ಮುಲ್ಲಾ ಶಬ್ದವು "ಪಾದ್ರಿ", "ಒಡೆಯ" ಹಾಗೂ "ಪೋಷಕ" ಎಂಬ ಅರ್ಥದ ಅರಬ್ಬೀ ಶಬ್ದವಾದ ಮವ್ಲಾದಿಂದ ವ್ಯುತ್ಪನ್ನವಾಗಿದೆ. ಆದರೆ ಕುರಾನಿನಲ್ಲಿ ದ್ವಂದ್ವಾರ್ಥ ಕೊಡುವ ರೀತಿಯಲ್ಲಿ ಬಳಸಲಾಗಿರುವುದರಿಂದ, ಕೆಲವು ಪ್ರಕಾಶಕರು ಧಾರ್ಮಿಕ ಪದವಿಯಾಗಿ ಇದರ ಬಳಕೆಯು ಸೂಕ್ತವಲ್ಲ ಎಂದು ವರ್ಣಿಸಿದ್ದಾರೆ.[೧] ಈ ಪದವನ್ನು ಕೆಲವೊಮ್ಮೆ ಇಸ್ಲಾಮೀ ದೇವತಾಶಾಸ್ತ್ರ ಹಾಗೂ ಶರಿಯಾದಲ್ಲಿ ಶಿಕ್ಷಣ ಪಡೆದ ಮುಸ್ಲಿಮ್ ಪುರುಷನಿಗೆ ಅನ್ವಯಿಸಲಾಗುತ್ತದೆ. ಮುಸ್ಲಿಮ್ ಜಗತ್ತಿನ ದೊಡ್ಡ ಭಾಗಗಳಲ್ಲಿ, ವಿಶೇಷವಾಗಿ ಇರಾನ್, ಪಾಕಿಸ್ತಾನ್, ಅಫ಼್ಘಾನಿಸ್ತಾನ್, ದಕ್ಷಿಣ ಏಷ್ಯಾ ಮುಂತಾದ ಕಡೆ, ಇದು ಸಾಮಾನ್ಯವಾಗಿ ಸ್ಥಳೀಯ ಇಸ್ಲಾಮೀ ಪಾದ್ರಿಗಳು ಅಥವಾ ಮಸೀದಿಯ ಮುಖಂಡರಿಗೆ ನೀಡಲಾದ ಹೆಸರಾಗಿದೆ.[೨]

ಮುಸ್ಲಿಮ್ ಜಗತ್ತಿನಲ್ಲಿ ಮುಲ್ಲಾ ಪದವು ಮುಖ್ಯವಾಗಿ ವಿದ್ಯಾವಂತ ಧಾರ್ಮಿಕ ಪುರುಷನಿಗೆ ಗೌರವಸೂಚಕ ಪದ ಎಂದು ಅರ್ಥಮಾಡಿಕೊಳ್ಳಲಾಗಿದೆ.[೩]

ಉಲ್ಲೇಖಗಳು ಬದಲಾಯಿಸಿ

  1. Esposito, John (2004). The Oxford Dictionary of Islam. p. 214.
  2. Roy, Olivier (1994). The Failure of Political Islam. Cambridge, Massachusetts: Harvard University Press. pp. 28–9. ISBN 0-674-29140-9.
  3. Taheri, Amir (1985). The Spirit of Allah: Khomeini and the Islamic Revolution. Bethesda, Md.: Adler & Adler. p. 53. ISBN 0-917561-04-X.
🔥 Top keywords: ಕನ್ನಡ ಅಕ್ಷರಮಾಲೆವಿಶೇಷ:Searchಸಹಾಯ:ಲಿಪ್ಯಂತರಮುಖ್ಯ ಪುಟಕುವೆಂಪುವಿಶ್ವ ಪರಿಸರ ದಿನಮಾಸ್ತಿ ವೆಂಕಟೇಶ ಅಯ್ಯಂಗಾರ್ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಗಾದೆಡಾ ಬ್ರೋಕನ್ನಡ ಗುಣಿತಾಕ್ಷರಗಳುಕನ್ನಡಗಿಡಮೂಲಿಕೆಗಳ ಔಷಧಿಭಾರತದ ಸಂವಿಧಾನಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕರ್ನಾಟಕದ ಜಿಲ್ಲೆಗಳುಬಸವೇಶ್ವರಕನ್ನಡ ಸಂಧಿಭಾರತೀಯ ಮೂಲಭೂತ ಹಕ್ಕುಗಳುದ.ರಾ.ಬೇಂದ್ರೆಛತ್ರಪತಿ ಶಿವಾಜಿಕರ್ನಾಟಕವರ್ಗೀಯ ವ್ಯಂಜನವಚನಕಾರರ ಅಂಕಿತ ನಾಮಗಳುಜಲ ಮಾಲಿನ್ಯಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಕೆ. ಅಣ್ಣಾಮಲೈಕನ್ನಡ ವ್ಯಾಕರಣತತ್ಸಮ-ತದ್ಭವವಿಭಕ್ತಿ ಪ್ರತ್ಯಯಗಳುಜಾನಪದಪರಮಾಣುಲೋಕಸಭೆಕೇಂದ್ರಾಡಳಿತ ಪ್ರದೇಶಗಳುವಿಜಯನಗರ ಸಾಮ್ರಾಜ್ಯ