ಪರಿಕರಗಳು

ಮಾನವನ ವಿಕಾಸದ ಇತಿಹಾಸವು ಉಪಕರಣಗಳು ಅಥವಾ ಪರಿಕರಗಳನ್ನು (tool)ಗುರುತಿಸುವುದರಿಂದಲೇ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಪರಿಕರಗಳು ಕಲ್ಲಿನವೇ ಆಗಿರುತ್ತವೆ. ಇದರ ಅರ್ಥ ಮಾನವ ಕಟ್ಟಿಗೆ ಅಥವಾ ಮೂಳೆಗಳನ್ನು ಅಥವಾ ಇತರ ವಸ್ತುಗಳ ಪರಿಕರ ಬಳಸಲಿಲ್ಲವೆಂದಲ್ಲ. ಆದರೆ ಇವು ಬಹಳ ಕಾಲ ಉಳಿದುಕೊಂಡು ಬಂದು ಪುರಾವೆ ಒದಗಿಸಲಾರವು. ಕೆಲವೊಮ್ಮೆ ಇವುಗಳನ್ನು ಆಯುಧಗಳೆಂದೂ ಸಹ ಕರೆಯಲಾಗುತ್ತದೆ. ಆದರೆ, ಈ ಬಗೆಗೆ ಚರ್ಚೆಯೊಂದು ನಡೆದಂತೆ ತೋರುತ್ತದೆ. ಬ್ರಿಟಿಶ್ -ಅಮೆರಿಕ ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ ಎಮ್ . ಎಪ್. ಅಶ್ಲೆ ಮೊಂಟಗು (M.F. Ashley Montagu) ಮಾನವ ಮತ್ತು ಆಕ್ರಮಣಶೀಲತೆಯ ಬಗೆಗೆ ಬರೆಯುತ್ತಾ, ಯುರೋಪಿನ ಹಲವರ `ಮಾನವನು ಮೂಲತಹ ಆಕ್ರಮಣಕಾರಿ `ಎಂಬ ನಿಲುವನ್ನು ಮಾನವಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ವಾದಿಸುತ್ತಾ, ಇಂತಹುದೇ ತಪ್ಪು ನಿಲುವು ಪ್ರೈಮೇಟ್‍ಗಳ ಹಲ್ಲು, ಉಗುರುಗಳನ್ನೂ ಆಯುಧಗಳನ್ನಾಗಿಸಿದೆ ಎನ್ನುತ್ತಾರೆ. [೧] ಬಹುಶಃ ಈ ಹಿನ್ನೆಲೆಯಲ್ಲಿಯೇ ಕನಿಷ್ಟ ಇಂಗ್ಲೀಶ್‍ನಲ್ಲಿ `tool` ಎಂದೇ ಬಳಸಲಾಗುತ್ತಿದ್ದೆ ಹಾಗೂ ಕನ್ನಡದಲ್ಲಿ ಉಪಕರಣ ಅಥವಾ ಪರಿಕರ. ಈ ಆಸಕ್ತಿದಾಯ ಕ ಚರ್ಚೆಗೆ ಬ್ರಿಟಾನಿಕ ಸಿಡಿ ಲೇಖನ ನೋಡಿ.

ಟಿಪ್ಪಣಿಗಳು ಬದಲಾಯಿಸಿ

  1. Biology and ethics[ಶಾಶ್ವತವಾಗಿ ಮಡಿದ ಕೊಂಡಿ]


ಪರಾಮರ್ಶನಗಳು ಬದಲಾಯಿಸಿ

  • Prehistory, Irfan Habib, Tulika Books, New Delhi, 2002
🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್