಮತ್ತು ವೈದ್ಯಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಇತರ ಪ್ರಶಸ್ತಿಗಳು.

ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ
ಕೊಡಲ್ಪಡುವ ವಿಷಯಭೌತಶಾಸ್ತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ ಕೊಡಲ್ಪಡುವ ಪ್ರಶಸ್ತಿ
ಸ್ಥಳಸ್ಟಾಕ್‍ಹೋಮ್, ಸ್ವೀಡನ್
ಕೊಡಿಸಲ್ಪಡುರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸ್ಸ್
ಪ್ರಧಮವಾಗಿ ಕೊಡಲ್ಪಟ್ಟದ್ದು೧೯೦೧
ಅಧಿಕೃತ ಜಾಲತಾಣnobelprize.org
ವಿಲ್‌ಹೆಲ್ಮ್ ರೆಂಟ್‌ಗನ್ (೧೮೪೫ – ೧೯೨೩)

ಭೌತಶಾಸ್ತ್ರದ ಮೊದಲ ನೊಬೆಲ್ ಪ್ರಶಸ್ತಿಯನ್ನು ಜರ್ಮನಿಯ ವಿಲ್‌ಹೆಲ್ಮ್ ಕಾನ್ರಾಡ್ ರೆಂಟ್‌ಗನ್‌ರಿಗೆ "ಅಪೂರ್ವವಾದ ಕಿರಣಗಳ (ಅಥವಾ ಕ್ಷ-ಕಿರಣಗಳು) ಶೋಧನೆಯ ಮೂಲಕ ಅವರು ಸಲ್ಲಿಸಿದ ಅಸಾಮಾನ್ಯವಾದ ಸೇವೆಗಳ ಗೌರವಾರ್ಥವಾಗಿ" ನೀಡಲಾಗಿತ್ತು. ಪ್ರಶಸ್ತಿಯನ್ನು ಸ್ವೀಡನ್ ರಾಜಧಾನಿ ಸ್ಟಾಕ್‍ಹೋಮ್ ನಗರದಲ್ಲಿ ಆಲ್‌ಫ್ರೆಡ್ ನೊಬೆಲ್‌ರ ಸಾವಿನ ವಾರ್ಷಿಕೋತ್ಸವವಾದ ಡಿಸೆಂಬರ್ ೧೦ರಂದು ನೀಡಲಾಗುತ್ತದೆ. ೨೦೧೭ರವರೆಗೆ ೨೦೬ ವ್ಯಕ್ತಿಗಳು ಪುರಸ್ಕೃತರಾಗಿದ್ದಾರೆ.

೨೦೧೬ನೇ ಸಾಲಿನ ಭೌತಶಾಸ್ತ್ರ ಪ್ರಶಸ್ತಿ ಬದಲಾಯಿಸಿ

  • ಅತ್ಯಾಧುನಿಕ ಗಣಿತೀಯ ವಿಧಾನಗಳನ್ನು ಬಳಸಿ ಭಿನ್ನ ಹಂತಗಳಲ್ಲಿ ಭೌತವಸ್ತುಗಳ ಅಧ್ಯಯನದ ಸಾಧ್ಯತೆಯನ್ನು ಹೊರ ತಂದಿರುವ ವಿಜ್ಞಾನಿಗಳಿಗೆ 2016ನೇ ಸಾಲಿನ ಭೌತಶಾಸ್ತ್ರ ನೊಬೆಲ್ ಘೋಷಿಸಲಾಗಿದೆ.
  • ಅಮೆರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ನಡೆಸಿತ್ತಿರುವ ಮೂವರು ವಿಜ್ಞಾನಿಗಳಿಗೆ ಪ್ರಶಸ್ತಿ ಹಂಚಿಕೆಯಾಗಿದೆ.
  • ವಿಜ್ಞಾನಿಗಳ ಪರಿಚಯ:
  • ಡೇವಿಡ್‌ ಜೆ. ಥೌಲೆಸ್, ವಾಷಿಂಗ್ಟನ್ ವಿಶ್ವವಿದ್ಯಾಲಯ, ಅಮೆರಿಕ(ಪ್ರಶಸ್ತಿಯ ಅರ್ಧ ಭಾಗ)
  • ಜನನ: 1934, ಬರ್ಸ್ಡನ್, ಯು.ಕೆ.
  • ಎಫ್.ಡಂಕನ್ ಎಂ.ಹಲ್ಡೇನ್‌, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ, ಅಮೆರಿಕ
  • ಜನನ: 1951, ಲಂಡನ್‌
  • ಜೆ.ಮೈಕೆಲ್ ಕೋಸ್ಟೆರ್‌ಲಿಟ್ಸ್‌, ಬ್ರೌನ್‌ ವಿಶ್ವವಿದ್ಯಾಲಯ, ಅಮೆರಿಕ
  • ಜನನ: 1942, ಅಬೆರ್ದಿನ್‌, ಯು.ಕೆ
  • ಸಂಶೋಧನೆ: ಭಿನ್ನ ಹಂತಗಳಲ್ಲಿ ಆಕೃತಿಯ ಜ್ಯಾಮಿತೀಯ ಲಕ್ಷಣಗಳನ್ನು ಅಧ್ಯಯನ ಮಾಡುವುದಕ್ಕೆ ಸಂಬಂಧಿಸಿದಂತೆ (ಟೊಪಾಲಜಿಕಲ್ ಫೇಸ್‌) ಭೌತವಸ್ತು ಹಾಗೂ ಪರಿವರ್ತನೆ ಗಳ ಸೈದ್ಧಾಂತಿಕ ಸಂಶೋಧನೆಗಾಗಿ ಭೌತಶಾಸ್ತ್ರ ನೊಬೆಲ್‌ ಘೋಷಿಸಲಾಗಿದೆ.[೧]

ಬಾಹ್ಯ ಸಂಪರ್ಕಗಳು ಬದಲಾಯಿಸಿ

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. ಮೂವರು ವಿಜ್ಞಾನಿಗಳಿಗೆ 2016ರ ಭೌತಶಾಸ್ತ್ರ ನೊಬೆಲ್:4 Oct, 2016
🔥 Top keywords: ಕನ್ನಡಮುಖ್ಯ ಪುಟಕನ್ನಡ ಅಕ್ಷರಮಾಲೆಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಗಾದೆಬಿ. ಆರ್. ಅಂಬೇಡ್ಕರ್ಕನ್ನಡ ಗುಣಿತಾಕ್ಷರಗಳುಭಾರತದ ಸಂವಿಧಾನಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಸವೇಶ್ವರಕರ್ನಾಟಕಕರ್ನಾಟಕದ ಜಿಲ್ಲೆಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ದ.ರಾ.ಬೇಂದ್ರೆಲೋಕಸಭೆವೀರೇಂದ್ರ ಪಾಟೀಲ್ಕನ್ನಡ ಸಂಧಿಕರಗನರೇಂದ್ರ ಮೋದಿಶಿವರಾಮ ಕಾರಂತಕರ್ನಾಟಕದ ಇತಿಹಾಸಮಾಸ್ತಿ ವೆಂಕಟೇಶ ಅಯ್ಯಂಗಾರ್ಚುನಾವಣೆರಾಮಾಯಣಮತದಾನಅಕ್ಕಮಹಾದೇವಿಸಂಶೋಧನೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪ್ರಜ್ವಲ್ ರೇವಣ್ಣಕನ್ನಡ ಸಾಹಿತ್ಯಗೌತಮ ಬುದ್ಧವಿಜಯ ಕರ್ನಾಟಕಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತೀಯ ಮೂಲಭೂತ ಹಕ್ಕುಗಳುಬೆಂಗಳೂರುಭಾರತೀಯ ರಾಷ್ಟ್ರೀಯ ಕಾಂಗ್ರೆಸ್