ಹುಕ್ಕಾ (ಗುಡಗುಡಿ) ಸುವಾಸನೆಯುಕ್ತ ತಂಬಾಕು, ಅಥವಾ ಕೆಲವೊಮ್ಮೆ ಗಾಂಜಾ ಅಥವಾ ಅಫೀಮನ್ನು ಬಾಷ್ಪೀಕರಿಸಿ ಸೇದುವ ಒಂದು ಏಕ ಅಥವಾ ಬಹು ವಿಭಾಗಳುಳ್ಳ ಉಪಕರಣ. ಸೇದುವ ಮುನ್ನ ಇವುಗಳ ಧೂಮ/ಹೊಗೆಯನ್ನು ಹಲವುವೇಳೆ ಗಾಜು ಆಧಾರಿತ ನೀರಿನ ಪಾತ್ರೆಯ ಮೂಲಕ ಸಾಗಿಸಲಾಗುತ್ತದೆ.[೧]

ಹುಕ್ಕಾ ಸೇದುತ್ತಿರುವ ಒಬ್ಬ ವ್ಯಕ್ತಿ

ಹುಕ್ಕಾದ ಮೂಲಕ ಧೂಮಪಾನ ಮಾಡುವುದರಿಂದ ಆರೋಗ್ಯದ ಮೇಲೆ ಉಂಟಾಗುವ ಅಪಾಯಗಳಲ್ಲಿ ನೀರಿನಿಂದ ಶೋಧನೆಯಾಗದ ವಿಷಕಾರಿ ರಾಸಾಯನಿಕಗಳಿಗೆ ಒಡ್ಡಿಕೆ ಮತ್ತು ಹುಕ್ಕಾಗಳನ್ನು ಹಂಚಿಕೊಳ್ಳಲಾದಾಗ ಸಾಂಕ್ರಾಮಿಕ ರೋಗದ ಅಪಾಯ ಸೇರಿವೆ.

ಹುಕ್ಕಾದ ಹುಟ್ಟಿಗೆ ಸಂಬಂಧಿಸಿದಂತೆ ಎರಡು ಸಿದ್ಧಾಂತಗಳಿವೆ. ಮೊದಲನೆಯದೆಂದರೆ ಜೆಸುಟರು ಮಧ್ಯಕಾಲೀನ ಭಾರತಕ್ಕೆ ತಂಬಾಕುವನ್ನು ಪರಿಚಯಿಸಿದ ನಂತರ, ಅಕ್ಬರ್‌ನ ಒಬ್ಬ ವೈದ್ಯನಾಗಿದ್ದ ಅಬುಲ್ ಫ಼ತ್ ಗಿಲಾನಿ ತಂಬಾಕಿನ ಚಿಲುಮೆಯನ್ನು ಮೊಘಲ್ ಸಾಮ್ರಾಜ್ಯದ ಕಾಲದಲ್ಲಿ ಫತೇಪುರ್ ಸಿಕ್ರಿಯಲ್ಲಿ ಆವಿಷ್ಕರಿಸಿದನು. ಭಾರತೀಯ ಉಪಖಂಡದಿಂದ ಹುಕ್ಕಾ ನಿಕಟಪ್ರಾಚ್ಯಕ್ಕೆ ಹರಡಿತು ಮತ್ತು ಅಲ್ಲಿ ಇದರ ಪ್ರಕ್ರಿಯೆಯನ್ನು ಮಾರ್ಪಡಿಸಲಾಯಿತು.

ಉಲ್ಲೇಖಗಳು ಬದಲಾಯಿಸಿ

  1. The cyclopaedia of India and of Jordan and eastern and southern Asia, Volume 2. Bernard Quaritch. 1885. Retrieved 2007-08-01. HOOKAH. Hindi. The Indian pipe and apparatus for smoking.
🔥 Top keywords: ಕುವೆಂಪುಮುಖ್ಯ ಪುಟಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗಾದೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡಭಾರತದ ರಾಷ್ಟ್ರಪತಿಗಳ ಪಟ್ಟಿದೇವನೂರು ಮಹಾದೇವಕನ್ನಡ ಗುಣಿತಾಕ್ಷರಗಳುಬಸವೇಶ್ವರಭಾರತದ ಸಂವಿಧಾನಪ್ರಲೋಭನೆದ.ರಾ.ಬೇಂದ್ರೆಜಲ ಮಾಲಿನ್ಯಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುಶಿವರಾಮ ಕಾರಂತಕರ್ನಾಟಕದ ಜಿಲ್ಲೆಗಳುಕರ್ನಾಟಕಬಿ. ಆರ್. ಅಂಬೇಡ್ಕರ್ಗೌತಮ ಬುದ್ಧನಿರ್ಮಲಾ ಸೀತಾರಾಮನ್ಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಕರ್ನಾಟಕದ ಮುಖ್ಯಮಂತ್ರಿಗಳುತತ್ಸಮ-ತದ್ಭವಮಾಸ್ತಿ ವೆಂಕಟೇಶ ಅಯ್ಯಂಗಾರ್ಪೂರ್ಣಚಂದ್ರ ತೇಜಸ್ವಿವಿಭಕ್ತಿ ಪ್ರತ್ಯಯಗಳುವರ್ಗೀಯ ವ್ಯಂಜನಕೇಂದ್ರಾಡಳಿತ ಪ್ರದೇಶಗಳುಕನ್ನಡ ಸಾಹಿತ್ಯರಾಷ್ಟ್ರೀಯ ಸೇವಾ ಯೋಜನೆಮಹಾತ್ಮ ಗಾಂಧಿಕರ್ನಾಟಕದ ಇತಿಹಾಸಯು.ಆರ್.ಅನಂತಮೂರ್ತಿ