ಕೋರೆಹಲ್ಲು

ಸಸ್ತನಿಗಳ ಬಾಯಿಯ ರಚನಾಶಾಸ್ತ್ರದಲ್ಲಿ, ಕೋರೆಹಲ್ಲುಗಳು ಎಂದರೆ ತುಲನಾತ್ಮಕವಾಗಿ ಉದ್ದ ಮತ್ತು ಚೂಪಾಗಿರುವ ಹಲ್ಲುಗಳು. ಆದರೆ, ಅವುಗಳು ಹೆಚ್ಚು ಚಪ್ಪಟೆಯಾಗಿ ಕಾಣಿಸಬಹುದು. ಈ ಕಾರಣದಿಂದ ಇವು ಬಾಚಿಹಲ್ಲುಗಳನ್ನು ಹೋಲುತ್ತವೆ. ಇವು ಚೆನ್ನಾಗಿ ಅಭಿವೃದ್ಧಿಯಾಗಿದ್ದು, ಇವನ್ನು ಮುಖ್ಯವಾಗಿ ಆಹಾರವನ್ನು ಪ್ರತ್ಯೇಕಿಸುವ ಸಲುವಾಗಿ ಅದನ್ನು ಹಿಡಿದಿಡಲು, ಮತ್ತು ಸಾಂದರ್ಭಿಕವಾಗಿ ಆಯುಧಗಳಾಗಿ ಬಳಸಲಾಗುತ್ತದೆ. ಹಲವುವೇಳೆ ಇವು ಸಸ್ತನಿಯ ಬಾಯಿಯಲ್ಲಿನ ಅತ್ಯಂತ ದೊಡ್ಡ ಹಲ್ಲುಗಳಾಗಿರುತ್ತವೆ. ಕೋರೆಹಲ್ಲುಗಳನ್ನು ವಿಕಸಿಸಿಕೊಂಡ ಬಹುತೇಕ ಪ್ರಜಾತಿಗಳ ಸದಸ್ಯರು ಸಾಮಾನ್ಯವಾಗಿ ನಾಲ್ಕು ಕೋರೆಹಲ್ಲುಗಳನ್ನು ಹೊಂದಿರುತ್ತವೆ, ಮೇಲಿನ ದವಡೆಯಲ್ಲಿ ಎರಡು ಮತ್ತು ಕೆಳಗಿನ ದವಡೆಯಲ್ಲಿ ಎರಡು. ಪ್ರತಿ ದವಡೆಯಲ್ಲಿ ಬಾಚಿಹಲ್ಲುಗಳು ಇವನ್ನು ಪ್ರತ್ಯೇಕಿಸುತ್ತವೆ; ಮಾನವರು ಮತ್ತು ನಾಯಿಗಳು ಉದಾಹರಣೆಗಳಾಗಿವೆ. ಬಹುತೇಕ ಪ್ರಜಾತಿಗಳಲ್ಲಿ, ಕೋರೆಹಲ್ಲುಗಳು ದವಡೆ ಎಲುಬಿನಲ್ಲಿನ ಅತ್ಯಂತ ಮುಂಭಾಗದ ಹಲ್ಲುಗಳಾಗಿರುತ್ತವೆ. ಕೋರೆಹಲ್ಲುಗಳು ಬಾಚಿಹಲ್ಲುಗಳಿಗಿಂತ ಹೆಚ್ಚು ದೊಡ್ಡ ಮತ್ತು ಹೆಚ್ಚು ಬಲಶಾಲಿಯಾಗಿರುತ್ತವೆ, ಮತ್ತು ಅವುಗಳ ಬೇರುಗಳು ಮೂಳೆಗಳಲ್ಲಿ ಆಳವಾಗಿ ಇಳಿದು, ಮೇಲ್ಮೈ ಮೇಲೆ ಒಳ್ಳೆ ಗುರುತುಗಳಿರುವ ಎದ್ದುಕೊಂಡಿರುವ ಭಾಗಗಳನ್ನು ಉಂಟುಮಾಡುತ್ತವೆ.

ಉದ್ದವಾದ, ಚೂಪಾಗಿರುವ ಹಲ್ಲುಗಳೇ ಕೋರೆಹಲ್ಲುಗಳು
🔥 Top keywords: ಮುಖ್ಯ ಪುಟಕುವೆಂಪುಕನ್ನಡ ಅಕ್ಷರಮಾಲೆಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆವಿಶೇಷ:Searchವಿಶ್ವ ತಂಬಾಕು ನಿಷೇಧ ದಿನಕನ್ನಡಶಿವರಾಮ ಕಾರಂತದ.ರಾ.ಬೇಂದ್ರೆಬಸವೇಶ್ವರಭಾರತದ ಸಂವಿಧಾನಗೌತಮ ಬುದ್ಧಜಾನಪದಅಹಲ್ಯಾ ಬಾಯಿ ಹೋಳ್ಕರಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಕರ್ನಾಟಕದ ಏಕೀಕರಣಚಂದ್ರಶೇಖರ ಕಂಬಾರಅಕ್ಕಮಹಾದೇವಿಯು.ಆರ್.ಅನಂತಮೂರ್ತಿಬಿ. ಆರ್. ಅಂಬೇಡ್ಕರ್ಗಿರೀಶ್ ಕಾರ್ನಾಡ್ಮಹಾತ್ಮ ಗಾಂಧಿವಿಶ್ವ ಪರಿಸರ ದಿನಭಾರತೀಯ ಮೂಲಭೂತ ಹಕ್ಕುಗಳುವರ್ಗೀಯ ವ್ಯಂಜನಸ್ವಾಮಿ ವಿವೇಕಾನಂದಕರ್ನಾಟಕಕರ್ನಾಟಕದ ಜಿಲ್ಲೆಗಳುಕನ್ನಡ ವ್ಯಾಕರಣಚರಕಆಲದ ಮರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುವಚನಕಾರರ ಅಂಕಿತ ನಾಮಗಳುವಿಭಕ್ತಿ ಪ್ರತ್ಯಯಗಳುವಚನ ಸಾಹಿತ್ಯ