ನವಲಗುಂದ

ಪ್ರವೀಣ ಹೊಂಗಲ ಅಳಗವಾಡಿ

ನವಲಗುಂದ ಧಾರವಾಡ ಜಿಲ್ಲೆಯ ಒಂದು ತಾಲೂಕು ಕೇಂದ್ರ. ನವಲಗುಂದ ಎಂಬ ಹೆಸರು ಹೇಗೆ ಬಂತು ಎನ್ನುವುದಕ್ಕೆ ಊರ ಹಿರಿಯರು ಹೇಳುವುದೇನೆಂದರೆ - ಇಲ್ಲಿಯ ಜನಜೀವನ ಎಲ್ಲ ಕಡೆಗೆ ಪಸರಿಸುವುದಕ್ಕಿಂತ ಮೊದಲು ಸಾಕಷ್ಟು ನವಿಲುಗಳು ಇಲ್ಲಿಯ ಗುಡ್ಡದ ಮೇಲೆ ವಾಸಿಸುತಿದ್ದವೆಂದೂ ಹಾಗೂ ಈಗಲೂ ಸಹ ಕಣ್ಣಿಗೆ ಬೀಳುತ್ತವೆ0ದು ಹೇಳುತ್ತಾರೆ. ಅದರಿಂದಾಗಿ ಈ ತಾಲೂಕಿಗೆ ಮೊದಲು ನವಿಲುಗಳಗುಡ್ಡ, ನವಿಲುಗುಂದ, ತದನಂತರ ನವಲಗುಂದ ಎಂಬ ಹೆಸರು ಕೂಡಾ ಬಂತು ಎಂಬುದು ಒಂದು ಪ್ರತೀತಿ.[೧]

ನವಲಗುಂದ

ನವಲಗುಂದ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಧಾರವಾಡ
ನಿರ್ದೇಶಾಂಕಗಳು15.57° N 75.37° E
ವಿಸ್ತಾರ
 - ಎತ್ತರ
 km²
 - 578 ಮೀ.
ಸಮಯ ವಲಯIST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
22,200
 - /ಚದರ ಕಿ.ಮಿ.

ಸಂಸ್ಕೃತಿ ಬದಲಾಯಿಸಿ

ಇಲ್ಲಿ ಹಿಂದೂ ಸಂಸ್ಕೃತಿಯ ಅನೇಕ ಮಹಿಮಾಪುರುಷರು ಬಾಳಿ-ಬೆಳಗಿ ಹೋಗಿರುವರು. ಅವರಲ್ಲಿ, ಹುಬ್ಬಳ್ಳಿಯ ಶ್ರೀಸಿದ್ಧಾರೂಢರೊಡನಾಡಿದ ಶ್ರೀ ಅಜಾತ ನಾಗಲಿಂಗದೇವರು ಹೆಸರುವಾಸಿಯಾಗಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಕರುನಾಡ ಧಾರ್ಮಿಕ ಸಂಸ್ಕೃತಿಯ ಪ್ರತೀಕವಾಗಿರುವ ಇಲ್ಲಿರುವ ಮಠಗಳಾದ ಶ್ರೀಸಿದ್ದೇಶ್ವರರ ಶ್ರೀಪಂಚಗೃಹ ಹಿರೇಮಠ, ಶ್ರೀಬಸವರಾಜದೇವರ ಶ್ರೀಗವಿಮಠ,ಶ್ರೀನಾಗಲಿಂಗನ ಶ್ರೀಅಜಾತ ನಾಗಲಿಂಗಮಠ ಮತ್ತು ಹುರಕಡ್ಲಿ ಶ್ರೀಅಜ್ಜನವರ ತಪೋಭೂಮಿ ಇದೆ. ಹೀಗೆ ಇನ್ನೂ ಅನೇಕ ಕಾಣ ಸಿಗುವ ದೇವಸ್ಥಾನಗಳಿವೆ. ಮೊದಲು ಈ ಪ್ರದೇಶವು ಶ್ರೀ ಲಿಂಗರಾಜ ದೇಸಾಯಿಯವರ ಆಡಳಿತದಲ್ಲಿ ಇತ್ತೆಂದು ಹೇಳುತ್ತಾರೆ. ಅವರಿದ್ದರೆಂಬ ಕುರುಹುಗಳಾಗಿ ಈಗ ಇಲ್ಲಿ ಕಾಣಸಿಗುವ ದೇಸಾಯಿವಾಡೆ,ಶ್ರೀಸಂಕಮ್ಮತಾಯಿ ಭಾವಿ, ಶ್ರೀನೀಲಮ್ಮತಾಯಿ ಕೆರೆ ಮತ್ತು ಶ್ರೀ ಚನ್ನಮ್ಮತಾಯಿ ಕೆರೆ ಇತ್ಯಾದಿ. ಮೇಲಾಗಿ ಇಲ್ಲಿ ಜಕ್ಕರಾಯ ಶಿಲ್ಪಿಯ ಕಲ್ಲುಕೆತ್ತನೆ ಪ್ರತೀತಿಯಾಗಿ ನವಲಗುಂದದಲ್ಲಿ ಶ್ರೀಗಣಪತಿ ದೇವಸ್ಥಾನವಿದೆ. ಹಾಗೂ ಬದಾಮಿ ಹೊಯ್ಸಳರ ಆಡಳಿತದಲ್ಲಿದ್ದ ಪಂಪ ಕವಿಯ ಜನ್ಮಸ್ಥಳವಾದ ಅಣ್ಣಿಗೇರಿ ಪಟ್ಟಣದಲ್ಲಿಯೂ ಒಂದು ಸುಂದರ ಸುಪ್ರಸಿದ್ಧವಾದ ಶ್ರೀಅಮೃತೇಶ್ವರ ದೇವಸ್ಥಾನವಿದೆ. ಮುಂದೆ ನವಿಲುಗುಂದದ ಹತ್ತಿಯ ದಾರದಿಂದ ಮಾಡಿದ ಜಮಖಾನೆಗಳು ಸಹ ತುಂಬ ಪ್ರಸಿದ್ಧವಾಗಿವೆ.

ಹಳ್ಳಿಗಳು ಬದಲಾಯಿಸಿ

ನವಲಗುಂದ ತಾಲೂಕಿನಲ್ಲಿ ಒಟ್ಟು ೫೭ ಹಳ್ಳಿಗಳಿದ್ದು, ಅವುಗಳಲ್ಲಿ ೨೨ ಗ್ರಾಮ ಪಂಚಾಯತಗಳು, ೨ ಪಟ್ಟಣ ಪಂಚಾಯತಗಳು ಇವೆ. ೨೨ ಗ್ರಾಮ ಪಂಚಾಯತಗಳು ಮತ್ತು ಅದಕ್ಕೆ ಸೇರಿದ ಗ್ರಾಮಗಳು (ಗ್ರಾಮಗಳ ಸಂಖ್ಯೆ)(ಗ್ರಾಮಗಳ ಹೆಸರು) ಅನುಕ್ರಮವಾಗಿ ಇಂತಿವೆ : ೧. ಅಳಗವಾಡಿ(೧), ೨. ಹೆಬ್ಬಾಳ(೧), ೩. ಜಾವೂರ(೨) (ಜಾವೂರ, ಬಳ್ಳೂರು), ೪. ಗುಮ್ಮಗೋಳ(೨) (ಗುಮ್ಮಗೋಳ, ಬ್ಯಾಲ್ಯಾಳ), ೫. ಶಿರೂರ(೨) (ಶಿರೂರ, ಆಹೆಟ್ಟಿ) ೬. ಮೊರಬ(೨) (ಮೊರಬ, ತಲೆಮೊರಬ), ೭. ಶಿರಕೋಳ(೨) (ಶಿರಕೋಳ, ಹಣಸಿ), ೮. ತಿರ್ಲಾಪೂರ(೧), ೯. ಯಮನೂರ(೪) (ಯಮನೂರ, ಆರೇಕುರಹಟ್ಟಿ, ಪಡೇಸೂರ, ಕುಮಾರಗೊಪ್ಪ), ೧೦. ಹಾಲಕುಸುಗಲ್ಲ(೨)(ಹಾಲಕುಸುಗಲ್ಲ, ಶಾನವಾಡ), ೧೧. ಕಾಲವಾಡ (೪) (ಕಾಲವಾಡ, ಕರ್ಲವಾಡ, ಚಿಲಕವಾಡ, ಬೆಳಹಾರ), ೧೨. ಶಿಶುವಿನಹಳ್ಳಿ(೫)(ಶಿಶುವಿನಹಳ್ಳಿ, ದುಂದೂರ, ಬೆನ್ನೂರು, ಬಲ್ಲರವಾಡ, ನಾಗರಹಳ್ಳಿ), ೧೩. ನಲವಡಿ(೨)(ನಲವಡಿ, ಮಣಕವಾಡ), ೧೪. ಭದ್ರಾಪೂರ(೪) (ಭದ್ರಾಪೂರ, ಮಜ್ಜಿಗುಡ್ಡ, ಸೈದಾಪೂರ, ಬಸಾಪೂರ), ೧೫. ಹಳ್ಳಿಕೇರಿ(೩) (ಹಳ್ಳಿಕೇರಿ, ಸಾಸ್ವಿಹಳ್ಳಿ, ಕೊಂಡಿಕೊಪ್ಪ), ೧೬. ಇಬ್ರಾಹಿಂಪೂರ(೨) (ಇಬ್ರಾಹಿಂಪೂರ, ನಾವಳ್ಳಿ) ೧೭. ತುಪ್ಪದಕುರಹಟ್ಟಿ(೩) (ತುಪ್ಪದಕುರಹಟ್ಟಿ, ಅಡ್ನೂರು, ಕಿತ್ತೂರು), ೧೮. ಶಲವಡಿ(೧), ೧೯. ನಾಯಕನೂರ(೩)(ನಾಯಕನೂರ, ದಾಟನಾಳ, ಭೋಗಾನೂರ) ೨೦. ತಡಹಾಳ(೩)(ತಡಹಾಳ, ಅರಹಟ್ಟಿ, ಕೊಂಗವಾಡ), ೨೧. ಗುಡಿಸಾಗರ(೪)(ಗುಡಿಸಾಗರ, ನಾಗನೂರು, ಕಡದಳ್ಳಿ, ಸೊಟಕನಹಾಳ), ೨೨. ಬೆಳವಟಗಿ(೩)(ಬೆಳವಟಗಿ, ಅಮರಗೋಳ, ಗೊಬ್ಬರಗುಂಪಿ)೨ ಪಟ್ಟಣ ಪಂಚಾಯತಗಳು ಇಂತಿವೆ : ೧. ನವಲಗುಂದ ಪಟ್ಟಣ, ೨. ಅಣ್ಣಿಗೇರಿ ಪಟ್ಟಣ.

ಜಮುಖಾನೆ ಬದಲಾಯಿಸಿ

ವಿವಿಧ ರೀತಿಯ ಜಮುಖಾನೆ ತಯಾರಿಕೆಗೆ ಈ ಊರು ಹೆಸರುವಾಸಿಯಾಗಿದೆ.

ಉಲ್ಲೇಖಗಳು ಬದಲಾಯಿಸಿ

  1. Navalgund Population Census 2011 census2011.co.in

M

🔥 Top keywords: ಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರಗಾದೆವಿಶೇಷ:Searchಕನ್ನಡ ಅಕ್ಷರಮಾಲೆಕನ್ನಡಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದ.ರಾ.ಬೇಂದ್ರೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಸವೇಶ್ವರಭಾರತದ ಪ್ರಧಾನ ಮಂತ್ರಿಗಳ ಪಟ್ಟಿವಿಶ್ವ ಪರಿಸರ ದಿನಗೌತಮ ಬುದ್ಧಬಿ. ಆರ್. ಅಂಬೇಡ್ಕರ್ಹುಲಿಠೇವಣಿಶಿವರಾಮ ಕಾರಂತಕನ್ನಡ ಸಾಹಿತ್ಯಕನ್ನಡ ಗುಣಿತಾಕ್ಷರಗಳುಯಮಪೂರ್ಣಚಂದ್ರ ತೇಜಸ್ವಿಕರ್ನಾಟಕದ ಜಿಲ್ಲೆಗಳುಕನ್ನಡ ಸಂಧಿಕರ್ನಾಟಕಮಾಸ್ತಿ ವೆಂಕಟೇಶ ಅಯ್ಯಂಗಾರ್ರಾವಣಜಿ.ಎಸ್.ಶಿವರುದ್ರಪ್ಪಭಾರತದ ರಾಷ್ಟ್ರಪತಿಗಳ ಪಟ್ಟಿಭಾರತೀಯ ಮೂಲಭೂತ ಹಕ್ಕುಗಳುಮಹಾತ್ಮ ಗಾಂಧಿಬೆಳೆ ವಿಮೆಕರ್ನಾಟಕ ಐತಿಹಾಸಿಕ ಸ್ಥಳಗಳುಯು.ಆರ್.ಅನಂತಮೂರ್ತಿಛತ್ರಪತಿ ಶಿವಾಜಿಸಂವತ್ಸರಗಳುವಚನ ಸಾಹಿತ್ಯಗಿರೀಶ್ ಕಾರ್ನಾಡ್