ಒಮಿಕ್ರಾನ್

ಓಮಿಕ್ರಾನ್ / / ಔಮಿ ಕ್ರಾನ್/ ; _ _ ದೊಡ್ಡಕ್ಷರ Ο, ಸಣ್ಣಕ್ಷರ ο, όμικρον ) ಗ್ರೀಕ್ ವರ್ಣಮಾಲೆಯ 15 ನೇ ಅಕ್ಷರವಾಗಿದೆ. ಈ ಅಕ್ಷರ ಪ್ರಾಚೀನ (Phoenician) ಫೀನಿಷಿಯನ್ ಶಬ್ದದ ಅಕ್ಷರ ಐನ್ ನಿಂದ ಬಂದಿದೆ:</img>. ಶಾಸ್ತ್ರೀಯ ಗ್ರೀಕ್‌ನಲ್ಲಿ, ಒಮೆಗಾ [ɔː] ಮತ್ತು ου [oː] ಗೆ ವ್ಯತಿರಿಕ್ತವಾಗಿ ಓಮಿಕ್ರಾನ್ ಧ್ವನಿ [ o ] ಅನ್ನು ಪ್ರತಿನಿಧಿಸುತ್ತದೆ. ಆಧುನಿಕ ಗ್ರೀಕ್‌ನಲ್ಲಿ, ಓಮಿಕ್ರಾನ್ ಮತ್ತು ಒಮೆಗಾ ಎರಡೂ ಪದಗಳು ಬಾಯಿಯನ್ನು ಗೋಳಾಕಾರವಾಗಿ ಹೊರಡಿಸುವ ಸ್ವರಾಕ್ಷರವನ್ನು ಪ್ರತಿನಿಧಿಸುತ್ತವೆ /o̞/ . ಓಮಿಕ್ರಾನ್‌ನಿಂದ ಹುಟ್ಟಿಕೊಂಡ ಅಕ್ಷರಗಳಲ್ಲಿ ರೋಮನ್ O ಮತ್ತು ಸಿರಿಲಿಕ್ O ಸೇರಿವೆ. ಪದದ ಅಕ್ಷರಶಃ ಅರ್ಥ ಒಮೆಗಾ ದಲ್ಲಿರುವಂತಹ ದೀರ್ಘ ಒ (ಒ ಮೆಗಾ ) [೧] ದ ತದ್ವಿರುದ್ದವಾಗಿ ಹ್ರಸ್ವ o(o mikron) ಗ್ರೀಕ್ ಅಂಕಿಗಳ ವ್ಯವಸ್ಥೆಯಲ್ಲಿ ಓಮಿಕ್ರಾನ್ 70 ಮೌಲ್ಯವನ್ನು ಹೊಂದಿದೆ.

ಬಳಕೆ ಬದಲಾಯಿಸಿ

ಒಮಿಕ್ರಾನ್ ಅನ್ನು ವರ್ಣಮಾಲೆಯ ಅಕ್ಷರವಾಗಿ ಬಳಸುವುದರ ಜೊತೆಗೆ, ತಾಂತ್ರಿಕ ಸಂಕೇತಗಳಲ್ಲಿ ಸಾಂದರ್ಭಿಕವಾಗಿ ಬಳಸಲಾಗುತ್ತದೆ.  ಆದರೆ ಅದರ ಬಳಕೆ ಸೀಮಿತವಾಗಿದೆ. ಏಕೆಂದರೆ ದೊಡ್ಡಕ್ಷರ ಮತ್ತು ಸಣ್ಣಕ್ಷರ (Ο ο) ಎರಡನ್ನೂ ಲ್ಯಾಟಿನ್ ಅಕ್ಷರ "o" (O o) ನಿಂದ ಪ್ರತ್ಯೇಕಿಸುವುದು ಸುಲಭವಲ್ಲ ಮತ್ತು ಅರೇಬಿಕ್ ಅಂಕಿ "ಶೂನ್ಯ" (0) ನಿಂದ ಪ್ರತ್ಯೇಕಿಸುವುದೂ ಕಷ್ಟ.

ಗಣಿತಶಾಸ್ತ್ರ ಬದಲಾಯಿಸಿ

1894 ರಲ್ಲಿ ಪಾಲ್ ಬ್ಯಾಚ್‌ಮನ್ ಪರಿಚಯಿಸಿದ ದೊಡ್ಡ ಒ (big O) ಚಿಹ್ನೆಯನ್ನು 1909 ರಲ್ಲಿ ಎಡ್ಮಂಡ್ ಲ್ಯಾಂಡೌ ಜನಪ್ರಿಯಗೊಳಿಸಿದರು. ಇದು ಮೂಲತಃ "ಆರ್ಡರ್ ಆಫ್" ("ಆರ್ಡ್‌ನಂಗ್") ಅನ್ನು ಬಿಂಬಿಸುತ್ತದೆ. ಮತ್ತು ಆದ್ದರಿಂದ ಲ್ಯಾಟಿನ್ ಅಕ್ಷರವಾಗಿದೆ. ಇದನ್ನು 1976 ರಲ್ಲಿ ಡೊನಾಲ್ಡ್ ಕ್ನೂತ್ ಅವರು ಸ್ಪಷ್ಟವಾಗಿ ಅಧ್ಯಯಿಸಿದರು [೨] ಒಂದು ದೊಡ್ಡಕ್ಷರ Ο (ಓಮಿಕ್ರಾನ್), ಬಹುಶಃ ಒಮೆಗಾ ಚಿಹ್ನೆಯ ವ್ಯಾಖ್ಯಾನವನ್ನು ಉಲ್ಲೇಖಿಸುತ್ತದೆ. ಬ್ಯಾಚ್‌ಮನ್ ಅಥವಾ ಲ್ಯಾಂಡೌ ಇದನ್ನು "ಓಮಿಕ್ರಾನ್" ಎಂದು ಕರೆಯುವುದಿಲ್ಲ, ಮತ್ತು "ಓಮಿಕ್ರಾನ್" ಪದವು ಕ್ನೂತ್ ಅವರ ಸಂಶೋಧನಾ ಪತ್ರಿಕೆಯ ಶೀರ್ಷಿಕೆಯಲ್ಲಿ ಒಮ್ಮೆ ಮಾತ್ರ ಕಾಣಿಸಿಕೊಳ್ಳುತ್ತದೆ.

ಗ್ರೀಕ್ ಅಂಕಿಗಳು ಬದಲಾಯಿಸಿ

ಗ್ರೀಕ್ ಭಾಷೆಯಲ್ಲಿ ಸಂಖ್ಯೆಗಳನ್ನು ಬರೆಯಲು ಹಲವಾರು ವ್ಯವಸ್ಥೆಗಳಿದ್ದವು. ಪ್ರಾಚೀನ ಗ್ರೀಕ್ ನ ಕೊನೆಯ ಭಾಗದಲ್ಲಿ 70 ರ ಮೌಲ್ಯವನ್ನು ಪ್ರತಿನಿಧಿಸಲು ಓಮಿಕ್ರಾನ್ (ದೊಡ್ಡಕ್ಷರ ಮತ್ತು ಸಣ್ಣಕ್ಷರ) ಅನ್ನು ಅತ್ಯಂತ ಸಾಮಾನ್ಯ ರೂಪದಲ್ಲಿ ಬಳಸಲಾಯಿತು.

ಹೆಚ್ಚು ಸಾಮಾನ್ಯವಾಗಿ, ಓಮಿಕ್ರಾನ್ ಅಕ್ಷರವನ್ನು ಯಾವುದೇ ಗ್ರೀಕ್-ವರ್ಣಮಾಲೆಯ ಗುರುತುಪಟ್ಟಿಯಲ್ಲಿ ಹದಿನೈದನೆಯ ಅನುಕ್ರಮಣಿಕೆ ಸ್ಥಾನವನ್ನು ಗುರುತಿಸಲು ಬಳಸಲಾಗುತ್ತದೆ. ಆದ್ದರಿಂದ, ಉದಾಹರಣೆಗೆ, ಯೂಕ್ಲಿಡ್‌ನ <i id="mwRA">ಎಲಿಮೆಂಟ್ಸ್‌ನಲ್ಲಿ</i>, ಜ್ಯಾಮಿತೀಯ ರೇಖಾಚಿತ್ರದಲ್ಲಿನ ವಿವಿಧ ಬಿಂದುಗಳನ್ನು ಅಕ್ಷರಗಳಿಂದ ಗುರುತಿಸಿದಾಗ, ಅವುಗಳನ್ನು ಸಂಖ್ಯೆಗಳೊಂದಿಗೆ ಗುರುತಿಸುವಂತೆಯೇ ಪರಿಣಾಮಕಾರಿಯಾಗಿರುತ್ತದೆ. ಪ್ರತಿ ಅಕ್ಷರವು ಪ್ರಮಾಣಿತ ವರ್ಣಮಾಲೆಯಲ್ಲಿ ಅದರ ಸ್ಥಾನದ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ. [lower-alpha ೧] [lower-alpha ೨]

ಖಗೋಳಶಾಸ್ತ್ರ ಬದಲಾಯಿಸಿ

ಓಮಿಕ್ರಾನ್ ಅನ್ನು ನಕ್ಷತ್ರಪುಂಜದ ಗುಂಪಿನಲ್ಲಿ ಹದಿನೈದನೆಯ ನಕ್ಷತ್ರವನ್ನು ಗುರಿತಿಸಲು ಬಳಸಲಾಗುತ್ತದೆ, ಅದರ ಸ್ಥಾನಾತ್ಮಕ ಗುಣಗಳು ಅವುಗಳ ಪ್ರಮಾಣ ಮತ್ತು ಸ್ಥಾನ ಎರಡರ ಮೇಲೆ ಅವಲಂಬಿತವಾಗಿದೆ. [೩] [೪] ಅಂತಹ ನಕ್ಷತ್ರಗಳಲ್ಲಿ ಓಮಿಕ್ರಾನ್ ಆಂಡ್ರೊಮಿಡ, ಓಮಿಕ್ರಾನ್ ಸೆಟಿ ಮತ್ತು ಓಮಿಕ್ರಾನ್ ಪರ್ಸಿ ಸೇರಿವೆ.

ಕ್ಲಾಡಿಯಸ್ ಟಾಲೆಮಿಯ (c. 100–170 ) ಆಕಾಶಕಾಯಗಳ ಚಲನೆಗಳನ್ನು ಅಭ್ಯಾಸ ಮಾಡುವ (ಅಲ್ಮಾಜೆಸ್ಟ್ ) ೧ ರಿಂದ ೫೯ ರವರೆಗಿನ (ಅಂದರೆ ೬೦ ಅಧಾರ್ ಸಂಖ್ಯೆ) ಸಂಖ್ಯೆಗಳ ಕೋಷ್ಟಕಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ [lower-alpha ೩] ಗ್ರೀಕ್ ಸಂಖ್ಯೆಗಳಿಗೆ ಪ್ರತಿನಿಧಿಸಲಾಗುತ್ತದೆ: ′ α . . . ′ νθ . ಓಮಿಕ್ರಾನ್ ಅಕ್ಷರವು [ಪ್ರಮಾಣಿತ ಪದ್ದತಿಯಲ್ಲಿ 70 ( ′ ο) ಪ್ರತಿನಿಧಿಸುತ್ತದೆ] ೬೦ ಅಧಾರ್ ಸಂಖ್ಯೆಗಳ ಪದ್ದತಿಯಲ್ಲಿ ( ಸೆಕ್ಸಜೆಸಿಮಲ್‌ನಲ್ಲಿ)ಬಳಸದ ಕಾರಣ, ಖಾಲಿ ಸಂಖ್ಯೆಯ ಕೋಶವನ್ನು ಪ್ರತಿನಿಧಿಸಲು ಇದನ್ನು ಮರು ಬಳಸಲಾಗಿದೆ. ಕೆಲವು ನಿರೂಪಣೆಗಳಲ್ಲಿ ಕೋಶವನ್ನು ಖಾಲಿ ಬಿಡಲಾಗಿದೆ (ಏನೂ ಇಲ್ಲ = ಮೌಲ್ಯ ಶೂನ್ಯ), ಆದರೆ ನಕಲು ಮಾಡುವ ದೋಷಗಳನ್ನು ತಪ್ಪಿಸಲು, ಓಮಿಕ್ರಾನ್‌ನೊಂದಿಗೆ ಶೂನ್ಯ ಕೋಶವನ್ನು ಧನಾತ್ಮಕವಾಗಿ ಗುರುತಿಸಲು ಆದ್ಯತೆ ನೀಡಲಾಯಿತು, ಅದೇ ರೀತಿಯಲ್ಲಿ ಆಧುನಿಕ ಕೋಷ್ಟಕಗಳಲ್ಲಿ ಖಾಲಿ ಕೋಶಗಳನ್ನು ಅಡ್ಡಗೆರೆಗಳಿಂದ ತುಂಬಿಸಲಾಗುತ್ತದೆ ( —). ಓಮಿಕ್ರಾನ್ ಮತ್ತು ಡ್ಯಾಶ್ ಎರಡನ್ನೂ ಬಳಸುವುದು ತಪ್ಪಲ್ಲ , ಯಾಕೆಂದರೆ, ಕೋಶವು ನಿಜವಾಗಿ ಖಾಲಿಯಾಗಿರಬೇಕು ಎಂದು ಸೂಚಿಸುತ್ತದೆ. ಕಾಕತಾಳೀಯವಾಗಿ, ಪ್ರಾಚೀನ ಶೂನ್ಯ-ಮೌಲ್ಯದ ಓಮಿಕ್ರಾನ್ ( ο ) ಆಧುನಿಕ ಹಿಂದೂ-ಅರೇಬಿಕ್ ಸೊನ್ನೆ (೦) ಅನ್ನು ಹೋಲುತ್ತದೆ.

ಔಷಧಿ ಬದಲಾಯಿಸಿ

ವಿಶ್ವ ಆರೋಗ್ಯ ಸಂಸ್ಥೆ (WHO) COVID-19 ಗೆ ಕಾರಣವಾಗುವ ವೈರಸ್ SARS-CoV‑2 ನ ಬದಲಾದ ರೂಪಾಂತರಗಳನ್ನು ವಿವರಿಸಲು ಗ್ರೀಕ್ ವರ್ಣಮಾಲೆಯನ್ನು ಬಳಸುತ್ತದೆ. [೫] ನವೆಂಬರ್ 26, 2021 ರಂದು, Omicron ಅನ್ನು B.1.1.529 ಬದಲಾದ ರೂಪಾಂತರಕ್ಕೆ ನಿಯೋಜಿಸಿ ಹೆಸರಿಸಲಾಗಿದೆ. [೬]

ಅಕ್ಷರ ಸಂಕೇತೀಕರಣ ಬದಲಾಯಿಸಿ

  • ಗ್ರೀಕ್ ಓಮಿಕ್ರಾನ್ / ಕಾಪ್ಟಿಕ್ ಒ [೭]
Character information
PreviewΟο
Unicode nameGREEK CAPITAL LETTER OMICRONGREEK SMALL LETTER OMICRONCOPTIC CAPITAL LETTER OCOPTIC SMALL LETTER O
Encodingsdecimalhexdechexdechexdechex
Unicode927U+039F959U+03BF11422U+2C9E11423U+2C9F
UTF-8206 159CE 9F206 191CE BF226 178 158E2 B2 9E226 178 159E2 B2 9F
Numeric character reference&#927;&#x39F;&#959;&#x3BF;&#11422;&#x2C9E;&#11423;&#x2C9F;
Named character reference&Omicron;&omicron;
DOS Greek1428E166A6
DOS Greek-2190BE233E9
Windows 1253207CF239EF
  • ಗಣಿತದ ಓಮಿಕ್ರಾನ್ [೮]

ಈ ಅಕ್ಷರಗಳನ್ನು ಗಣಿತದ ಸಂಕೇತಗಳಾಗಿ ಮಾತ್ರ ಬಳಸಲಾಗುತ್ತದೆ. ಪಠ್ಯ ಶೈಲಿಯನ್ನು ಸೂಚಿಸಲು ಬದಲಾವಣೆಗಳೊಂದಿಗೆ ಸಾಮಾನ್ಯ ಗ್ರೀಕ್ ಅಕ್ಷರಗಳನ್ನು ಬಳಸಿಕೊಂಡು ಸೊಗಸಾದ ಗ್ರೀಕ್ ಪಠ್ಯವನ್ನು ರೂಪಾಂತರಿಸಿ ಮರೆಮಾಚಬೇಕು.

ಉಲ್ಲೇಖಗಳು ಬದಲಾಯಿಸಿ

  1. The Greek Alphabet
  2. Knuth, Donald (April–June 1976). "Big Omicron and big Omega and big Theta" (PDF). SIGACT News. 8 (2): 18–24. doi:10.1145/1008328.1008329. Archived from the original (PDF) on 2021-11-30. Retrieved 2022-02-16.
  3. Martin, Martha Evans (1907). The Friendly Stars (1st ed.). New York: Harper & Brothers Publishers. p. 135. Retrieved 8 February 2016.
  4. Wilk, Stephen R. (2007). Medusa: Solving the Mystery of the Gorgon (1st ed.). New York; London: Oxford University Press. p. 201. ISBN 9780199887736. Retrieved 8 February 2016.
  5. "Embrace the WHO's new naming system for coronavirus variants". Nature (in ಇಂಗ್ಲಿಷ್). 594 (7862): 149. 2021-06-09. Bibcode:2021Natur.594..149.. doi:10.1038/d41586-021-01508-8. PMID 34108702.
  6. "Classification of Omicron (B.1.1.529): SARS-CoV-2 Variant of Concern". World Health Organization. Retrieved 26 November 2021.
  7. "Greek and Coptic (Range: 0370–03FF)" (PDF). The Unicode Standard, Ver. 8.0. Unicode, Inc. 2015. Retrieved 8 February 2016.
  8. "Mathematical Alphanumeric Symbols (Range: 1D400–1D7FF)" (PDF). The Unicode Standard, Ver. 8.0. Unicode, Inc. 2015. Retrieved 8 February 2016.


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found

🔥 Top keywords: ಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಕುವೆಂಪುವಿಶ್ವ ಪರಿಸರ ದಿನಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆಡಾ ಬ್ರೋಕನ್ನಡ ಗುಣಿತಾಕ್ಷರಗಳುಕನ್ನಡಗಿಡಮೂಲಿಕೆಗಳ ಔಷಧಿಭಾರತದ ಸಂವಿಧಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಬಸವೇಶ್ವರಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುದ.ರಾ.ಬೇಂದ್ರೆಛತ್ರಪತಿ ಶಿವಾಜಿಕರ್ನಾಟಕವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುಜಲ ಮಾಲಿನ್ಯಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಕೆ. ಅಣ್ಣಾಮಲೈಕನ್ನಡ ವ್ಯಾಕರಣತತ್ಸಮ-ತದ್ಭವವಿಭಕ್ತಿ ಪ್ರತ್ಯಯಗಳುಜಾನಪದಪರಮಾಣುಲೋಕಸಭೆಕೇಂದ್ರಾಡಳಿತ ಪ್ರದೇಶಗಳುವಿಜಯನಗರ ಸಾಮ್ರಾಜ್ಯ