ಬಳ್ಳಿ (ಲತೆ) ಎಂದರೆ ಜೋಲು ಬೀಳುವ ಅಥವಾ ಆರೋಹಿ ಕಾಂಡಗಳು, ಲಿಯಾನಾಗಳು ಅಥವಾ ಹಬ್ಬುಕಾಂಡಗಳಂತಹ ಬೆಳವಣಿಗೆ ರೂಪದ ಯಾವುದೇ ಸಸ್ಯ.[೧]

ವೀಳ್ಯದೆಲೆ ಬಳ್ಳಿ, ಒಂದು ಹಬ್ಬುವ ಸಸ್ಯ

ಕೆಲವು ಸಸ್ಯಗಳು ಯಾವಾಗಲೂ ಬಳ್ಳಿಗಳಾಗಿ ಬೆಳೆದರೆ, ಕೆಲವು ಭಾಗಶಃ ಸಮಯ ಮಾತ್ರ ಬಳ್ಳಿಗಳಾಗಿ ಬೆಳೆಯುತ್ತವೆ. ಉದಾಹರಣೆಗೆ, ನಂಜು ಐವಿ ಹಾಗೂ ಬಿಟರ್‌ಸ್ವೀಟ್ ಗಿಡಗಳು ಆಧಾರವಿಲ್ಲದಾಗ ಎತ್ತರವಿಲ್ಲದ ಪೊದೆಗಳಾಗಿ ಬೆಳೆಯಬಲ್ಲವು, ಆದರೆ ಆಧಾರ ಲಭ್ಯವಿದ್ದಾಗ ಬಳ್ಳಿಗಳಾಗಿ ಮಾರ್ಪಾಡಾಗುತ್ತವೆ.[೨]

ಬಳ್ಳಿಯು ಉದ್ದನೆಯ ಕಾಂಡಗಳನ್ನು ಆಧರಿಸಿದ ಬೆಳವಣಿಗೆ ರೂಪವನ್ನು ಪ್ರದರ್ಶಿಸುತ್ತದೆ. ಇದರ ಉದ್ದೇಶವೆಂದರೆ ಬಹಳ ಸಹಾಯಕ ಅಂಗಾಂಶಕ್ಕೆ ಶಕ್ತಿ ಹೂಡುವ ಬದಲು ಬಳ್ಳಿಯು ಬಂಡೆ ಒಡ್ಡಿಕೆಗಳು, ಇತರ ಸಸ್ಯಗಳು, ಅಥವಾ ಇತರ ಆಧಾರಗಳನ್ನು ಬೆಳವಣಿಗಾಗಿ ಬಳಸಬಹುದು. ಇದರಿಂದ ಸಸ್ಯವು ಸೂರ್ಯನ ಬೆಳಕನ್ನು ಕನಿಷ್ಠ ಶಕ್ತಿ ಹೂಡಿಕೆಯೊಂದಿಗೆ ತಲುಪಲು ಸಾಧ್ಯವಾಗುತ್ತದೆ. ಸ್ಕೋಟೊಟ್ರಾಪಿಸಮ್‍ನ್ನು ಅಭಿವೃದ್ಧಿಪಡಿಸಿಕೊಳ್ಳುವ ಕೆಲವು ಉಷ್ಣವಲಯದ ಬಳ್ಳಿಗಳಿವೆ. ಇವು ಬೆಳಕಿನಿಂದ ದೂರ ಬೆಳೆಯುತ್ತವೆ, ಇದು ನಕಾರಾತ್ಮಕ ದ್ಯುತಿವರ್ತನದ ಒಂದು ಪ್ರಕಾರವಾಗಿದೆ.

ಉಲ್ಲೇಖಗಳು

ಬದಲಾಯಿಸಿ
  1. Brown, Lesley (1993). The New shorter Oxford English dictionary on historical principles. Oxford [Eng.]: Clarendon. ISBN 0-19-861271-0.
  2. "Creepers". mannuthynursery. Archived from the original on 19 ಫೆಬ್ರವರಿ 2008. Retrieved 17 July 2013.
🔥 Top keywords: ಅಂತರಾಷ್ಟ್ರೀಯ ಯೋಗ ದಿನಮುಖ್ಯ ಪುಟಕುವೆಂಪುಯೋಗವಿಶೇಷ:Searchಸಹಾಯ:ಲಿಪ್ಯಂತರಯೋಗ ಮತ್ತು ಅಧ್ಯಾತ್ಮದಾಳಪಗಡೆಕನ್ನಡದರ್ಶನ್ ತೂಗುದೀಪ್ಮೊದಲನೆಯ ಕೆಂಪೇಗೌಡದ.ರಾ.ಬೇಂದ್ರೆಶಿವರಾಮ ಕಾರಂತಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಗೌತಮ ಬುದ್ಧಗಾದೆಕನ್ನಡ ಅಕ್ಷರಮಾಲೆಬಿ. ಆರ್. ಅಂಬೇಡ್ಕರ್ಮಹಾತ್ಮ ಗಾಂಧಿಭಾರತದ ಸಂವಿಧಾನಬಸವೇಶ್ವರಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಪೂರ್ಣಚಂದ್ರ ತೇಜಸ್ವಿಕರ್ನಾಟಕನಳಂದಕುದುರೆಎ.ಪಿ.ಜೆ.ಅಬ್ದುಲ್ ಕಲಾಂಮಾಸ್ತಿ ವೆಂಕಟೇಶ ಅಯ್ಯಂಗಾರ್ಚಂದ್ರಶೇಖರ ಕಂಬಾರಕನ್ನಡ ಗುಣಿತಾಕ್ಷರಗಳುಪಂಪಯು.ಆರ್.ಅನಂತಮೂರ್ತಿಕನ್ನಡ ಸಾಹಿತ್ಯ ಪ್ರಕಾರಗಳುಸ್ವಾಮಿ ವಿವೇಕಾನಂದಕರ್ನಾಟಕದ ಏಕೀಕರಣಕರ್ನಾಟಕದ ಇತಿಹಾಸ