ಷೆವ್ರಟಿನ್

ಷೆವ್ರಟಿನ್ ಜಿಂಕೆಯಂತಿದ್ದು ಮೊಲದ ಗಾತ್ರವಿರುವ ಪುಟ್ಟ ಜೀವಿ. ಎರಳೆ ಎಂದೂ ಹೆಸರಿದೆ. ಆಡುಭಾಷೆಯಲ್ಲಿ ಕುರೆ, ಕುರಾಂಡಿ ಎಂಬ ಹೆಸರುಗಳೂ ಇವೆ. ಎರಳೆ ಸ್ತನಿ ವರ್ಗದ ಆರ್ಟಿಯೋಡ್ಯಾಕ್ಟೈಲಾ ಸರಣಿಯ ಟ್ರಾಗ್ಯುಲಿಡೇ ಕುಟುಂಬಕ್ಕೆ ಸೇರಿದೆ.[೧][೨] ಎರಳೆಗಳಲ್ಲಿ ಒಟ್ಟು 4 ಪ್ರಭೇದಗಳಿವೆ. ಆಫ್ರಿಕದ ಎರಳೆ (ಹೈಮಾಸ್ಕಸ್ ಅಕ್ವಾಟಿಕಸ್) ಘಾನ, ಕಾಂಗೋ ಹಾಗೂ ಗಿನಿಯ ಕಾಡುಗಳಲ್ಲೂ,[೩] ಚುಕ್ಕೆ ಎರಳೆ (ಟ್ರಾಗ್ಯುಲಸ್ ಮೆಮಿನ) ದಕ್ಷಿಣ ಭಾರತ, ಶ್ರೀಲಂಕಾ ಹಾಗೂ ನೇಪಾಲದಲ್ಲಿಯೂ, ಮಲಯದ ಎರಡು ಪ್ರಭೇದಗಳು (ಟ್ರಾಗ್ಯುಲಸ್ ನಾಪು ಹಾಗೂ ಟ್ರಾಗ್ಯುಲಸ್ ಜಾವಾನಿಕಸ್) ದಕ್ಷಿಣ ಬರ್ಮ, ಜಾವ, ಸುಮಾತ್ರ, ಇಂಡೊಚೀನದ ಕಾಡುಗಳಲ್ಲಿಯೂ ಕಂಡುಬರುತ್ತವೆ.

ಷೆವ್ರಟಿನ್
Temporal range: late Eocene–Recent
ಟ್ರ್ಯಾಗುಲಸ್ ಕಂಚಿಲ್
Scientific classification e
ಕ್ಷೇತ್ರ:ಯೂಕ್ಯಾರ್ಯೋಟಾ
ಸಾಮ್ರಾಜ್ಯ:ಅನಿಮೇಲಿಯ
ವಿಭಾಗ:ಕಾರ್ಡೇಟಾ
ವರ್ಗ:ಮ್ಯಾಮೇಲಿಯಾ
ಗಣ:ಆರ್ಟಿಯೊಡ್ಯಾಕ್ಟೈಲ
ಉಪಗಣ:Ruminantia
ಕೆಳಗಣ:ಟ್ರ್ಯಾಗ್ಯುಲಿನಾ
ಕುಟುಂಬ:ಟ್ರ್ಯಾಗ್ಯುಲಿಡೇ
H. Milne-Edwards, 1864
Type genus
ಟ್ರ್ಯಾಗ್ಯುಲಸ್
Brisson, 1762
ಜಾತಿಗಳು
  • ಹಾಯಮಾಸ್ಕಸ್
  • ಮಾಸ್ಕಿಯೋಲಾ
  • ಟ್ರ್ಯಾಗ್ಯುಲಸ್

ದೇಹರಚನೆ ಬದಲಾಯಿಸಿ

ಭಾರತದಲ್ಲಿ ಕಾಣುವ ಎರಳೆಯ ಉದ್ದ 40-45 ಸೆಂಮೀ, ಬಾಲ 2.5-5 ಸೆಂಮೀ, ಎತ್ತರ 25-30 ಸೆಂಮೀ, ತೂಕ 2.25-2.7 ಕೆಜಿ. ತುಪ್ಪಳದ ಬಣ್ಣ ಕಂದು, ಪಾರ್ಶ್ವಗಳಲ್ಲಿ ನವುರು ಬಿಳಿ ಬಣ್ಣದ ಅನುನೀಳ ಪಟ್ಟೆಗಳು ಮತ್ತು ಎತ್ತರ ಬೆನ್ನಿನ ಹಿಂಭಾಗದಲ್ಲಿಯೂ ಗಂಟಲಿನ ಕೆಳಗಡೆಯೂ ತಲಾ 3 ಅಡ್ಡ ಪಟ್ಟೆಗಳಿವೆ. ಕಾಲುಗಳು ತೆಳು. ದೇಹದ ಕೆಳಗೆ ಬಿಳಿಯ ತುಪ್ಪಳ. ಎಲ್ಲ ಕಾಲುಗಳಲ್ಲಿಯೂ 4 ಬೆರಳುಗಳು ಇದ್ದು ಪಾರ್ಶ್ವದ ಚಿಕ್ಕ ಕಾಲ್ಬೆರಳುಗಳಲ್ಲಿ ಎಲುಬುಗಳು ಪೂರ್ತಿಯಾಗಿರುತ್ತವೆ.

ನಡವಳಿಕೆ ಬದಲಾಯಿಸಿ

ಭಾರತದ ಕಾಡುಗಳಲ್ಲಿ ಅಥವಾ ಬಂಡೆ ಹುಲ್ಲುಗಾವಲುಗಳಿರುವ ಕಾಡುಗಳಲ್ಲಿ ಎರಳೆ ವಾಸಿಸುತ್ತದೆ. ಬಂಡೆ ಬಿರುಕುಗಳಲ್ಲಿ ಅಥವಾ ದೊಡ್ಡ ಬಂಡೆಯ ಕೆಳಗೆ ಅಡಗಿಕೊಂಡಿರುತ್ತದೆ. ನಾಯಿ ಬೆನ್ನಟ್ಟಿದಾಗ ತಾನು ನಿಂತಿರುವ ಟೊಳ್ಳಿನಿಂದ ಒಳಗೆ ತೆವಳಿ ಮರೆಯಾಗುತ್ತದೆ. ಮುಂಜಾವಿನಲ್ಲಿ ಅಥವಾ ಇರುಳಿನಲ್ಲಿ ಆಹಾರಕ್ಕಾಗಿ ಹೊರಬರುತ್ತದೆ. ಬೆದರಿದಾಗ ಥಟ್ಟನೆ ಪರಾರಿಯಾಗುತ್ತದೆ.

ಸಂತಾನೋತ್ಪತ್ತಿ ಬದಲಾಯಿಸಿ

ಗಂಡು ಸಾಮಾನ್ಯವಾಗಿ ಒಂಟಿ. ಸಂತಾನೋತ್ಪತ್ತಿ ಪ್ರಾಯದಲ್ಲಿ ಮಾತ್ರ ಹೆಣ್ಣಿನೊಂದಿಗೆ ಜೊತೆಗೂಡುತ್ತದೆ. ಗರ್ಭಾವಧಿ ಸು. 6 ತಿಂಗಳು. ಹೆಣ್ಣು ಮಳೆಗಾಲದ ಅನಂತರ ಅಥವಾ ಚಳಿಗಾಲದಲ್ಲಿ 2 ಮರಿಗಳಿಗೆ ಜನ್ಮ ನೀಡುತ್ತದೆ.

ಇತರ ವಿವರಗಳು ಬದಲಾಯಿಸಿ

ಸ್ವಭಾವತಃ ಅಂಜುಬುರುಕವಾದ ಈ ಪ್ರಾಣಿಯನ್ನು ಪಳಗಿಸುವುದು ಸುಲಭ.

ಭೂವಿಜ್ಞಾನದ ದೃಷ್ಟಿಯಿಂದ ಷೆವ್ರಟಿನ್ ಅತಿ ಪ್ರಾಚೀನ ಪ್ರಾಣಿ. ಸು. 50 ದಶಲಕ್ಷ ವರ್ಷಗಳ ಹಿಂದಿನ ಈಯೊಸೀನ್ ಯುಗದ ಉತ್ತರ ಭಾಗದಲ್ಲಿ ಎರಳೆಗಳು ಜೀವಿಸಿದ್ದುವು. ಆಗ ಯಾವುದೇ ಜಿಂಕೆ ಅಥವಾ ಕೊಂಬುಗಳಿರುವ, ಬೆರಳ ತುದಿಗಳ ಮೇಲೆ ನಡೆಯುವ, ಸ್ತನಿಗಳ ವಿಕಾಸವಾಗಿರಲಿಲ್ಲ. ಆದ್ದರಿಂದ ಎಲ್ಲ ಮೆಲುಕು ಹಾಕುವ ಸ್ತನಿಗಳ ಪೂರ್ವಜರು ಷೆವ್ರಟಿನ್‌ಗಳೆಂದು ಊಹಿಸಬಹುದು.

ಉಲ್ಲೇಖಗಳು ಬದಲಾಯಿಸಿ

  1. "Chevrotains (Tragulidae) ." Grzimek's Animal Life Encyclopedia. . Encyclopedia.com. 15 Nov. 2023 <https://www.encyclopedia.com>.
  2. "Chevrotain." New World Encyclopedia, . 29 Dec 2014, 17:29 UTC. 3 Dec 2023, 17:56 <https://www.newworldencyclopedia.org/p/index.php?title=Chevrotain&oldid=986095>.
  3. Nowak, R.M., ed. (1999). Walker's Mammals of the World (6th ed.). Baltimore, MD: Johns Hopkins University Press.

ಹೊರಗಿನ ಕೊಂಡಿಗಳು ಬದಲಾಯಿಸಿ

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
🔥 Top keywords: ಮುಖ್ಯ ಪುಟಷರಾಯಿಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಅಕ್ಷರಮಾಲೆಗಾದೆಪಕ್ಷಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಟಿಬೆಟ್ದ.ರಾ.ಬೇಂದ್ರೆ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಬಸವೇಶ್ವರಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿಶ್ವ ಪರಿಸರ ದಿನಶಿವರಾಮ ಕಾರಂತಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗೌತಮ ಬುದ್ಧಅಕ್ಕಮಹಾದೇವಿಕರ್ನಾಟಕಕನ್ನಡ ಸಂಧಿಭಾರತದ ರಾಷ್ಟ್ರಪತಿಗಳ ಪಟ್ಟಿಜಾನಪದನಾಲ್ವಡಿ ಕೃಷ್ಣರಾಜ ಒಡೆಯರುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಭಾರತೀಯ ಮೂಲಭೂತ ಹಕ್ಕುಗಳುಕನ್ನಡ ವ್ಯಾಕರಣಕರ್ನಾಟಕದ ಜಾನಪದ ಕಲೆಗಳುಪರಿಪೂರ್ಣ ಪೈಪೋಟಿಲೋಕಸಭೆಜನಪದ ಕಲೆಗಳು