ಗರ್ಭಕೋಶದ ಕ್ಯಾನ್ಸರ್

ಗರ್ಭಕೋಶದ ಕ್ಯಾನ್ಸರ್ ಎಂಡೊಮೆಟ್ರಿಯಂನಲ್ಲಿ (ಗರ್ಭಾಶಯದ ಒಳಪದರ) ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಇದು ದೇಹದ ಇತರ ಭಾಗಗಳಿಗೆ ಹರಡಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕೋಶಗಳ ಅಸಹಜ ಬೆಳವಣಿಗೆಯ ಪರಿಣಾಮವಾಗಿದೆ.

ಗರ್ಭಕೋಶದ ಕ್ಯಾನ್ಸರ್
  • ಗರ್ಭಕೋಶದ ಕ್ಯಾನ್ಸರ್ ಎಂಡೊಮೆಟ್ರಿಯಂನಲ್ಲಿ (ಗರ್ಭಾಶಯದ ಒಳಪದರ) ಕಾಣಿಸಿಕೊಳ್ಳುವ ಕ್ಯಾನ್ಸರ್ ಆಗಿದೆ. ಇದು ದೇಹದ ಇತರ ಭಾಗಗಳಿಗೆ ಹರಡಬಹುದಾದ ಸಾಮರ್ಥ್ಯವನ್ನು ಹೊಂದಿರುವ ಕೋಶಗಳ ಅಸಹಜ ಬೆಳವಣಿಗೆಯ ಪರಿಣಾಮವಾಗಿದೆ.
  • ಹೆಚ್ಚಾಗಿ ಎಲ್ಲ ಸಂದರ್ಭಗಳಲ್ಲಿ ಮೊದಲ ಸೂಚನೆ ಯೋನಿಯ ರಕ್ತಸ್ರಾವ. ಮಹಿಳೆಯ ಋತುಚಕ್ರಕ್ಕೆ ಈ ರಕ್ತಸ್ರಾವಕ್ಕೆ ಯಾವುದೆ ಸಂಬಂಧವಿಲ್ಲ. ಇದರ ಇತರ ಲಕ್ಷಣಗಳು ಮೂತ್ರವಿಸರ್ಜನೆ ಅಥವಾ ಲೈಂಗಿಕ ಸಂಭೋಗದಲ್ಲಿ ನೋವು ಅಥವಾ ಶ್ರೋಣಿಯ ನೋವು. ಗರ್ಭಕೋಶದ ಕ್ಯಾನ್ಸರ್ ಋತುಚಕ್ರ ನಿಂತ ನಂತರ ಅತ್ಯಂತ ಸಾಮಾನ್ಯವಾಗಿ ಸಂಭವಿಸುತ್ತದೆ.

ಕಾರಣಗಳು

ಬದಲಾಯಿಸಿ
  • ಸುಮಾರು ಬೊಜ್ಜು ಇರುವ 40% ಪ್ರಕರಣಗಳಳ್ಳಿ ಈ ಕ್ಯಾನ್ಸರ್ ಕಂಡು ಬರುತ್ತದೆ. ಗರ್ಭಕೋಶದ ಕ್ಯಾನ್ಸರ್ ವಿಪರೀತ ಈಸ್ಟ್ರೊಜೆನ್, ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಇರುವವರಲ್ಲಿ ಸಹ ಕಂಡು ಬರುತ್ತದೆ. ಕೇವಲ ಈಸ್ಟ್ರೊಜೆನ್ ತೆಗೆದುಕೊಳ್ಳುವುದು ಗರ್ಭಕೋಶದ ಕ್ಯಾನ್ಸರ್ ನ ಅಪಾಯವನ್ನು ಹೆಚ್ಚಿಸುತ್ತದೆ.
  • ಅತ್ಯಂತ ಜನನ ನಿಯಂತ್ರಣ ಮಾತ್ರೆಗಳಂತೆ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಎರಡನ್ನೂ ಸಂಯೋಜನೆಯಲ್ಲಿ ತೆಗೆದುಕೊಳ್ಳುವುದರಿಂದ ಅಪಾಯ ಕಡಿಮೆಯಾಗುತ್ತದೆ. ಎರಡು ಮತ್ತು ಐದು ನಡುವೆ ಪ್ರಕರಣಗಳಷ್ಟು ವ್ಯಕ್ತಿಗಳ ಸಂದರ್ಭಗಳಲ್ಲಿ ಪೋಷಕರ ಜೀನ್ಸಗಳಿಂದ ಆನುವಂಶಿಕವಾಗಿ ಬರುತ್ತದೆ.
  • ಗರ್ಭಕೋಶದ ಕ್ಯಾನ್ಸರ್ ಕೆಲವೊಮ್ಮೆ ಸಡಿಲವಾಗಿ "ಗರ್ಭಾಶಯದ ಕ್ಯಾನ್ಸರ್" ಎಂದು ಕರೆಯಲಾಗುತ್ತದೆ. ಆದರೂ ಇದು ಗರ್ಭಕಂಠದ ಕ್ಯಾನ್ಸರ್, ಗರ್ಭಕೋಶಸರ್ಕೊಮಾ, ಟ್ರೋಫೋಬ್ಲಾಸ್ಟಿಕ್ ಕಾಯಿಲೆ, ಗರ್ಭಾಶಯದ ಕ್ಯಾನ್ಸರ್ ಇತರ ರೂಪಗಳಿಗೆ ಭಿನ್ನವಾಗಿದೆ.
  • ಗರ್ಭಕೋಶದ ಕ್ಯಾನ್ಸರ್ನ ಅತ್ಯಂತ ಸಾಮಾನ್ಯ ರೀತಿಯ ಕ್ಯಾನ್ಸರ್ 'ಎಂಡೋಮೆಟ್ರಿಯೋಯ್ದ್ ಕಾರ್ಸಿನೋಮ'. ಇದು 80% ರಷ್ಟು ಪ್ರಕರಣಗಳ್ಲಿ ಕಂಡು ಬರುತ್ತದೆ. ಗರ್ಭಕೋಶದ ಕ್ಯಾನ್ಸರ್ ಸಾಮಾನ್ಯವಾಗಿ 'ಎಂಡೊಮೆಟ್ರಿಯಲ್ ಬಯಾಪ್ಸಿ' ಮೂಲಕ ಅಧವ ಹಿಗ್ಗುವಿಕೆ ಮತ್ತು ಶಸ್ತ್ರಚಿಕಿತ್ಸೆ ಎಂಬ ವಿಧಾನದ ಸಮಯದಲ್ಲಿ ಮಾದರಿಗಳನ್ನು ತೆಗೆದುಕೊಂಡು ನಿರ್ಣಯಿಸಲಾಗುತ್ತದೆ. 'ಪ್ಯಾಪ್ ಸ್ಮೀಯರ್' ಸಾಮಾನ್ಯವಾಗಿ ಸಾಕಾಗುವುದಿಲ್ಲ. ಸಾಮಾನ್ಯ ಅಪಾಯ ಇರುವವರು ನಿಯಮಿತವಾದ ಸ್ಕ್ರೀನಿಂಗ್ಗೆ ಒಳಗಾಗ ಬಾರದು.[೧]

ಚಿಕಿತ್ಸೆ

ಬದಲಾಯಿಸಿ

ಗರ್ಭಕೋಶದ ಕ್ಯಾನ್ಸರ್ ಗೆ ಪ್ರಮುಖ ಚಿಕಿತ್ಸೆ ಆಯ್ಕೆಯು ' ಅಬ್ಡೋಮಿನಲ್ ಹಿಸ್ಟರೆಕ್ಟೋಮಯೋಫೋರೆಕ್ಟೋಮಿ'. ಅತಿ ತೀವ್ರ ಸಂದರ್ಭಗಳಲ್ಲಿ, ವಿಕಿರಣ ಚಿಕಿತ್ಸೆ, ಕೀಮೊತೆರಪಿ ಅಥವಾ ಹಾರ್ಮೋನು ಚಿಕಿತ್ಸೆಯನ್ನು ಸಹ ಶಿಫಾರಸು ಮಾಡಬಹುದು. ರೋಗದ ಆರಂಭಿಕ ಹಂತದಲ್ಲೇ ಕಂಡು ಹಿಡಿದರೆ ಚಿಕಿತ್ಸೆಯ ಫಲಿತಾಂಶ ಅನುಕೂಲಕರವಾಗುತ್ತದೆ. ಯುನೈಟೆಡ್ ಸ್ಟೇಟ್ಸ್ನಲ್ಲಿ ಒಟ್ಟಾರೆ ಐದು ವರ್ಷ ಬದುಕುಳಿಯುವಿಕೆಯು 80%ಗೆ ಹೆಚ್ಚಾಗಿದೆ.

ಮುಕ್ತಾಯ

ಬದಲಾಯಿಸಿ
  • 2012ರಲ್ಲಿ ಗರ್ಭಕೋಶದ ಕ್ಯಾನ್ಸರ್ 320,000 ಮಹಿಳೆಯರಲ್ಲಿ ಸಂಭವಿಸಿತು ಮತ್ತು 76,000 ಜನರ ಸಾವಿಗೆ ಕಾರಣವಾಯಿತು.ಅಂಡಾಶಯದ ಮತ್ತು ಗರ್ಭಕಂಠದ ಕ್ಯಾನ್ಸರ್ ನ ಹಿಂದೆ, ಸ್ತ್ರೀ ಕ್ಯಾನ್ಸರ್ ಸಾವಿನ ಮೂರನೆಯ ಅತಿ ಸಾಮಾನ್ಯ ಕಾರಣವಾಗಿದೆ.
  • ಇದು ಅಭಿವೃದ್ಧಿ ಹೊಂದಿದ ವಿಶ್ವದಲ್ಲಿ ಹೆಚ್ಚು ಸಾಮಾನ್ಯ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೆಣ್ಣಿನ ಸಂತಾನೋತ್ಪತ್ತಿ ಅಂಗದ ಅತ್ಯಂತ ಸಾಮಾನ್ಯ ಕ್ಯಾನ್ಸರ್. ಗರ್ಭಕೋಶದ ಕ್ಯಾನ್ಸರ್ ಪ್ರಮಾಣ 1980 ರಿಂದ 2010ರಲ್ಲಿ ಹಲವಾರು ದೇಶಗಳಲ್ಲಿ ಏರಿಕೆಯಾಗಿದೆ.ಇದಕ್ಕೆ ಹೆಚ್ಚಾಗುತ್ತಿರುವ ವೃದ್ಧರ ಹಾಗು ಬೊಜ್ಜು ಇರುವವರ ಸಂಖ್ಯೆಯೇ ಕಾರಣ ಎಂದು ನಂಬಲಾಗಿದೆ.

ಉಲ್ಲೇಖ

ಬದಲಾಯಿಸಿ
  1. http://vijaykarnataka.indiatimes.com/home/health/article/-/articleshow/18834134.cms
🔥 Top keywords: ಕುವೆಂಪುಮುಖ್ಯ ಪುಟದರ್ಶನ್ ತೂಗುದೀಪ್ಸಹಾಯ:ಲಿಪ್ಯಂತರವಿಶೇಷ:Searchಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಶಿವರಾಮ ಕಾರಂತಕನ್ನಡ ಅಕ್ಷರಮಾಲೆಗೌತಮ ಬುದ್ಧದ.ರಾ.ಬೇಂದ್ರೆಕನ್ನಡಬಸವೇಶ್ವರಪೂರ್ಣಚಂದ್ರ ತೇಜಸ್ವಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜಿ.ಎಸ್.ಶಿವರುದ್ರಪ್ಪಮಳೆಗಾಲಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಗುಣಿತಾಕ್ಷರಗಳುಯು.ಆರ್.ಅನಂತಮೂರ್ತಿಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತದ ಸಂವಿಧಾನಚಂದ್ರಶೇಖರ ಕಂಬಾರವಿನಾಯಕ ಕೃಷ್ಣ ಗೋಕಾಕಸೂರ್ಯಕರ್ನಾಟಕಬಿ. ಆರ್. ಅಂಬೇಡ್ಕರ್ಗಿರೀಶ್ ಕಾರ್ನಾಡ್ಕನ್ನಡ ಸಂಧಿಅಂತರಾಷ್ಟ್ರೀಯ ಯೋಗ ದಿನಮಹಾತ್ಮ ಗಾಂಧಿಅಕ್ಕಮಹಾದೇವಿಛತ್ರಪತಿ ಶಿವಾಜಿರಾಷ್ಟ್ರೀಯ ಸೇವಾ ಯೋಜನೆಕನ್ನಡ ಸಾಹಿತ್ಯಸ್ವಾಮಿ ವಿವೇಕಾನಂದಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಎ.ಪಿ.ಜೆ.ಅಬ್ದುಲ್ ಕಲಾಂ