ಗೂನು (ಗೂನುಬೆನ್ನು, ಕೂನು) ಬೆನ್ನೆಲುಬಿನ ಅಪಸಾಮಾನ್ಯ, ವಿಪರೀತ ಪೀನವಾದ ಬಾಗಿರುವಿಕೆ ಮತ್ತು ಇದು ಎದೆಗೂಡು ಹಾಗೂ ತ್ರಿಕಾಸ್ಥಿ ಪ್ರದೇಶಗಳಲ್ಲಿ ಉಂಟಾಗುತ್ತದೆ.[೧] ಇದು ಕ್ಷೀಣಗೊಳಿಸುವ ಮೃದ್ವಸ್ಥಿ ತಟ್ಟೆ ರೋಗ; ಬೆಳವಣಿಗೆಯ ಅಸಹಜತೆಗಳು, ಅತ್ಯಂತ ಸಾಮಾನ್ಯವಾಗಿ ಶೋಯರ್ಮನ್‌ನ ರೋಗ; ಕಶೇರು ಖಂಡದ ಸಂಕುಚಿತ ಮುರಿತವಿರುವ ಅಸ್ಥಿರಂಧ್ರತೆ; ಬಹು ಅಸ್ಥಿಮಜ್ಜೆ ದುರ್ಮಾಂಸ; ಅಥವಾ ಗಾಯದಿಂದ ಉಂಟಾಗಬಹುದು. ಸಾಮಾನ್ಯ ಎದೆಗೂಡು ಪ್ರದೇಶದ ಬೆನ್ನೆಲುಬು ೧ ರಿಂದ ೧೨ ನೇ ಕಶೇರುಖಂಡಕ್ಕೆ ವಿಸ್ತರಿಸುತ್ತದೆ ಮತ್ತು 20° ರಿಂದ 45° ವರೆಗಿನ ವ್ಯಾಪ್ತಿಯ ಸ್ವಲ್ಪ ಕೋನವನ್ನು ಹೊಂದಿರಬೇಕು. ಮೇಲ್ಪ್ರದೇಶದ ಬೆನ್ನೆಲುಬಿನ ವರ್ತುಲತೆಯು ೪೫ ಡಿಗ್ರೀಯನ್ನು ಮೀರಿ ಹೆಚ್ಚಿದರೆ ಅದನ್ನು ಗೂನು ಎಂದು ಕರೆಯಲಾಗುತ್ತದೆ. ಹೆಚ್ಚಿನ ಪ್ರಮಾಣದ ಗೂನು ತೀವ್ರ ನೋವು ಹಾಗೂ ಅಸೌಖ್ಯ, ಉಸಿರಾಟ ಹಾಗೂ ಜೀರ್ಣದ ತೊಂದರೆಗಳು, ಹೃದಯ ಹಾಗೂ ರಕ್ತನಾಳಗಳ ಕ್ರಮರಾಹಿತ್ಯತೆ, ನರಶಾಸ್ತ್ರೀಯ ದುರ್ಬಲತೆ, ಮತ್ತು ಹೆಚ್ಚು ತೀವ್ರ ಪ್ರಕರಣಗಳಲ್ಲಿ, ಗಣನೀಯವಾಗಿ ಕಡಿಮೆಯಾದ ಜೀವಿತಾವಧಿಯನ್ನು ಉಂಟುಮಾಡಬಹುದು.

ಉಲ್ಲೇಖಗಳು ಬದಲಾಯಿಸಿ

  1. Fon GT, Pitt MJ, Thies AC (May 1980). "Thoracic kyphosis: range in normal subjects". AJR. American Journal of Roentgenology. 134 (5): 979–83. doi:10.2214/ajr.134.5.979. PMID 6768276.
🔥 Top keywords: ಕನ್ನಡ ಅಕ್ಷರಮಾಲೆಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchವಿಶ್ವ ಪರಿಸರ ದಿನನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡ ಗುಣಿತಾಕ್ಷರಗಳುಕರ್ನಾಟಕ ವಿಧಾನ ಪರಿಷತ್ದ.ರಾ.ಬೇಂದ್ರೆಶಿವರಾಮ ಕಾರಂತಬಸವೇಶ್ವರಕರ್ನಾಟಕದ ಜಿಲ್ಲೆಗಳುವರ್ಗೀಯ ವ್ಯಂಜನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಗೌತಮ ಬುದ್ಧಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡ ಸಂಧಿಭಾರತದ ಸಂವಿಧಾನಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಳೆಬಿಲ್ಲುಅಕ್ಕಮಹಾದೇವಿಕನ್ನಡ ವ್ಯಾಕರಣಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಾಹಿತ್ಯಜಿ.ಎಸ್.ಶಿವರುದ್ರಪ್ಪಗಿರೀಶ್ ಕಾರ್ನಾಡ್ವಿಭಕ್ತಿ ಪ್ರತ್ಯಯಗಳುಕರ್ನಾಟಕಯು.ಆರ್.ಅನಂತಮೂರ್ತಿವ್ಯಂಜನವಿಜಯನಗರ ಸಾಮ್ರಾಜ್ಯಲೋಕಸಭೆ