ಭರತಮುನಿ

ಭರತ ಮುನಿ ಭಾರತದ ಖ್ಯಾತ ನಾಟ್ಯಶಾಸ್ತ್ರಜ್ಞ. ಇವರನ್ನು ಭಾರತದ ರಂಗಭೂಮಿಯ ಪಿತಾಮಹ ಎನ್ನಬಹುದು. ಇವರು ಬರೆದ ನಾಟ್ಯಶಾಸ್ತ್ರ ಎಂಬ ಗ್ರಂಥವು ಭಾರತದಲ್ಲಿ ನಾಟ್ಯ ಮತ್ತು ರಂಗಭೂಮಿಗೆ ಹೊಸ ದಿಶೆಯನ್ನು ತೋರಿದ ಗ್ರಂಥವಾಗಿದೆ. ನಾಟ್ಯಶಾಸ್ತ್ರ, ಕಾವ್ಯ ತತ್ವ ವಿವೇಚನೆಗೆ ಮಾತ್ರ ಸೀಮಿತವಾದ ಕೃತಿಯಲ್ಲ; ಇಡೀ ನಾಟಕ ಕಲೆಯ ಕುರಿತು ಒಂದು ಸಂಕ್ಷಿಪ್ತ ವಿಶ್ವಕೋಶವಾಗಿದೆ. ಈ ಗ್ರಂಥದಲ್ಲಿ ೩೬ ಅಧ್ಯಾಯಗಳಿದ್ದು, ಒಂದಕ್ಕಿಂತ ಹೆಚ್ಚು ವಿದ್ವಾಂಸರು ಬರೆದಿದ್ದಾರೆ ಎಂಬ ಸಂಶಯವಿದೆ. ಇದರ ಕಾಲ ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ ಒಂದನೇ ಶತಮಾನವೆಂದು ಅಂದಾಜಿಸಲಾಗಿದೆ.[೧].

ಭರತ ತನ್ನ ನಾಟ್ಯಶಾಸ್ತ್ರದ ಆರನೇ ಅಧ್ಯಾಯದಲ್ಲಿ ಈ ರಸಸೂತ್ರವನ್ನು ಹೇಳುತ್ತಾನೆ. ಅಂದರೆ ವಿಭಾನುಭಾವವ್ಯಭಿಚಾರಿಸಂಯೋಗಾತ್ ರಸ ನಿಷ್ಪತ್ತಿಃ - ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಅಥವಾ ಸಂಚಾರಿಭಾವಗಳ ಸಂಯೋಗದಿಂದ ರಸನಿಷ್ಪತ್ತಿ ಆಗುತ್ತದೆ. ಭರತ ಈ ನಾಲ್ಕು ಅಲಂಕಾರಗಳನ್ನು ಹೇಳುತ್ತಾನೆ - ಉಪಮಾ, ರೂಪಕ, ದೀಪಕ ಮತ್ತು ಯಮಕ ಅಲಂಕಾರಗಳು. ಅಲಂಕಾರಗಳ ನಂತರ ಕಾವ್ಯ ದೋಷಗಳನ್ನೂ ಗುಣಗಳನ್ನೂ ಎತ್ತಿಕೊಳ್ಳುತ್ತಾನೆ.

ಭರತನ ನಾಟ್ಯಶಾಸ್ತ್ರ, ನಾಟಕವೆಂದರೇನೆಂಬುದನ್ನು ಕುರಿತು ಹೇಳುವ ಈ ಮಾತನ್ನು ಮೊದಲು ಗಮನಿಸಬಹುದು:- ನೈಕಾತ್ತತೊ:ತ್ರ ಭರತಾಂ ದೇವಾನಾಂ ಚಾತ್ರ ಭಾವನಂ|. ತ್ರೈಲೋಕಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ||(1.೧೦೩)

ಎಂಟು ಸ್ಥಾಯಿ ಭಾವಗಳು

ಬದಲಾಯಿಸಿ
  1. ರತಿ - ಶೃಂಗಾರರಸ
  2. ಹಾಸ್ಯ - ಹಾಸ್ಯ
  3. ಶೋಕ - ಕರುಣ
  4. ಕ್ರೋಧ - ರೌದ್ರ
  5. ಉತ್ಸಾಹ - ವೀರ
  6. ಭಯ - ಭಯಾನಕ
  7. ಜಿಗುಪ್ಸೆ - ಬೀಭತ್ಸ
  8. ವಿಸ್ಮಯ - ಅದ್ಭುತ

ಎಂಟು ಸಾತ್ವಿಕ ಭಾವಗಳು

ಬದಲಾಯಿಸಿ
  1. ಮೈಮರೆಯುವಿಕೆ
  2. ಬೆವರುವುದು
  3. ರೋಮಚಕ
  4. ಸ್ವರಭೇದ
  5. ನಡುಕ
  6. ಮುಖದ ಬಣ್ಣ ಬದಲಾಗುವುದು
  7. ಕಂಬನಿ
  8. ಮೂರ್ಛೆ

ಸಂಚಾರಿ ಭಾವಗಳು

ಬದಲಾಯಿಸಿ

ಭರತ ತನ್ನ ನಾಟ್ಯಶಾಸ್ತ್ರದಲ್ಲಿ ಹೀಗೆ ನಿರ್ವೇದ, ಗ್ಲಾನಿ, ಶಂಕೆ, ಅಸೂಯೆ ಮೊದಲಾದ ೩೩ ಸಂಚಾರಿ ಭಾವಗಳನ್ನು ಹೇಳಿದ್ದಾನೆ.

ಉಲ್ಲೇಖಗಳು

ಬದಲಾಯಿಸಿ
  1. "Natyashastra (Indian drama treatise)". Britannica.com.

ಬಾಹ್ಯ ಸಂಪರ್ಕಗಳು

ಬದಲಾಯಿಸಿ
🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್