ಕೋರೆದಾಡೆ

ಕೋರೆದಾಡೆಗಳು (ದಂತ, ಕೊಂಬು) ಉದ್ದವಾದ, ನಿರಂತರವಾಗಿ ಬೆಳೆಯುತ್ತಿರುವ ಹಲ್ಲುಗಳಾಗಿರುತ್ತವೆ. ಸಾಮಾನ್ಯವಾಗಿ (ಆದರೆ ಯಾವಾಗಾಲೂ ಅಲ್ಲ) ಜೋಡಿಗಳಲ್ಲಿ ಬೆಳೆಯುತ್ತವೆ ಮತ್ತು ಕೆಲವು ಸಸ್ತನಿ ಪ್ರಾಣಿಗಳಲ್ಲಿ ಬಾಯಿಯನ್ನು ಮೀರಿ ಹೊರಚಾಚಿರುತ್ತವೆ. ಇವು ಅತ್ಯಂತ ಸಾಮಾನ್ಯವಾಗಿ ಕೋರೆಹಲ್ಲುಗಳಾಗಿರುತ್ತವೆ, ಉದಾಹರಣೆಗೆ ನರಹುಲಿಗಳು, ಹಂದಿಗಳು ಮತ್ತು ಕಡಲಸಿಂಹಗಳಲ್ಲಿ. ಆನೆಗಳ ವಿಷಯದಲ್ಲಿ ಇವು ಉದ್ದವಾದ ಬಾಚಿಹಲ್ಲುಗಳಾಗಿರುತ್ತವೆ. ಬಹುತೇಕ ಕೋರೆದಾಡೆಯಿರುವ ಪ್ರಾಣಿಗಳಲ್ಲಿ ಗಂಡು ಮತ್ತು ಹೆಣ್ಣು ಎರಡೂ ಕೋರೆದಾಡೆಗಳನ್ನು ಹೊಂದಿರುತ್ತವೆ, ಆದರೆ ಗಂಡಿನ ಕೋರೆದಾಡೆಗಳು ಹೆಚ್ಚು ದೊಡ್ಡದಾಗಿರುತ್ತವೆ. ಕೋರೆದಾಡೆಗಳು ಸಾಮಾನ್ಯವಾಗಿ ಬಾಗಿರುತ್ತವೆ, ಆದರೆ ನಾರ್ವಾಲ್‍ನ ಏಕೈಕ ಕೋರೆದಾಡೆಯು ನೇರವಾಗಿದ್ದು ಸುರುಳಿಯಾಕಾರದ ರಚನೆ ಹೊಂದಿರುತ್ತದೆ. ಹಲ್ಲುಗಳ ಬೇರುಗಳ ಶೃಂಗದ ರಂಧ್ರಗಳಲ್ಲಿನ ರೂಪಕಾರಕ ಅಂಗಾಂಶಗಳಿಂದ ನಿರಂತರ ಬೆಳವಣಿಗೆಯು ಸಾಧ್ಯವಾಗುತ್ತದೆ. ಹಿಂದಿನ ಕಾಲದಲ್ಲಿ, ೯೦ ಕೆ.ಜಿ.ಗಿಂತ ಹೆಚ್ಚು ತೂಕವಿರುವ ಆನೆಯ ದಂತಗಳು ಅಸಾಮಾನ್ಯವಾಗಿರಲಿಲ್ಲ, ಆದರೆ ಇಂದು ೪೫ ಕೆ.ಜಿ.ಗಿಂತ ಹೆಚ್ಚು ತೂಕದ ದಂತವನ್ನು ನೋಡುವುದು ಅಪರೂಪ.[೧]

ಆನೆ

ಉಲ್ಲೇಖಗಳು ಬದಲಾಯಿಸಿ

  1. "Still Life" by Bryan Christy. National Geographic Magazine, August, 2015, pp. 97, 104.
🔥 Top keywords: ಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಕುವೆಂಪುವಿಶ್ವ ಪರಿಸರ ದಿನಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆಡಾ ಬ್ರೋಕನ್ನಡ ಗುಣಿತಾಕ್ಷರಗಳುಕನ್ನಡಗಿಡಮೂಲಿಕೆಗಳ ಔಷಧಿಭಾರತದ ಸಂವಿಧಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಬಸವೇಶ್ವರಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುದ.ರಾ.ಬೇಂದ್ರೆಛತ್ರಪತಿ ಶಿವಾಜಿಕರ್ನಾಟಕವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುಜಲ ಮಾಲಿನ್ಯಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಕೆ. ಅಣ್ಣಾಮಲೈಕನ್ನಡ ವ್ಯಾಕರಣತತ್ಸಮ-ತದ್ಭವವಿಭಕ್ತಿ ಪ್ರತ್ಯಯಗಳುಜಾನಪದಪರಮಾಣುಲೋಕಸಭೆಕೇಂದ್ರಾಡಳಿತ ಪ್ರದೇಶಗಳುವಿಜಯನಗರ ಸಾಮ್ರಾಜ್ಯ