ಗರ್ಭಪಾತ

ಅಕಾಲ ಪ್ರಸವ ಅಥವಾ ಸ್ವಾಭಾವಿಕ ಗರ್ಭಪಾತ ವು ಸಾಮಾನ್ಯವಾಗಿ ಮಾನವರಲ್ಲಿ ಖಚಿತವಾದ ಗರ್ಭಧಾರಣೆಯಾದ 24 ವಾರಗಳೊಳಗೆ ಸಂಭವಿಸುವ ಪಿಂಡ ಅಥವಾ ಭ್ರೂಣವು ಬದುಕುಳಿಯಲು ಅಸಮರ್ಥವಾದ ಹಂತದಲ್ಲಿ ಉಂಟಾಗುವ ಗರ್ಭದ ಅಸಂಕಲ್ಪಿತ, ಸಹಜವಾದ ಮರಣ. ಗರ್ಭಪಾತವು ಪ್ರಸವಪೂರ್ವದ ಅತೀ ಸಾಮಾನ್ಯವಾದ ಸಂಕೀರ್ಣ ಪರಿಸ್ಥಿತಿಯಾಗಿದೆ.[೧]

Miscarriage
Classification and external resources
ICD-10O03
ICD-9634
MedlinePlus001488
eMedicinetopic list
MeSHD000022

ಪರಿಭಾಷೆ ಬದಲಾಯಿಸಿ

ಎಲ್‌ಎಮ್‌ಪಿ ( ಮಹಿಳೆಯ ಋತುಚಕ್ರದ ಕೊನೆಯ ಅವಧಿ-ಲಾಸ್ಟ್ ಮೆನ್‌ಸ್ಟ್ರುವಲ್ ಪಿರಿಯಡ್)ಯ ಆರು ವಾರಗಳ ಮೊದಲು ಸಂಭವಿಸುವಂತಹ ಅತ್ಯಂತ ಮೊದಲ ಹಂತದ ಗರ್ಭಪಾತ ವು ವೈದ್ಯಕೀಯವಾಗಿ "ಮೊದಲ ಹಂತದ ಗರ್ಭ ನಷ್ಟ (ಅರ್ಲಿ ಪ್ರೆಗ್ನೆನ್ಸಿ ಲಾಸ್)" ಅಥವಾ "ರಾಸಾಯನಿಕ ಗರ್ಭ " ಎಂದು ಕರೆಯಲ್ಪಟ್ಟಿದೆ.[೨][೩] ಎಲ್‌ಎಮ್‌ಪಿಯ ಆರು ವಾರಗಳ ಬಳಿಕ ಸಂಭವಿಸುವ ಗರ್ಭಪಾತವನ್ನು ವೈದ್ಯಕೀಯಕ್ಷೇತ್ರದಲ್ಲಿ "ಸ್ವಾಭಾವಿಕ ವೈದ್ಯಕೀಯ ಗರ್ಭಪಾತ " ಎಂದು ಹೇಳಲಾಗುತ್ತದೆ.[೨]

ವೈದ್ಯಕೀಯ (ಮತ್ತು ಪಶುವೈದ್ಯಕೀಯ) ಪ್ರಕರಣಗಳಲ್ಲಿ, "ಗರ್ಭಪಾತ" ಎಂಬ ಪದವು ಸ್ವಾಭಾವಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಪ್ರೇರೇಪಿಸಿ ಗರ್ಭಕೋಶದಿಂದ ಭ್ರೂಣವನ್ನು ತೆಗೆಯುವ ಅಥವಾ ಹೊರಹಾಕುವ ಮತ್ತು ಇದರಿಂದ ಗರ್ಭಾವಸ್ಥೆಯನ್ನು ಕೊನೆಗೊಳಿಸುವ ಯಾವುದೇ ಪ್ರಕ್ರಿಯೆಯನ್ನು ಸೂಚಿಸುತ್ತದೆ. ಗರ್ಭವೈಫಲ್ಯಕ್ಕೊಳಗಾದ ಅನೇಕ ಮಹಿಳೆಯರಲ್ಲಿ, ಅವರ ಅನುಭವಕ್ಕೆ ಸಂಬಂಧಿಸಿದಂತೆ ಗರ್ಭಪಾತ ಎಂಬ ಪದವು ಪ್ರೇರಿತ ಗರ್ಭಪಾತ (ಉದ್ದೇಶಪೂರ್ವಕ ನಡೆಸುವ)ಕ್ಕೆ ಸಂಬಂಧಿಸಿದುದೇ ಆಗಿದೆ. ಇತ್ತಿಚಿನ ವರ್ಷಗಳಲ್ಲಿ, ವೈದ್ಯಕೀಯ ಸಮುದಾಯದಲ್ಲಿ ನಡೆದ ವಿಚಾರಗೋಷ್ಠಿಯಲ್ಲಿ ಈ ಶಬ್ಧವನ್ನು ಬಳಸುವುದನ್ನು ತಪ್ಪಿಸುವಂತೆ ಮತ್ತು ದ್ವಂದ್ವಾರ್ಥ ನೀಡದೇ ಇರುವ "ಗರ್ಭವೈಫಲ್ಯ" ಎಂಬ ಶಬ್ಧದ ಬಳಕೆಯೇ ಪ್ರಾಶಸ್ತ್ಯಪಡೆಯಿತು.[೪]

ಗರ್ಭಧಾರಣೆಯ 37 ವಾರಗಳ ಒಳಗೆ ಜೀವಂತ ಶಿಶುವಿನ ಜನನವಾಗುವ ಪ್ರಸವ ಪ್ರಕ್ರಿಯೆಯನ್ನು "ಅಕಾಲಿಕ ಜನನ" (ಗರ್ಭವಾಸ ಪೂರ್ಣವಾಗುವುದಕ್ಕಿಂತ ಮುಂಚೆ ಹುಟ್ಟಿದ) ಎಂದು ಹೇಳಲಾಗಿದ್ದು, ಇದರಲ್ಲಿ, ಜನಿಸಿದ ಶಿಶು ತಕ್ಷಣ ಮರಣ ಹೊಂದಿದರೂ ಸಹ ಅದೊಂದು ಅಕಾಲಿಕ ಜನನ ಎಂದೇ ಕರೆಯಲ್ಪಡುತ್ತದೆ. 24 ವಾರಗಳ ಗರ್ಭಸ್ಥ ಬೆಳವಣಿಗೆಯನ್ನು ಪೂರೈಸಿ ಜನಿಸಿದ 50%ಶಿಶುಗಳು ದೀರ್ಘಕಾಲ ಬದುಕುವ ಸಾಮರ್ಥ್ಯ ಹೊಂದಿರುತ್ತವೆ. ಮತ್ತು, ಇವುಗಳು ಸಾಮಾನ್ಯ ಅಥವಾ ಗಂಭೀರ ಪ್ರಮಾಣದ ನರದೌರ್ಬಲ್ಯದೊಂದಿಗೆ ಜನಿಸುತ್ತವೆ. ಈ ದೋಷಗಳು 26 ವಾರಗಳ ಬಳಿಕವಷ್ಟೇ ಜನಿಸಿದ ಶಿಶುಗಳಲ್ಲಿ 50% ದಷ್ಟು ಕಡಿಮೆಯಾಗಿರುತ್ತದೆ.[೫] ಆದರೆ, ಅತ್ಯಂತ ಬೇಗ ಅಂದರೆ, ಗರ್ಭಧಾರಣೆಯ 16ವಾರಗಳ ಅವಧಿಯಲ್ಲಿ ಜನಿಸಿದ ಶಿಶುಗಳು ಮಾತ್ರ ಜನನಾನಂತರದಲ್ಲಿ ಕೆಲವು ನಿಮಿಷಗಳವರೆಗೆ ಬದುಕುಳಿದ ಕೆಲವು ಉದಾಹರಣೆಗಳಿದ್ದರೂ, ಗರ್ಭಧಾರಣೆಯ 21 ವಾರ,5[೬] ದಿನಗಳ ಅವಧಿಗೆ ಮುನ್ನ ಜನಿಸಿದ ಶಿಶುಗಳು ದೀರ್ಘಕಾಲದ ಜೀವಿತಾವಧಿಯನ್ನು ತೋರಿಸಿದ ದಾಖಲೆಗಳು ಇದುವರೆಗೆ ದೊರೆತಿಲ್ಲ.[೭]

ಗರ್ಭಧಾರಣೆಯ ಸುಮಾರು 20-24 ವಾರಗಳ ನಂತರದಲ್ಲಿ ಗರ್ಭಕೋಶದೊಳಗೆ ಭ್ರೂಣವು ಮರಣಿಸಿದರೆ, ಅದನ್ನು "ಮೃತ(ಶಿಶು)ಜನನ" ಎಂದು ಕರೆಯುತ್ತಾರೆ. ಗರ್ಭಾವಸ್ಥೆಯ ಅವಧಿಯ ಬಗೆಗಿನ ಅರ್ಥನಿರೂಪಣೆಯು ದೇಶದಿಂದ ದೇಶಕ್ಕೆ ಭಿನ್ನವಾಗಿದೆ. ಈ ಪದಗಳ ಬಳಕೆ ಮತ್ತು ಈ ಘಟನೆಗಳ ಕಾರಣಗಳು ಒಂದರ ಮೇಲೊಂದು ವ್ಯಾಪಿಸಿದರೂ, ಅಕಾಲಿಕ ಜನನ (ಅವಧಿಗೆ ಮುನ್ನ ಜನಿಸುವ ಶಿಶುಗಳು) ಅಥವಾ ಮೃತ(ಶಿಶು)ಜನನವು ಸಾಮಾನ್ಯವಾಗಿ "ಗರ್ಭವೈಫಲ್ಯ" ಎಂದು ಪರಿಗಣಿಸಲ್ಪಟ್ಟಿಲ್ಲ.

ಚಿತ್ರ:Miscarriage-Pregnancy timeline.png

ಭ್ರೂಣದ "ಗರ್ಭವೈಫಲ್ಯ" ಅಥವಾ ಗರ್ಭಪಾತವನ್ನು "ಗರ್ಭನಾಳದೊಳಗೆ ಭ್ರೂಣದ ಮರಣ " (ಇಂಟ್ರಾ ಯುಟಿರೈನ್ ಫೇಟಲ್‌‍ ಡೆತ್ - ಐಯುಎಫ್‌ಟಿ) ಎಂದೂ ಕೂಡಾ ಕರೆಯಲಾಗುತ್ತದೆ.

ವರ್ಗೀಕರಣ ಬದಲಾಯಿಸಿ

ಗಂಭೀರ, ಅಪಾಯದ ಗರ್ಭಪಾತ ದ ಬಗೆಗಿನ ವೈದ್ಯಕೀಯ ನಿರೂಪಣೆಯು ಗರ್ಭಸ್ಥ ಶಿಶುವು ಬದುಕುವ ಶಕ್ತಿಯನ್ನು ಪಡೆಯುವ ಮುನ್ನ, ಗರ್ಭಾವಧಿಯಲ್ಲಿ ಕಂಡುಬರುವ ಯಾವುದೇ ರಕ್ತಸ್ರಾವವು ಇನ್ನೂ ಹೆಚ್ಚಿನ ಪರಿವೀಕ್ಷಣೆಗೊಳಪಡಬೇಕಿದೆ ಎಂದು ವಿವರಿಸಿದೆ. ಈ ಪರಿವೀಕ್ಷಣೆಯಲ್ಲಿ (ಇನ್ವೆಸ್ಟಿಗೇಶನ್) ಭ್ರೂಣವು ಬದುಕುವ ಸಾಮರ್ಥ್ಯ ಹೊಂದಿದ್ದು, ನಂತರದ ಗರ್ಭಾವಧಿಯು ಯಾವುದೇ ತೊಂದರೆಗಳಿಲ್ಲದೇ ಮುಂದುವರೆಯಬಲ್ಲುದು ಎಂದೂ ಕೂಡಾ ಕಂಡುಬರಬಹುದು. ಅಲ್ಟ್ರಾಸೌಂಡ್‌ ಸ್ಕ್ಯಾನಿಂಗ್‌ನಲ್ಲಿ ಭ್ರೂಣದ ಹೊರ ಪೊರೆಯ ಹೆಮಟೋಮ ಕಂಡುಬಂದರೂ ಕೂಡಾ, ದೀರ್ಘಕಾಲದ ವಿಶ್ರಾಂತಿ ಪಡೆಯುವುದರಿಂದ ಗರ್ಭಧಾರಣೆಯು ಯಾವುದೇ ಸಮಸ್ಯೆಯಿಲ್ಲದೇ ಮುಂದುವರೆಯಬಲ್ಲುದು ಎಂಬ ಸಲಹೆ ನೀಡಲಾಗಿದೆ.[೮]

ಪರ್ಯಾಯವಾಗಿ, ಈ ಕೆಳಗಿನ ಪದಗಳನ್ನು ಪರಿಪೂರ್ಣಗೊಳ್ಳದ ಗರ್ಭಧಾರಣೆಯನ್ನು ವಿವರಿಸುತ್ತವೆ:

  • ಗರ್ಭಾವಸ್ಥೆಯ ಸಂದರ್ಭದಲ್ಲಿ ಸಹಜವಾಗಿಯೇ ಬೆಳೆಯುವ ಗರ್ಭ ಚೀಲವು ಬರಿದಾಗುವುದು ಮತ್ತು, ಭ್ರೂಣದ ಅಂಶವು ಇಲ್ಲದೇ ಇರುವುದು ಅಥವಾ ಇದರ ಬೆಳವಣಿಗೆಯು ಮೊದಲ ಹಂತದಲ್ಲೇ ನಿಂತುಹೋಗಿರುವುದು. ಈ ಸ್ಥಿತಿಗೆ ಇರುವ ಇತರ ಹೆಸರುಗಳು "ಬತ್ತಿದ ಅಂಡಾಣು " (ಕ್ಷಯಿಸಿದ ಅಂಡಾಣು) ಮತ್ತು "ಭ್ರೂಣವಿಲ್ಲದ ಗರ್ಭಧಾರಣೆ "
  • ಅನಿವಾರ್ಯ ಗರ್ಭಪಾತ (ಇನೆವಿಟೇಬಲ್ ಅಬಾರ್ಶನ್): ಇದು ಗರ್ಭಕೋಶದ ಕಂಠವು ವಿಕಸನ ಹೊಂದಿ ತೆರೆಯಲ್ಪಟ್ಟಿದ್ದರೂ[೯], ಭ್ರೂಣವು ಹೊರಬರದೇ ಇದ್ದ ಸ್ಥಿತಿಯನ್ನು ವಿವರಿಸುತ್ತದೆ. ಇದು ಸಾಮಾನ್ಯವಾಗಿ ಪೂರ್ಣ ಗರ್ಭಪಾತವಾಗಿ ಮುಂದುವರೆಯುವುದು. ಭ್ರೂಣದ ಹೃದಯಬಡಿತವು ನಿಲ್ಲುವ ಹಾಗೆ ಕಂಡುಬಂದರೂ ಇದು ಈ ಸಂದರ್ಭದಲ್ಲಿ ಪರಿಗಣಿಸಬೇಕಾದ ಅಂಶವಲ್ಲ.
  • ಪೂರ್ಣಪ್ರಮಾಣದ ಗರ್ಭಪಾತ : ಗರ್ಭಧಾರಣೆಯಲ್ಲಿನ ಎಲ್ಲಾ ಅಂಶಗಳೂ ಗರ್ಭಕೋಶದಿಂದ ಹೊರಹಾಕಲ್ಪಡುವುದು. ಈ ಗರ್ಭಧಾರಣೆ ಒಳಗೊಂಡ ಅಂಶಗಳೆಂದರೆ: ಟ್ರೋಪೋಪ್ಲಾಸ್ಟ್, ಕೋರಿಯೋನಿಕ್ ವಿಲ್ಲೈ, ಗರ್ಭಚೀಲ, ಹಳದಿ ಲೋಳೆ ತುಂಬಿದ ಕೋಶಚೀಲ ಮತ್ತು ಭ್ರೂಣದ ತುದಿ (ಎಂಬ್ರಿಯೋ) ಅಥವಾ ಗರ್ಭಾವಧಿ ಮುಗಿದಬಳಿಕದ ಭ್ರೂಣ, ಕರುಳುಬಳ್ಳಿ, ಪ್ಲಾಸೆಂಟ, ಆಮ್ನಿಯೋಟಿಕ್ ದ್ರವ ಮತ್ತು ಆಮ್ನಿಯೋಟಿಕ್ ಪೊರೆ.
  • ಅಪೂರ್ಣ ಗರ್ಭಪಾತ : ಇದರಲ್ಲಿ ಹೆಚ್ಚಿನ ಅಂಗಾಶಗಳು ಹೊರಹಾಕಲ್ಪಟ್ಟರೂ ಮತ್ತೆ ಕೆಲವು ಗರ್ಭಕೋಶದಲ್ಲಿ ಯೇ ಉಳಿದಿರುತ್ತದೆ.[೧೦]
  • ತಪ್ಪಿದ ಗರ್ಭಪಾತ : ಇದರಲ್ಲಿ ಭ್ರೂಣವು ಮರಣಹೊಂದಿದ್ದು, ಗರ್ಭವೈಫಲ್ಯ ಅಥವಾ ಗರ್ಭಪಾತವಿನ್ನೂ ಆಗದ ಸ್ಥಿತಿ. ಇದು ನಿಧಾನಿತ (ವಿಳಂಬಿತ/ಮುಂದುವರೆದ) ಅಥವಾ ತಪ್ಪಿದ ಗರ್ಭಪಾತ ಎಂದೂ ಕರೆಯಲ್ಪಡುತ್ತದೆ.

ಈ ಕೆಳಗಿನ ಎರಡು ಪದಗಳು ಅಕಾಲ ಗರ್ಭಪಾತದ ತೀವ್ರತರ ತೊಡಕುಗಳುಂಟಾಗುವ ಜಟಿಲ ಪರಿಸ್ಥಿತಿಗಳನ್ನು ಪರಿಗಣಿಸುತ್ತವೆ:

  • ಕೀವುಗಟ್ಟಿದ ಗರ್ಭಪಾತ : ಇದು ತಪ್ಪಿದ ಅಥವಾ ಅಪೂರ್ಣ ಗರ್ಭಸ್ರಾವದ ಬಳಿಕ ಜೀವಕೋಶಗಳಲ್ಲಿ ಹರಡುವ ಸೋಂಕಿನಿಂದ ಉಂಟಾಗುತ್ತದೆ. ಗರ್ಭಾಶಯದ ಸೋಂಕಿನಿಂದ ಇತರ ಭಾಗಗಳಿಗೂ ಸೋಂಕು ಹರಡುವ ಸಾಧ್ಯತೆಯಿದ್ದು (ಸೆಪ್ಟಿಸೀಮಿಯ) ಇದು ಆ ಮಹಿಳೆಗೆ ಪ್ರಾಣಾಪಾಯ ತರುವ ಗಂಭೀರ ಸ್ಥಿತಿಯಾಗಿದೆ.
  • ಗರ್ಭ ನಷ್ಟದ ಪುನರಾವರ್ತನೆ (ಪದೇ ಪದೇ ಗರ್ಭಪಾತವಾಗುವ ಸ್ಥಿತಿ) ಅಥವಾ ಪುನರಾವರ್ತಿತ ಗರ್ಭವೈಫಲ್ಯ ವು (ವೈದ್ಯಕೀಯ ಕ್ಷೇತ್ರದಲ್ಲಿ ಇದನ್ನು "ರೂಢಿಗೊಂಡ ಗರ್ಭಪಾತ " ಎಂದು ಕರೆಯಲಾಗಿದೆ) ಅನುಕ್ರಮವಾಗಿ ಮೂರು ಭಾರಿ ಉಂಟಾಗುವ ಅಕಾಲ ಪ್ರಸವ. ಗರ್ಭಪಾತದಲ್ಲಿ ಕೊನೆಯಾಗುವ ಗರ್ಭಧಾರಣೆಯ ಅನುಪಾತವು 15%[೧೧] ಆಗಿದ್ದು, ಎರಡು ಅನುಕ್ರಮ ಗರ್ಭವೈಫಲ್ಯಗಳು ಸಂಭವಿಸುವ ಸಾಧ್ಯತೆಯ ಪ್ರಮಾಣ 2.25% ಮತ್ತು, ಮೂರು ಅನುಕ್ರಮ ಗರ್ಭವೈಫಲ್ಯಗಳು ಸಂಭವಿಸುವ ಸಾಧ್ಯತೆಯ ಪ್ರಮಾಣ 0.34%. ಪದೇ ಪದೇ ಗರ್ಭನಷ್ಟ ಸಂಭವಿಸುವ ಪ್ರಮಾಣ 1%.[೧೧] ಹೆಚ್ಚಿನ ಪ್ರಮಾಣದ (85%)ಮಹಿಳೆಯರಲ್ಲಿ ಎರಡು ಭಾರಿ ಗರ್ಭಪಾತವಾದ ನಂತರದಲ್ಲಿ ಸಹಜವಾದ ಗರ್ಭಧಾರಣೆಯು ಯಶಸ್ವಿಯಾಗಿ ಮುಂದುವರೆಯುತ್ತದೆ.

ಗರ್ಭಪಾತದ ದೈಹಿಕ ಚಿಹ್ನೆಗಳು ಗರ್ಭಧಾರಣೆಯ ಕಾಲಾವಧಿಗೆ ಸಂಬಂಧಿಸಿದಂತೆ ಬೇರೆ ಬೇರೆ ಲಕ್ಷಣಗಳಿಂದ ಕೂಡಿರುತ್ತದೆ:[೧೨]

  • ಆರು ವಾರಗಳವರೆಗೆ ಸೆಡೆತ ಅಥವಾ ನೋವಿನಿಂದ ಕೂಡಿದ ಋತುಸ್ರಾವದೊಡನೆ, ರಕ್ತ ಹೆಪ್ಪುಗಟ್ಟಿದ ಸಣ್ಣ ಸಣ್ಣ ತುಣುಕುಗಳು ಕಂಡುಬರಬಹುದು.
  • ಆರರಿಂದ ಹದಿಮೂರು ವಾರಗಳವರೆಗೆ, ಭ್ರೂಣದ ಸುತ್ತಲೂ ರಕ್ತಹೆಪ್ಪುಗಟ್ಟಲು ಆರಂಭಗೊಂಡು, ಪ್ಲಾಸಂಟಾದಲ್ಲೂ ರಕ್ತ ಹೆಪ್ಪುಗಟ್ಟಿ ಸುಮಾರು 5ಸೆಂ.ಮೀ ಗಾತ್ರದ ರಕ್ತಗೆಡ್ಡೆಗಳು ಪೂರ್ಣ ಗರ್ಭಪಾತ ಸಂಭವಿಸುವ ಮೊದಲು ಹೊರಹಾಕಲ್ಪಡುತ್ತವೆ. ಈ ಪ್ರಕ್ರಿಯೆಯು ಕೆಲವು ಗಂಟೆಗಳಿಂದ, ಕೆಲವು ದಿನಗಳವರೆಗೆ ಬಿಟ್ಟು ಬಿಟ್ಟು ನಡೆಯಬಹುದು. ಈ ಲಕ್ಷಣಗಳು ವಿಭಿನ್ನವಾಗಿ ಕಂಡುಬರುವುದರ ಜೊತೆಗೆ ದೈಹಿಕ ಅನಾರೋಗ್ಯದ ಕಾರಣದಿಂದ ವಾಂತಿ ಮತ್ತು ಭೇದಿಯುಂಟಾಗುವ ಸಾಧ್ಯತೆಗಳನ್ನೂ ಹೊಂದಿವೆ.
  • ಹದಿಮೂರು ವಾರಗಳ ಬಳಿಕ ಭ್ರೂಣವು ಗರ್ಭಕೋಶದಿಂದ ಸುಲಭವಾಗಿ ಹೊರಬರುತ್ತದೆ, ಆದರೂ, ಪ್ಲಾಸೆಂಟವು ಪೂರ್ತಿಯಾಗಿ ಅಥವಾ ಇದರ ಸ್ವಲ್ಪ ಭಾಗವು ಗರ್ಭಕೋಶದಲ್ಲೇ ಉಳಿದುಕೊಂಡು ಅಕಾಲಿಕ ಗರ್ಭಪಾತವನ್ನುಂಟುಮಾಡುತ್ತದೆ. ದೈಹಿಕ ಲಕ್ಷಣಗಳಾದ ರಕ್ತಸ್ರಾವ, ಸೆಡೆತ ಮತ್ತು ನೋವು ಪ್ರಾಥಮಿಕ ಹಂತದ ಗರ್ಭಪಾತದ ಲಕ್ಷಣಗಳಂತೇ ಕಂಡುಬಂದರೂ, ಇವು ಅತೀ ಗಂಭೀರ ಮತ್ತು ಹೆರಿಗೆ ನೋವಿನಂತಿರುತ್ತದೆ.

ಚಿಹ್ನೆಗಳು ಹಾಗೂ ರೋಗ ಲಕ್ಷಣಗಳು ಬದಲಾಯಿಸಿ

ಗರ್ಭಪಾತದ ಅತೀ ಸಾಮಾನ್ಯವಾದ ಲಕ್ಷಣವೆಂದರೆ, ರಕ್ತಸ್ರಾವವಾಗುವುದು[೧೩]. ಗರ್ಭ ಧರಿಸಿದ ಅವಧಿಯಲ್ಲಿ ರಕ್ತಸ್ರಾವವಾದರೆ, ಅದು ಅಪಾಯಕರ ಗರ್ಭಪಾತ ಸನ್ನಿವೇಶ. ಗರ್ಭ ಧರಿಸಿದ ವೇಳೆ ರಕ್ತಸ್ರಾವಕ್ಕೆ ವೈದ್ಯಕೀಯ ಚಿಕಿತ್ಸೆ ಬಯಸಿದಾಗ ಅದರಲ್ಲಿ ಅರ್ಧದಷ್ಟು ಮಹಿಳೆಯರು ಗರ್ಭಪಾತಕ್ಕೊಳಗಾಗುತ್ತಾರೆ.[೧೪] ರಕ್ತಸ್ರಾವಕ್ಕಿಂತ ಹೊರತಾದ ಚಿಹ್ನೆಗಳು ಗಣನೀಯವಾಗಿ ಗರ್ಭಪಾತಕ್ಕೆ ಸಂಬಂಧಿಸಿದುದಾಗಿಲ್ಲ.[೧೩]

ಗರ್ಭವೈಫಲ್ಯವಾಗುವ ಸಾಧ್ಯತೆಗಳನ್ನು ಅಲ್ಟ್ರಾ ಸೌಂಡ್ ಪರೀಕ್ಷೆಯಲ್ಲೂ ಪತ್ತೆ ಹಚ್ಚಬಹುದಾಗಿದೆ ಅಥವಾ, ಹ್ಯೂಮನ್ ಕೋರಿಯಾನಿಕ್ ಗೊನೆಡೋಟ್ರೋಪಿನ್ (ಎಚ್‌ಸಿಜಿ) ಪರೀಕ್ಷೆಯಲ್ಲೂ ಪತ್ತೆಹಚ್ಚಬಹುದು. ಎಆರ್‌ಟಿ ವಿಧಾನದಿಂದ ಗರ್ಭ ಧರಿಸಿದ ಮಹಿಳೆ ಮತ್ತು ಹಿಂದೆ ಗರ್ಭಪಾತವಾದ ದಾಖಲೆಗಳಿದ್ದ ಮಹಿಳೆಯರನ್ನು ಸೂಕ್ಷ್ಮವಾಗಿ, ಎಚ್ಚರಿಕೆಯಿಂದ ಗಮನಿಸಲಾಗುತ್ತದೆ. ಇದರಿಂದ ಗರ್ಭಪಾತವಾಗುವ ಲಕ್ಷಣಗಳನ್ನು ಪರೀಕ್ಷೆಗೊಳಪಡದ ಇತರ ಮಹಿಳೆಯರಿಗಿಂತ ಮೊದಲು ಪತ್ತೆಹಚ್ಚಬಹುದು.

ಬದುಕುವ ಶಕ್ತಿ ಕಳೆದುಕೊಂಡ ಗರ್ಭವನ್ನು ಸ್ವಾಭಾವಿಕವಾಗಿ ಹೊರಹಾಕಲು ಅಸಾಧ್ಯವಾದ ಸಂದರ್ಭದಲ್ಲಿ ಇದನ್ನು ನಿರ್ವಹಿಸಲು ಇಂದು ಹಲವಾರು ವೈದ್ಯಕೀಯ ವಿಧಾನಗಳು ದಾಖಲಿಸಲ್ಪಟ್ಟಿವೆ.

ಮಾನಸಿಕ ಕಾರ್ಯವಿಧಾನ ಬದಲಾಯಿಸಿ

ಗರ್ಭಪಾತಗೊಂಡ ಮಹಿಳೆಯು ದೈಹಿಕವಾಗಿ ಬೇಗನೆ ಗುಣಮುಖವಾದರೂ, ಸಾಮಾನ್ಯವಾಗಿ ದಂಪತಿಗೆ ಮಾನಸಿಕವಾಗಿ ಚೇತರಿಸಿಕೊಳ್ಳಲು ಕೆಲಕಾಲ ಹಿಡಿಯುತ್ತದೆ. ಈ ಸನ್ನಿವೇಶದಲ್ಲಿ ಜನರು ವಿಭಿನ್ನತೆಯನ್ನು ತೋರುತ್ತಾರೆ: ಈ ನೋವನ್ನು ಮರೆಯಲು ಕೆಲವರು ತಿಂಗಳುಗಳ ಕಾಲಾವಧಿ ತೆಗೆದುಕೊಂಡರೆ, ಇನ್ನೂ ಕೆಲವರು ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವನ್ನೇ ತೆಗೆದುಕೊಳ್ಳುತ್ತಾರೆ. ಇನ್ನೂ ಕೆಲವರು ಸಮಾಧಾನ ಹೊಂದಿದರೆ, ಮತ್ತೆ ಕೆಲವರು ನಕಾರಾತ್ಮ ಭಾವನೆಗಳನ್ನು ಹೊಂದುತ್ತಾರೆ. ಗರ್ಭಪಾತಗೊಂಡ ಮಹಿಳೆಯರಿಗೆ ಸಂಬಂಧಿಸಿದ ಪ್ರಶ್ನಾವಳಿಗಳ(ಜಿಎಚ್‌ಕ್ಯೂ - 12, ಜನರಲ್ ಹೆಲ್ತ್ ಕ್ವಶ್ಚನರಿ) ಅಧ್ಯಯನದ ಪ್ರಕಾರ, ಗರ್ಭಪಾತಗೊಂಡ ಅರ್ಧದಷ್ಟು (55%) ಮಹಿಳೆಯರು ಮಾನಸಿಕ ಖಿನ್ನತೆಯನ್ನು ತಕ್ಷಣವೇ ವ್ಯಕ್ತಪಡಿಸಿದರು. 25% ಮಹಿಳೆಯರು ಮೂರು ತಿಂಗಳಲ್ಲಿ, 18% ಮಹಿಳೆಯರು ಆರು ತಿಂಗಳಲ್ಲಿ ಮತ್ತು 11% ಮಹಿಳೆಯರು ಒಂದು ವರ್ಷದ ನಂತರ ಮಾನಸಿಕ ಖಿನ್ನತೆಯನ್ನು ತೋರ್ಪಡಿಸಿದರು.[೧೫]

ಗರ್ಭಪಾತ ಮಕ್ಕಳ ಶವಸಂಸ್ಕಾರ

ಈ ಬಗ್ಗೆ ತೀವ್ರ ವ್ಯಥೆಗೊಳಗಾದವರಿಗೆ ಇದು "ಮಗು ಜನಿಸಿದೆ, ಆದರೆ, ಮರಣ ಹೊಂದಿದೆ" ಎಂಬ ಭಾವನೆಯಿರುವುದು. ಗರ್ಭಕೋಶದೊಳಗೆ ಶಿಶು ಅದೆಷ್ಟು ಕಡಿಮೆ ಸಮಯ ಜೀವಿಸಿದ್ದರೂ, ಈ ನಷ್ಟಕ್ಕೆ ಹೋಲಿಸಿದರೆ, ಅದು ಮುಖ್ಯ ವಿಷಯವೇ ಅಲ್ಲ. ಗರ್ಭಧಾರಣೆಯು ಗುರುತಿಸಲ್ಪಟ್ಟ ತಕ್ಷಣವೇ, ಹೆತ್ತವರು ಈ ಭ್ರೂಣದೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳಲು ಪ್ರಾರಂಭಿಸುತ್ತಾರೆ. ಈ ಗರ್ಭವು ಯಾವಾಗ ಜೀವಿಸಲು ಅಸಮರ್ಥ ಎಂದು ಗೊತ್ತಾದ ಕ್ಷಣವೇ, ಇವರ ಕನಸು, ಕಲ್ಪನೆಗಳು ಮತ್ತು ಭವಿಷ್ಯದ ಬಗೆಗಿನ ಯೋಜನೆಗಳು ನುಚ್ಚುನೂರಾಗುತ್ತವೆ.

ಕಳೆದುಕೊಂಡ ನೋವಿನ ಜೊತೆಗೆ, ಇದರ ಬಗ್ಗೆ ಇತರರು ಸಕಾರಾತ್ಮಕವಾಗಿ ಸ್ಪಂಧಿಸದೇ ಇರುವುದು ಕೂಡಾ ಮುಖ್ಯವಾಗುತ್ತದೆ. ಗರ್ಭಪಾತಕ್ಕೊಳಗಾದ ಸ್ವ-ಅನುಭವ ಹೊಂದಿರದ ಜನರಿಗೆ ಇದು ಹೇಗೆ ನಡೆಯುತ್ತದೆ ಎಂಬುದು ಮತ್ತು ಇತರರ ಭಾವನೆ ಮತ್ತು ಅನುಭವಗಳನ್ನು ಗ್ರಹಿಸುವ ಶಕ್ತಿಯನ್ನು ಪೂರ್ಣ ಪ್ರಮಾಣದಲ್ಲಿ ಗ್ರಹಿಸಲು ಕಷ್ಟ ಸಾಧ್ಯ. ಹೆತ್ತವರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸಿಕೊಳ್ಳಲು ವಾಸ್ತವವಾಗಿ ಇದನ್ನು ಬಯಸುತ್ತಾರೆ. ಗರ್ಭಧಾರಣೆ ಮತ್ತು ಗರ್ಭಪಾತವು ನೋವನ್ನುಂಟುಮಾಡುವ ವಿಷಯವಾದುದರಿಂದ, ಪರಸ್ಪರ ಸಂಭಾಷಣೆಯಲ್ಲಿ ಇದರ ಬಳಕೆ ಅತೀ ಕಡಿಮೆಯಾಗಿದೆ. ಈ ವಿಚಾರವು ಮಹಿಳೆಯರನ್ನು ವಿಶೇಷವಾಗಿ ಒಂಟಿತನವನ್ನನುಭವಿಸುವಂತೆ ಮಾಡುತ್ತದೆ. ವೈದ್ಯಕೀಯ ವೃತ್ತಿನಿರತರ ಅಸಮರ್ಪಕ ಮತ್ತು ನಿರ್ಭಾವುಕ ಪ್ರತಿಕ್ರಿಯೆಯು ಮಹಿಳೆಯ ಖಿನ್ನತೆ ಮತ್ತು ಅನುಭವಿಸುವ ನೋವಿಗೆ ಇನ್ನೂ ಹೆಚ್ಚಿನ ಕಾರಣವಾಗುತ್ತವೆ. ಆದುದರಿಂದ ಕೆಲವು ಸಂದರ್ಭಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಪರಿಣಾಮಕಾರಿ ಚಿಕಿತ್ಸಾ ನಿಬಂಧನೆಗಳನ್ನು ಅಳವಡಿಸಲಾಗಿದೆ.[೧೬]

ಗರ್ಭಪಾತದ ನೋವಿನ ಸ್ವಾನುಭವ ಹೊಂದಿದ ದಂಪತಿಗಳಿಗೆ ಗರ್ಭವತಿ ಮತ್ತು ನವಜಾತ ಶಿಶುವಿನ ಜೊತೆಗಿನ ಸಂಭಾಷಣೆಯೂ ಕೂಡಾ ದುಃಖ ತರುವಂತಹ ವಿಚಾರವಾಗಿದೆ. ಗೆಳೆಯ-ಗೆಳೆತಿಯರೊಂದಿಗಿನ, ಪರಿಚಿತರೊಂದಿಗಿನ, ಮತ್ತು ಕುಟುಂಬದವರೊಂದಿಗಿನ ಪರಸ್ಪರ ಸಂಬಂಧವೂ ಕೆಲವೊಮ್ಮೆ ಇದರಿಂದ ಬಹಳ ಕಷ್ಟಕರವಾಗುವ ಸಾಧ್ಯತೆಗಳಿವೆ.[೧೭]

ಕಾರಣಗಳು ಬದಲಾಯಿಸಿ

ಗರ್ಭಪಾತಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಈ ಎಲ್ಲಾ ಕಾರಣಗಳನ್ನೂ ಪತ್ತೆಹಚ್ಚಲಾಗುವುದಿಲ್ಲ. ಇವುಗಳಲ್ಲಿ ಅನುವಂಶಿಕ ತೊಂದರೆಗಳು, ಗರ್ಭಕೋಶದ ತೊಂದರೆಗಳು ಅಥವಾ ಹಾರ್ಮೋನ್‌ಗಳ ವೈಪರೀತ್ಯಗಳು, ಪುನರುತ್ಪಾದಕ ನಾಳಗಳ ಸೋಂಕು, ಮತ್ತು ಜೀವಕೋಶಗಳ ನಿರಾಕರಣೆಗಳು, ಗರ್ಭಪಾತ ಉಂಟುಮಾಡುವ ಕೆಲವು ಕಾರಣಗಳು.

ಮೊದಲ ತ್ರೈಮಾಸಿಕ ಬದಲಾಯಿಸಿ

ಗರ್ಭಧಾರಣೆಯಾದ ಆರು ತಿಂಗಳಲ್ಲಿ ಸಹಜ ಸಂಪೂರ್ಣ ಸಹಜ ಗರ್ಭಪಾತ, ಅಂದರೆ ಋತುಚಕ್ರವಾದ ಎಂಟು ವಾರಗಳ ನಂತರ(ಎಲ್‌ಎಮ್‌ಪಿ)

ಹೆಚ್ಚಿನ ಗರ್ಭಪಾತವು (ಮೂರನೇ ಎರಡು ಭಾಗದಿಂದ ಮುಕ್ಕಾಲು ಭಾಗದಷ್ಟು ಅಧ್ಯಯನಗಳ ಪ್ರಕಾರ)ಮೊದಲ ತ್ರೈಮಾಸಿಕದಲ್ಲಾಗುತ್ತದೆ.[೧೮][೧೯]

ಮೊದಲ 13 ವಾರಗಳಲ್ಲಿ ಗರ್ಭಪಾತವಾದ ಭ್ರೂಣಗಳಲ್ಲಿ ಕ್ರೋಮೊಸೋಮಿನ ಅಸಹಜತೆಗಳು ಹೆಚ್ಚಾಗಿ ಕಂಡುಬರುತ್ತದೆ. ಜೀನಿನಲ್ಲಿ ತೊಂದರೆಯಿರುವವರಲ್ಲಿ ಗರ್ಭಧಾರಣೆಯಾದಾಗ 95%ರಷ್ಟು ಭಾಗ ಗರ್ಭಪಾತದಲ್ಲಿ ಕೊನೆಗಾಣುತ್ತದೆ. ಹೆಚ್ಚಿನ ಕ್ರೋಮೊಸೋಮಿನ ತೊಂದರೆಗಳು ಆಕಸ್ಮಿಕವಾಗಿ ಆಗುತ್ತದೆ, ಇದು ದಂಪತಿಗಳಿಂದ ಬಂದಿಲ್ಲದಿದ್ದರೂ ಮರುಕಳಿಸುವ ಸಾಧ್ಯತೆಯಿರುತ್ತದೆ. ಕ್ರೋಮೊಸೋಮಿನ ತೊಂದರೆಗಳು ದಂಪತಿಗಳಿಂದಲೂ ಬರುವ ಸಾಧ್ಯತೆಯಿರುತ್ತದೆ. ಇದು ಪದೇ ಪದೇ ಗರ್ಭಪಾತವಾಗುವವರಲ್ಲಿ ಅಥವಾ ದಂಪತಿಗಳಲ್ಲಿ ಮೊದಲೆ ಈ ರೀತಿಯ ಮಕ್ಕಳಿದ್ದರೆ ಅಥವಾ ಸಂಬಂಧಿಕರಲ್ಲಿ ಹುಟ್ಟಿದಾಗಲೇ ವೈಕಲ್ಯತೆ ಹೊಂದಿದ್ದ ಮಕ್ಕಳಿದ್ದರೇ ಹೆಚ್ಚಾಗಿ ಗರ್ಭಪಾತವು ಸಂಭವಿಸುತ್ತದೆ.[೨೦] ಜೀನಿಗೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಾಗಿ ವಯಸ್ಸಾದ ದಂಪತಿಗಳಿಂದ ಹುಟ್ಟುವ ಮಕ್ಕಳಿಗೆ ಬರುತ್ತದೆ: ಹೆಚ್ಚು ವಯಸ್ಸಾದ ಮಹಿಳೆ ಗರ್ಭಧರಿಸಿದಾಗ ಗರ್ಭಪಾತ ಉಂಟಾಗುವ ದರವು ಹೆಚ್ಚಿರುತ್ತದೆ.[೨೧]

ಗರ್ಭಪಾತವಾಗುವ ಇನ್ನೊಂದು ಸಂದರ್ಭವೆಂದರೆ ಪ್ರೊಜೆಸ್ಟರಾನ್‌ ಕೊರತೆ. ಮಹಿಳೆಯ ಋತುಚಕ್ರದ ದ್ವಿತೀಯಾರ್ಧದಲ್ಲಿ(ಲೂಟಿಯಲ್ ಹಂತ)ಪ್ರೊಜೆಸ್ಟರಾನ್‌ ಕೊರತೆ ಕಂಡುಬಂದರೆ ಪ್ರೊಜೆಸ್ಟರಾನ್‌ ಪೂರಕಗಳನ್ನು ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಸೇವಿಸಲು ಸಲಹೆ ನೀಡುತ್ತಾರೆ.[೨೦] ಆದರೆ ಯಾವುದೇ ಅಧ್ಯಯನಗಳು ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ಪ್ರೊಜೆಸ್ಟರಾನ್‌ ಪೂರಕಗಳು ಗರ್ಭಪಾತದ ಅಪಾಯಗಳನ್ನು ಕಡಿಮೆ ಮಾಡುತ್ತದೆಂದು ಹೇಳಿಲ್ಲ,[೨೨] ಮತ್ತು ಲೂಟಿಯಲ್ ಹಂತದ ತೊಂದರೆಗಳ ಗುರುತಿಸುವಿಕೆಯು ಗರ್ಭಪಾತಕ್ಕೆ ನೆರವಾಗುವುದು ಪ್ರಶ್ನಾರ್ಹವಾಗಿದೆ.[೨೩]

ಎರಡನೇ ತ್ರೈಮಾಸಿಕ ಬದಲಾಯಿಸಿ

ಗರ್ಭಾಶಯದ ವಿಕಾರ, ಗರ್ಭಾಶಯದ (ತಂತುರಚನೆಯ) ಬೆಳವಣಿಗೆ, ಅಥವಾ ಗರ್ಭಾಶಯದ ಕೊರಳಿನ ತೊಂದರೆಗಳಿಂದ 15%ದಷ್ಟು ಗರ್ಭಪಾತ ಆಗುತ್ತದೆ .[೨೦] ಈ ಪರಿಸ್ಥಿತಿಗಳು ಅವಧಿಪೂರ್ವ ಜನನಕ್ಕೆ ಎಡೆಮಾಡಿ ಕೊಡುತ್ತದೆ.[೧೮]

ಎರಡನೇ ತ್ರೈಮಾಸಿಕದಲ್ಲಿ ಹೊಕ್ಕಳ ಬಳ್ಳಿಯ ತೊಂದರೆಯಿಂದ 19%ದಷ್ಟು ಗರ್ಭಪಾತವುಂತಾಗುತ್ತದೆ. ಮಾಸುಚೀಲದಲ್ಲಿನ ತೊಂದರೆಯಿದ್ದಾಗಲೂ ಸಹ ನಂತರದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗರ್ಭಪಾತವುಂತಾಗುತ್ತದೆ.[೨೪]

ಸಾಮಾನ್ಯ ಅಪಾಯದ ಅಂಶಗಳು ಬದಲಾಯಿಸಿ

ಒಂದಕ್ಕಿಂತ ಹೆಚ್ಚು ಭ್ರೂಣವನ್ನು ಒಳಗೊಂಡ ಗರ್ಭಧಾರಣೆಗಳಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ.[೨೦]

ನಿಯಂತ್ರಣದಲ್ಲಿಲ್ಲದ ಸಕ್ಕರೆ ಖಾಯಿಲೆ ಹೆಚ್ಚಾಗಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಸಕ್ಕರೆ ಖಾಯಿಲೆ ನಿಯಂತ್ರಣದಲ್ಲಿರುವ ಸ್ತ್ರೀಯರಲ್ಲಿ ಗರ್ಭಪಾತದ ಅಪಾಯ ನಿಯಂತ್ರಣದಲ್ಲಿರುತ್ತದೆ. ಏಕೆಂದರೆ ಸಕ್ಕರೆ ಖಾಯಿಲೆ ಗರ್ಭಪಾತದ ಸಮಯದಲ್ಲಿ ಗರ್ಭಾವಸ್ಥೆ ಸಕ್ಕರೆ ಖಾಯಿಲೆ‌ನ್ನು ಉಂಟುಮಾಡಬಹುದು, ರೋಗದ ಲಕ್ಷಣಗಳನ್ನು ಪರೀಕ್ಷಿಸುವುದು ಜನನ ಪೂರ್ವದ ಎಚ್ಚರಿಕೆಯ ಒಂದು ಮುಖ್ಯ ಭಾಗವಾಗಿದೆ.[೨೦]

ಪಾಲಿಸೈಸ್ಟಿಕ್ ಒವರಿ ಲಕ್ಷಣ ಗರ್ಭಪಾತದ ಅಪಾಯದ ಒಂದು ಸ್ಥಿತಿಯಾಗಿದೆ, ಪಿಸಿಒಎಸ್ ಹೊಂದಿರುವ 30-50% ಸ್ತ್ರೀಯರ ಗರ್ಭಧಾರಣೆಗಳು ಮೊದಲ ತ್ರೈಮಾಸಿಕದಲ್ಲಿ ಗರ್ಭಪಾತವಾಗುತ್ತಿವೆ. ಮೆಟ್‌ಫೊರ್ಮೆನ್ ಎನ್ನುವ ಔಷಧಿಯ ಚಿಕಿತ್ಸೆ ಪಿಸಿಒಎಸ್ ಹೊಂದಿರುವ ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನ ತೋರಿಸಿದೆ (ಮೆಟ್‌ಫೊರ್ಮೆನ್ ಚಿಕಿತ್ಸೆ ಮಾಡಿದ ಗುಂಪುಗಳು ಕಂಟ್ರೋಲ್ ಗುಂಪುಗಳ ಸುಮಾರು ಮೂರನೆಯ ಒಂದು ಭಾಗದ ಗರ್ಭಪಾತದ ಪ್ರಮಾಣಗಳನ್ನು ಅನುಭವಿಸಿದವು).[೨೫] ಆದರೂ, ಗರ್ಭಧಾರಣೆಯಲ್ಲಿ ಮೆಟ್‌ಫೊರ್ಮೆನ್ ಚಿಕಿತ್ಸೆಯ 2006ರ ಅವಲೋಕನ ಸುರಕ್ಷತೆಗೆ ಸಾಕಷ್ಟು ಪುರಾವೆಗಳನ್ನು ಹೊಂದಿಲ್ಲ ಮತ್ತು ಈ ಔಷಧಿಯ ನಿತ್ಯದ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಿಲ್ಲ.[೨೬]

ಕೆಲವೊಮ್ಮೆ ಬೆಳವಣಿಗೆಯಾಗುತ್ತಿರುವ ಭ್ರೂಣಕ್ಕೆ ಸರಿಯಾದ ನಿರೋಧಕ ಶಕ್ತಿ ದೊರೆಯದೆ ಇರುವುದು ಪ್ರಿಕ್ಲಾಂಪ್ಸಿಯ ಎಂದು ಕರೆಯಲ್ಪಡುವ ಗರ್ಭಧಾರಣೆಯ ಸಮಯದಲ್ಲಿನ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಮತ್ತು ಇದು ಗರ್ಭಪಾತದ ಅಪಾಯದ ಜೊತೆ ಸಂಬಂಧವನ್ನು ಹೊಂದಿದೆ. ಅಂತೆಯೇ, ಸ್ತ್ರೀಯರಲ್ಲಿ ಗರ್ಭಪಾತಗಳು ಪುನರಾವರ್ತನೆಯಾದ ಇತಿಹಾಸವನ್ನು ಹೊಂದಿದ್ದರೆ ಪ್ರಿಕ್ಲಾಂಪ್ಸಿಯ ಆಗುವ ಅಪಾಯವಿದೆ.[೨೭]

ಹೈಪೊಥೈರೈಡಿಸಮ್‌ನ ತೀವ್ರ ಸ್ಥಿತಿ ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಪಾತದ ಪ್ರಮಾಣದ ಮೇಲೆ ಹೈಪೊಥೈರೈಡಿಸಮ್‌ ಪ್ರಭಾವ ಬೀರುತ್ತದೆ ಎಂದು ಎಲ್ಲೂ ಪ್ರಮಾಣೀಕರಿಸಿಲ್ಲ. ಅಟೊ ಇಮ್ಯೂನ್ ರೋಗದಂತಹ ಕೆಲವು ಪ್ರತಿರಕ್ಷಿತ ಸ್ಥಿತಿಗಳು ಇದ್ದಾಗ ಅತ್ಯಂತ ಹೆಚ್ಚಿಗೆ ಗರ್ಭಪಾತವಾಗುವ ಅಪಾಯವಿದೆ.[೨೦]

ಕೆಲವು ವ್ಯಾಧಿಗಳು (ರುಬೆಲ್ಲ, ಕ್ಲಮಿದಿಯ ಮತ್ತು ಮುಂತಾದವುಗಳು) ಗರ್ಭಪಾತದ ಅಪಾಯವನ್ನು ಹೆಚ್ಚಿಸುತ್ತವೆ.[೨೦]

ತಂಬಾಕು(ಸಿಗರೇಟ್), ಧೂಮಪಾನ ಮಾಡುವವರಲ್ಲಿ ಗರ್ಭಪಾತದ ಅಪಾಯ ಹೆಚ್ಚಾಗಿರುತ್ತದೆ.[೨೮] ಗರ್ಭಪಾತದ ಹೆಚ್ಚಳ ತಂದೆ ಮಾಡುವ ಸಿಗರೇಟ್ ಸೇವನೆ ಜೊತೆ ಸಹ ಸಂಬಂಧವನ್ನು ಹೊಂದಿದೆ.[೨] ಪುರುಷರನ್ನು ಕುರಿತು ನಡೆಸಿದ ಅಧ್ಯಯನದಲ್ಲಿ ದಿನದಲ್ಲಿ 20ಕ್ಕಿಂತ ಕಡಿಮೆ ಸಿಗರೇಟು ಸೇದುವ ತಂದೆಯರಲ್ಲಿ 4% ಅಪಾಯ ಹೆಚ್ಚಾಗಿದೆ ಮತ್ತು ದಿನಕ್ಕೆ 20ಕ್ಕಿಂತ ಹೆಚ್ಚು ಸಿಗರೇಟುಗಳನ್ನು ಸೇದುವ ತಂದೆಯರಲ್ಲಿ 81%ರಷ್ಟು ಗರ್ಭಪಾತದ ಅಪಾಯ ಹೆಚ್ಚಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಕೊಕೇನ್ ಉಪಯೋಗ ಗರ್ಭಪಾತದ ಪ್ರಮಾಣಗಳನ್ನು ಹೆಚ್ಚಿಸುತ್ತದೆ.[೨೮] ದೈಹಿಕ ಗಾಯ, ವಾತಾವರಣದಲ್ಲಿನ ವಿಷದ ಅಂಶಗಳಿಗೆ ತೆರೆದುಕೊಳ್ಳುವಿಕೆ, ಮತ್ತು ಗರ್ಭಧಾರಣೆಯ ಸಮಯದಲ್ಲಿ ಆಯ್‌ಯುಡಿಯ ಬಳಕೆಗಳು ಸಹ ಹೆಚ್ಚಿನ ಗರ್ಭಪಾತದ ಅಪಾಯದ ಜೊತೆ ಸಂಬಂಧವನ್ನು ಹೊಂದಿದೆ.[೨೯]

ಮುಖ್ಯವಾಗಿ ಪ್ಯಾರಕ್ಸೆಟಿನ್ ಮತ್ತು ವೆನ್ಲಫ್ಯಾಕ್ಸೈನ್‌ನಂತಹ ಖಿನ್ನತೆ ನಿವಾರಕ ಔಷಧಗಳು ಸ್ವಾಭಾವಿಕ ಗರ್ಭಪಾತಕ್ಕೆ ಕಾರಣವಾಗುತ್ತವೆ.[೩೦][೩೧]

20 ವರ್ಷದ ನಂತರ ಗರ್ಭಪಾತ ದರವು ಹೆಚ್ಚುತ್ತದೆ.

ತಾಯಿಯ ವಯಸ್ಸು ಕೂಡ ಮುಖ್ಯವಾದ ಅಪಾಯದ ಅಂಶವಾಗಿದೆ. 20 ವರ್ಷಗಳ ನಂತರ ಗರ್ಭಪಾತದ ಪ್ರಮಾಣಗಳು ಯಾವಾಗಲೂ ಹೆಚ್ಚಾಗಿರುತ್ತವೆ.[೩೨][೩೩]

ಶಂಕಿಸಿದ ಅಪಾಯದ ಅಂಶಗಳು ಬದಲಾಯಿಸಿ

ಬಹಳ ಅಂಶಗಳು ಅಧಿಕ ಗರ್ಭಪಾತದ ಪ್ರಮಾಣಗಳ ಜೊತೆ ಸಂಬಂಧವನ್ನು ಹೊಂದಿವೆ, ಆದರೆ ಅವು ಗರ್ಭಪಾತಗಳಿಗೆ ಕಾರಣವಾಗುತ್ತವೆಯೋ ಇಲ್ಲವೋ ಎಂಬುದು ಇನ್ನೂ ಚರ್ಚೆಯಲ್ಲಿದೆ. ಇದಕ್ಕೆ ನಿರ್ದಿಷ್ಟವಾದ ಕಾರಣ ತಿಳಿದು ಬರುವುದಿಲ್ಲ, ಅಧ್ಯಯನಗಳು ತೋರಿಸುತ್ತಿರುವ ಪರಸ್ಪರ ಸಂಬಂಧ ಭವಿಷ್ಯವರ್ತಿಯ (ಮಹಿಳೆಯರು ಗರ್ಭಧಾರಣೆಯಾಗುವ ಮೊದಲು ಅಧ್ಯಯನ ಆರಂಭವಾಗುತ್ತದೆ) ಬದಲಾಗಿ ಪೂರ್ವಭಾವಿಯಾಗಿರಬಹುದು (ಗರ್ಭಪಾತಗಳು ಸಂಭವಿಸಿದ ನಂತರ ಅಧ್ಯಯನ ಪ್ರಾರಂಭವಾಗುತ್ತದೆ, ಇದು ಪೂರ್ವಗ್ರಹಿಕೆಯನ್ನು ಪರಿಚಯಿಸುತ್ತದೆ), ಅಥವಾ ಎರಡೂ ಆಗಿರಬಹುದು.

ವಾಕರಿಕೆ ಮತ್ತು ಗರ್ಭಧಾರಣೆಯಲ್ಲಿ ವಾಂತಿಮಾಡುವುದು (ಎನ್‌ವಿಪಿ, ಅಥವಾ ಬೆಳಗ್ಗಿನ ಅನಾರೋಗ್ಯ) ಇವು ಗರ್ಭಪಾತವಾಗುವ ಅಪಾಯದ ಇಳಿತಕ್ಕೆ ಸಂಬಂಧಿಸಿದೆ. ಈ ಸಂಬಂಧಕ್ಕೆ ಹಲವು ಸಲಹೆಗಳನ್ನು ಪ್ರಸ್ತಾಪಿಸಲಾಗಿದೆ ಆದರೆ ಯಾವುದೂ ವ್ಯಾಪಕವಾಗಿ ಸಹಮತವಾಗಿಲ್ಲ.[೩೪] ಏಕೆಂದರೆ ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರ ಆಹಾರ ತೆಗೆದುಕೊಳ್ಳುವುದು ಮತ್ತು ಇತರ ಚಟುವಟಿಕೆಗಳನ್ನು ಎನ್‌ವಿಪಿ ಪರಿವರ್ತಿಸಬಹುದು, ಗರ್ಭಪಾತಕ್ಕೆ ಕಾರಣಗಳ ಸಾಧ್ಯತೆಗಳನ್ನು ವಿಚಾರಣೆ ನಡೆಸುವಾಗ ಇದು ಗೊಂದಲವೆನಿಸುವ ಅಂಶವಾಗಬಹುದು.

ಇಂತಹ ಒಂದು ಅಂಶ ವ್ಯಾಯಾಮವಾಗಿದೆ. 92,000 ಗರ್ಭಿಣಿ ಸ್ತ್ರೀಯರಲ್ಲಿ ಮಾಡಿದ ಅಧ್ಯಯನದಿಂದ ಹೆಚ್ಚಿನ ವ್ಯಾಯಾಮ ಮಾಡುವುದರಿಂದ (ಈಜುವುದರ ಹೊರತಾಗಿ) 18 ವಾರಗಳ ಮೊದಲು ಗರ್ಭಪಾತವಾಗುವ ಸಾಧ್ಯತೆ ಅಧಿಕ ಎಂದು ಕಂಡುಬಂದಿದೆ. ವ್ಯಾಯಾಮದಲ್ಲಿ ಕಳೆಯುವ ಹೆಚ್ಚಿನ ಸಮಯ ಗರ್ಭಪಾತದ ಹೆಚ್ಚಿನ ಅಪಾಯದ ಜೊತೆ ಸಂಬಂಧಿಸಿತ್ತು: ವಾರದಲ್ಲಿ 1.5 ಘಂಟೆಗಳ ವ್ಯಾಯಾಮ ಮಾಡಿದವರಲ್ಲಿ ಸರಿಸುಮಾರು 10% ಹೆಚ್ಚಿನ ಅಪಾಯ ಕಂಡುಬಂದಿತು, ಮತ್ತು ಒಂದು ವಾರದಲ್ಲಿ 7 ಘಂಟೆಗಳ ವ್ಯಾಯಾಮಕ್ಕೆ 200% ಹೆಚ್ಚಿನ ಅಪಾಯ ಕಂಡು ಬಂದಿತು. ವಿಶೇಷವಾಗಿ ಹೆಚ್ಚು ಪ್ರಭಾವ ಬೀರುವ ವ್ಯಾಯಾಮಗಳು ಹೆಚ್ಚಿನ ಅಪಾಯ ಉಂಟುಮಾಡಿತ್ತು. ಗರ್ಭಧಾರಣೆಯ 18ನೇ ವಾರದ ನಂತರ ವ್ಯಾಯಾಮ ಮತ್ತು ಗರ್ಭಪಾತಗಳ ಪ್ರಮಾಣಗಳ ನಡುವೆ ಯಾವುದೇ ಸಂಬಂಧ ಕಂಡುಬರಲಿಲ್ಲ. ಸ್ತ್ರೀಯರು ಅಧ್ಯಯನಕ್ಕೆ ಆಯ್ಕೆಯಾಗುವ ಸಮಯದ ಮೊದಲೇ ಹೆಚ್ಚಿನ ಗರ್ಭಪಾತಗಳು ಸಂಭವಿಸಿದ್ದವು, ಮತ್ತು ಗರ್ಭಧಾರಣೆಯ ಸಮಯದಲ್ಲಿ ವಾಕರಿಕೆ ಅಥವಾ ಗರ್ಭಧಾರಣೆಯ ಮೊದಲು ವ್ಯಾಯಾಮ ಮಾಡುವ ಹವ್ಯಾಸಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿರಲಿಲ್ಲ.[೩೫]

ಹೆಚ್ಚಿನ ಪ್ರಮಾಣದಲ್ಲಿ ಕೆಫೀನ್ ಉಪಯೋಗ ಸಹ ಗರ್ಭಪಾತದ ಪ್ರಮಾಣಕ್ಕೆ ಕಾರಣವಾಗಿದೆ. 2007ರಲ್ಲಿ 1,000 ಗರ್ಭಿಣಿ ಮಹಿಳೆಯರ ಮೇಲೆ ಮಾಡಿದ ಅಧ್ಯಯನದ ಪ್ರಕಾರ ಕೆಫೀನ್ ತೆಗೆದುಕೊಳ್ಳದ 13%ರಷ್ಟು ಮಹಿಳೆಯರಿಗೆ ಹೋಲಿಸಿದಾಗ ಒಂದು ದಿನದಲ್ಲಿ 200 mg ಅಥವಾ ಹೆಚ್ಚಿನ ಕೆಫೀನ್ ತೆಗೆದುಕೊಳ್ಳುವ ಗರ್ಭಿಣಿ ಮಹಿಳೆಯರಲ್ಲಿ ಗರ್ಭಪಾತದ ಪ್ರಮಾಣ 25% ಎಂದು ವರದಿ ಮಾಡಿದೆ. 10 oz (300 ml) ಕಾಫಿಯಲ್ಲಿ ಅಥವಾ 25 oz (740 ml) ಚಹಾದಲ್ಲಿ 200 mg ಕೆಫೀನ್ ಇರುತ್ತದೆ. ಈ ಅಧ್ಯಯನವು ಗರ್ಭಧಾರಣೆಗೆ ಸಂಬಂಧಿಸಿದ ವಾಕರಿಕೆ ಮತ್ತು ವಾಂತಿ (ಎನ್‌ವಿಪಿ ಅಥವಾ ಬೆಳಗಿನ ಅನಾರೋಗ್ಯ) ಇವುಗಳಿಗಷ್ಟೆ ಸೀಮಿತವಾಗಿತ್ತು: ಮಹಿಳೆಯರಲ್ಲಿ ಎನ್‌ವಿಪಿ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಗಮನಿಸದೆ ಅಧಿಕ ಕೆಫೀನ್ ಉಪಯೋಗಿಸುವವರಿಗೆ ಗರ್ಭಪಾತದ ಪ್ರಮಾಣ ಹೆಚ್ಚಾಗಿತ್ತು ಎಂಬುದನ್ನು ಮಾತ್ರ ಅಧ್ಯಯನ ನಡೆಸಿತು. ಅಧ್ಯಯನಕ್ಕೆ ಮಹಿಳೆಯರನ್ನು ಆಯ್ಕೆ ಮಾಡಿಕೊಂಡ ಸಮಯದಲ್ಲೇ ಅರ್ಧಕ್ಕಿಂತ ಹೆಚ್ಚಿನ ಗರ್ಭಪಾತಗಳು ಸಂಭವಿಸಿತ್ತು.[೩೬] 2007ರಲ್ಲಿ 2,400 ಗರ್ಭಿಣಿ ಮಹಿಳೆಯರ ಮೇಲೆ ನಡೆಸಿದ ಎರಡನೆಯ ಅಧ್ಯಯನದ ಪ್ರಕಾರ ಒಂದು ದಿನದಲ್ಲಿ 200 mgವರೆಗೆ ಕೆಫೀನ್ ತೆಗೆದುಕೊಳ್ಳುವ ಗರ್ಭಿಣಿ ಮಹಿಳೆಯರಿಗೂ ಹೆಚ್ಚಿನ ಗರ್ಭಪಾತದ ಪ್ರಮಾಣಕ್ಕೂ ಯಾವುದೇ ಸಂಬಂಧ ಇರಲಿಲ್ಲ (ಗರ್ಭಧಾರಣೆಯ ನಂತರ ಒಂದು ದಿನದಲ್ಲಿ 200 mgಗಿಂತ ಹೆಚ್ಚು ಕೆಫೀನ್ ಕುಡಿಯುವ ಸ್ತ್ರೀಯರನ್ನು ಈ ಅಧ್ಯಯನಲ್ಲಿ ಸೇರಿಸಿಕೊಂಡಿರಲಿಲ್ಲ).[೩೭] 2009ರಲ್ಲಿ ನಡೆಸಿದ ಅಧ್ಯಯನ ಯಾವುದೇ ಹೆಚ್ಚಿನ ಅಪಾಯ ಉಂಟಾಗಿರುವ ಸಾಧ್ಯತೆಯನ್ನು ತೋರಿಸಿಲ್ಲ.[೩೮]

ರೋಗನಿರ್ಣಯ ಬದಲಾಯಿಸಿ

ಅಲ್ಟ್ರಾಸೌಂಡ್ ಮತ್ತು ಮೃತ ಅಂಗಾಂಶಗಳನ್ನು ಪರೀಕ್ಷಿಸುವ ಮೂಲಕ ಗರ್ಭಪಾತವನ್ನು ಖಚಿತ ಪಡಿಸಿಕೊಳ್ಳಬಹುದು. ಒಟ್ಟಾರೆ ಅಥವಾ ಸೂಕ್ಷ್ಮವಾದ ಅನಾರೋಗ್ಯ ಪೂರಿತ ಗರ್ಭಪಾತದ ಲಕ್ಷಣಗಳನ್ನು ಗಮನಿಸುವಾಗ ಪರಿಪೂರ್ಣ ಗರ್ಭಧಾರಣೆಯ ಅಂಶಗಳನ್ನು ಲಕ್ಷ್ಯದಲ್ಲಿಟ್ಟುಕೊಳ್ಳಲಾಗುತ್ತದೆ. ಸೂಕ್ಷ್ಮವಾಗಿ ನೋಡಿದಾಗ, ಇವುಗಳು ತೆಳುವಾದ ನಾಳದಂಥ ಚಾಚಿಕೆ, ಟ್ರೊಪೊಬ್ಲಾಸ್ಟ್, ಭ್ರೂಣದ ಭಾಗಗಳು, ಮತ್ತು ಎಂಡೊಮೆಟ್ರಿಯಂನಲ್ಲಿ ಗರ್ಭಾವಸ್ಥೆಯ ಬದಲಾವಣೆ ಹೊಂದಿರುವುದು ಕಂಡುಬರುತ್ತದೆ. ಅಸಹಜವಾಗಿ ಕ್ರೊಮೊಸೋಮ್‌ಗಳು ಹೊಂದಿಕೊಂಡಿರುವುದನ್ನು ಆನುವಂಶಿಕ ಪರೀಕ್ಷೆಗಳಿಂದ ಕಂಡುಕೊಳ್ಳಬಹುದು.

ನಿರ್ವಹಣೆ ಬದಲಾಯಿಸಿ

ಗರ್ಭಪಾತ ಮತ್ತು ಅಪಸ್ಥಾನೀಯ ಗರ್ಭಧಾರಣೆಯ ಮೊದಲ ಹಂತದಲ್ಲಿ ರಕ್ತ ಸ್ರಾವವಾಗುವುದು ತುಂಬಾ ಸಾಮಾನ್ಯವಾದ ರೋಗ ಲಕ್ಷಣವಾಗಿದೆ. ಗರ್ಭಾಪಾತದಲ್ಲಿ ಹೆಚ್ಚಾಗಿ ನೋವು ಉಂಟಾಗುವುದಿಲ್ಲ ಆದರೆ ಅಪಸ್ಥಾನೀಯ ಗರ್ಭಧಾರಣೆಯಲ್ಲಿ ಇದು ಸಾಮಾನ್ಯ.[೧೩] ರಕ್ತಸ್ರಾವ, ನೋವು ಅಥವಾ ಇವೆರಡೂ ಇದ್ದಾಗ ಟ್ರಾನ್ಸ್‌ವಜಿನಲ್ ಅಲ್ಟ್ರಾಸೌಂಡ್ ಮಾಡಲಾಗುತ್ತದೆ. ಅಲ್ಟ್ರಾಸೌಂಡ್‌ನಲ್ಲಿ ಸಮಸ್ಯಾರಹಿತ ಗರ್ಭಾಶಯದ ಒಳಗಿನ ಗರ್ಭಧಾರಣೆಯು ಗೊತ್ತಾಗದಿದ್ದರೇ ಹಲವಾರು βHCG ಪರೀಕ್ಷೆಗಳನ್ನು ನಡೆಸಿ ಅಪಸ್ಥಾನೀಯ ಗರ್ಭಧಾರಣೆಯಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳ ಬೇಕಾಗುತ್ತದೆ ಏಕೆಂದರೆ ಇದು ಜೀವಕ್ಕೆ ಭಯ ಹುಟ್ಟಿಸುವ ಪರಿಸ್ಥಿತಿಯಾಗಿದೆ.[೩೯][೪೦]

ರಕ್ತಸ್ರಾವವು ಕಡಿಮೆ ಪ್ರಮಾಣದಲ್ಲಾಗುತ್ತಿದ್ದರೆ ಒಮ್ಮೆ ವೈದ್ಯರನ್ನು ಕಂಡು ಸಲಹೆ ಪಡೆಯಲು ಸೂಚಿಸಬೇಕು. ರಕ್ತ ಸ್ರಾವವು ತುಂಬಾ ಹೆಚ್ಚಾಗಿ ಆಗುತ್ತಿದ್ದರೆ ಅದರೊಟ್ಟಿಗೆ ನೋವು ಅಥವಾ ಜ್ವರ ಇದ್ದರೆ ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

ಸಂಪೂರ್ಣವಾಗಿ ಗರ್ಭಪಾತವಾಗಿರುವುದನ್ನು ನಿರ್ಣಯಿಸಲು ಯಾವುದೇ ಚಿಕಿತ್ಸೆಯ ಅವಶ್ಯಕತೆ ಇಲ್ಲ (ಎಲ್ಲಿಯವರೆಗೆ ಅಪಸ್ಥಾನೀಯ ಗರ್ಭಧಾರಣೆ ಕೊನೆಯಾಗುವುದಿಲ್ಲವೋ ಅಲ್ಲಿಯವರೆಗೆ). ಗರ್ಭಪಾತವು ಸರಿಯಾಗಿ ಆಗದಿದ್ದಾಗ, ಕೋಶವು ಸಂಪೂರ್ಣವಾಗಿ ಹೊರ ಹೋಗದಿದ್ದಾಗ ಮೂರು ರೀತಿಯ ಚಿಕಿತ್ಸೆ ಲಭ್ಯವಿದೆ.

  • ಯಾವುದೇ ಚಿಕಿತ್ಸೆ ಇಲ್ಲದೆ (ಕಾದು ನೋಡುವುದು), ಇಂತಹ ಪ್ರಕರಣಗಳಲ್ಲಿ (65–80%) ಎರಡರಿಂದ ಆರು ವಾರಗಳಲ್ಲಿ ಸಹಜವಾಗಿಯೆ ಗರ್ಭಪಾತವಾಗುತ್ತದೆ.[೪೧] ಈ ಮೂಲಕ ಔಷಧಿಗಳಿಂದ ಮತ್ತು ಶಸ್ತ್ರಚಿಕಿತ್ಸೆಗಳಿಂದ ಯಾವುದೇ ಅಡ್ಡ ಪರಿಣಾಮಗಳು ಉಂಟಾಗುವುದು ತಪ್ಪುತ್ತದೆ.[೪೨]
  • ಸಂಪೂರ್ಣವಾಗಿ ಗರ್ಭಪಾತವಾಗಲು ವೈದ್ಯಕೀಯ ಚಿಕಿತ್ಸೆಯಲ್ಲಿ ಮಿಸೊಪ್ರೊಸ್ಟೋಲ್ (ಸಿಟೊಟೆಕ್ ಇದು ಪ್ರೊಸ್ಟಗ್ಲೇಂಡಿಯನ್ ಬ್ರ್ಯಾಂಡ್ ನೇಮ್ ಆಗಿದೆ) ಎಂಬ ಔಷಧಿಯನ್ನು ಬಳಸುತ್ತಾರೆ. ಸುಮಾರು 95% ರಷ್ಟು ಪ್ರಕರಣಗಳಲ್ಲಿ ಮಿಸೊಪ್ರೊಸ್ಟೋಲ್ ಬಳಸುವುದರಿಂದ ಕೆಲವೆ ದಿನಗಳಲ್ಲಿ ಗರ್ಭಪಾತವಾಗುತ್ತದೆ.[೪೧]
  • (ಸಾಮಾನ್ಯವಾಗಿ ವಾಕ್ಯೂಮ್ ಆ‍ಯ್‌ಪ್ಸಿರೇಶನ್, ಕೆಲವೊಮ್ಮೆ ಡಿ&ಸಿ ಅಥವಾ ಡಿ&ಇ ಮಾಡಲು ಸೂಚಿಸುತ್ತಾರೆ) ಈ ಶಸ್ತ್ರಚಿಕಿತ್ಸೆಗಳ ಮೂಲಕ ಗರ್ಭಪಾತವು ತುಂಬಾ ಶೀಘ್ರವಾಗಿ ಆಗುತ್ತದೆ. ಗರ್ಭಪಾತವಾದಾಗ ಉಂಟಾಗುವ ದೈಹಿಕ ನೋವಿಗೆ ಈ ಚಿಕಿತ್ಸಾ ಪದ್ಧತಿ ತುಂಬಾ ಉತ್ತಮವಾಗಿದೆ ಏಕೆಂದರೆ ಕಡಿಮೆ ಸಮಯ ಸಾಕಾಗುತ್ತದೆ ಮತ್ತು ಕಡಿಮೆ ರಕ್ತಸ್ರಾವ ಉಂಟಾಗುತ್ತದೆ.[೪೧] ಪುನಃ ಗರ್ಭಪಾತವಾದಾಗ ಮತ್ತು ಗರ್ಭಧಾರಣೆಯಾಗಿ ಜಾಸ್ತಿ ಸಮಯವಾದ ನಂತರ ಗರ್ಭಪಾತವಾದಾಗ ಅಂಗದ ಮಾದರಿ ಪಡೆದು ರೋಗ ಪತ್ತೆ ಪರೀಕ್ಷೆ ನಡೆಸಲು ಕೂಡ ಡಿ&ಸಿ ಉತ್ತಮ ಪದ್ಧತಿಯಾಗಿದೆ. ಹೀಗಿದ್ದರೂ ಡಿ&ಸಿ ಮಾಡುವುದರಿಂದ ಹೆಚ್ಚು ಸಮಸ್ಯೆಗಳು ಉಂಟಾಗಬಹುದು, ಉದಾಹರಣೆಗೆ ಗರ್ಭ ಕೊರಳು ಹಾಗೂ ಗರ್ಭಕೋಶಕ್ಕೆ ಗಾಯ, ಗರ್ಭಕೋಶ ಛಿಧ್ರವಾಗುವುದು ಮತ್ತು ಗರ್ಭಾಶಯದ ಒಳಗಿನ ಭಾಗದಲ್ಲಿ ಗಾಯದ ಗುರುತು ಉಂಟಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಮಕ್ಕಳನ್ನು ಬಯಸುವ ಮಹಿಳೆಯರು ತಮ್ಮ ಗರ್ಭಕೋಶಕ್ಕೆ ಕಡಿಮೆ ಅಪಾಯ ಉಂಟಾಗುವಂತೆ ನೋಡಿಕೊಳ್ಳಬೇಕು.

ಸೋಂಕುಶಾಸ್ತ್ರ ಬದಲಾಯಿಸಿ

ಗರ್ಭಪಾತವಾಗುವ ಸಂಭಾವ್ಯತೆಯನ್ನು ಕಂಡುಹಿಡಿಯುವುದು ಕಷ್ಟ ಸಾಧ್ಯ. ಹಲವಾರು ಗರ್ಭಪಾತಗಳು ಮಹಿಳೆಗೆ ತಾನು ಗರ್ಭಧರಿಸಿರುವುದು ತಿಳಿಯುವುದಕ್ಕಿಂತ ಮೊದಲೇ ಸಂಭವಿಸುತ್ತವೆ. ಗರ್ಭಪಾತವಾದ ಮಹಿಳೆಗೆ ಮನೆಯಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡುವುದರಿಂದಾಗಿ ಗರ್ಭಪಾತವಾದ ಹಲವಾರು ಪ್ರಕರಣಗಳು ವೈದ್ಯಕೀಯ ಅಂಕಿಅಂಶಕ್ಕೆ ಸಿಗುವುದಿಲ್ಲ.[೧೪] ಋತುಚಕ್ರದ ಕೊನೆಯ ಅವಧಿ ತೆಗೆದುಕೊಂಡು ಕೆಲವು ಸೂಕ್ಷ್ಮವಾದ ಪರೀಕ್ಷೆಗಳನ್ನು ನಡೆಸಿ ಶೇ25%ಕ್ಕಿಂತ ಹೆಚ್ಚಿನ ಗರ್ಭಪಾತಗಳು ಆರು ವಾರಕ್ಕಿಂತ ಮೊದಲೇ ಆಗುತ್ತವೆ ಎಂಬುದನ್ನು ಅಧ್ಯಯನದಲ್ಲಿ ಕಂಡುಕೊಳ್ಳಲಾಗಿದೆ.[೪೩][೪೪] 8%ರಷ್ಟು (ಋತುಚಕ್ರದ ಕೊನೆಯ ಅವಧಿಯ ಆರು ವಾರಗಳ ನಂತರ) ಗರ್ಭಪಾತಗಳು ಆಸ್ಪತ್ರೆಯಲ್ಲಿ ನಡೆಯುತ್ತವೆ.[೪೪]

ಋತುಚಕ್ರದ ಕೊನೆಯ ಅವಧಿಯ 10 ವಾರಗಳ ನಂತರ ಗರ್ಭಪಾತವಾಗುವ ಸಂಭವನೀಯತೆ ಕಡಿಮೆಯಾಗುತ್ತದೆ.ಉದಾಹರಣೆಗೆ ಭ್ರೂಣ ಬೆಳವಣಿಗೆಯ ಪ್ರಾರಂಭದ ಹಂತದಲ್ಲಿ.[೪೫] “ಬಹುಮಟ್ಟಿಗೆ ಭ್ರೂಣಾವಸ್ಥೆಯ ಅವಧಿ ಸಂಪೂರ್ಣವಾದ ನಂತರ" ಗರ್ಭಪಾತವಾಗುವುದಿಲ್ಲ ಋತುಚಕ್ರದ ಕೊನೆಯ ಅವಧಿಯಿಂದ 8.5 ವಾರಗಳು ಮತ್ತು ಹುಟ್ಟಿನ ನಡುವೆ ಗರ್ಭಪಾತವಾಗುವ ಪ್ರಮಾಣ ಶೇ ಎರಡರಷ್ಟು ಮಾತ್ರ.[೪೬]

ದಂಪತಿಗಳ ವಯಸ್ಸನ್ನು ಅವಲಂಬಿಸಿ ಗರ್ಭಪಾತವಾವಾಗುವ ಸಂಭಾವನೀಯತೆ ಹೆಚ್ಚಾಗುತ್ತದೆ. 25–29 ವರ್ಷ ವಯಸ್ಸಿನ ಪುರುಷರಿಂದ ಗರ್ಭಧಾರಣೆಯಾದಾಗ ಗರ್ಭಪಾತದ ಪ್ರಮಾಣ ಶೇ 40% ಆದೇ 25ಕ್ಕಿಂತ ಕಡಿಮೆ ವರ್ಷ ವಯಸ್ಸಿನ ಪುರುಷರಿಂದ ಗರ್ಭಧಾರಣೆಯಾದಾಗ ಗರ್ಭಪಾತವಾಗುವ ಪ್ರಮಾಣ ಶೇ40%ಕ್ಕಿಂತ ಕಡಿಮೆ ಎಂಬುದನ್ನು ಒಂದು ಅಧ್ಯಯನ ಕಂಡುಹಿಡಿದಿದೆ. 25–29 ವಯಸ್ಸಿನ ಗುಂಪಿನ ಪುರುಷರಿಂದ ಗರ್ಭಧಾರಣೆಯಾದಾಗ 60%ಕ್ಕಿಂತ ಕಡಿಮೆ ಗರ್ಭಪಾತವಾಗುತ್ತುದೆ ಅದೇ 40 ವರ್ಷಕ್ಕಿಂತ ಮೇಲ್ಪಟ್ಟಾಗ ಗರ್ಭಪಾತದ ಪ್ರಮಾಣ 60%ಕ್ಕಿಂತ ಜಾಸ್ತಿ ಎಂದುಬನ್ನು ಕೂಡ ಇದೆ ಅಧ್ಯಯನ ತಿಳಿಸಿದೆ.[೪೭] ಇನ್ನೊಂದು ಅಧ್ಯಯನದ ಪ್ರಕಾರ ತುಂಬಾ ವಯಸ್ಸಾದ ವ್ಯಕ್ತಿಯಿಂದ ಗರ್ಭಧಾರಣೆಯಾದಾಗ ಗರ್ಭಪಾತವಾಗುವ ಸಂಭವ ಮೊದಲ ಮೂರು ತಿಂಗಳಲ್ಲಿ ಹೆಚ್ಚು.[೪೮] ಇನ್ನೊಂದು ಅಧ್ಯಯನ ಪ್ರಕಾರ 45 ವರ್ಷ ವಯಸ್ಸಾದ ಮಹಿಳೆಯರಲ್ಲಿ ಈ ಸಂಭವನೀಯತೆ ಹೆಚ್ಚು, ಸುಮಾರು 800%ರಷ್ಟು ಗರ್ಭಧಾರಣೆಗಳಲ್ಲಿ (20–24 ವರ್ಷ ವಯಸ್ಸಿನವರಿಗೆ ಹೋಲಿಸಿದಾಗ) ಶೇ75%ರಷ್ಟು ಗರ್ಭಪಾತದಲ್ಲಿ ಕೊನೆಯಾಗುತ್ತವೆ.[೪೯]

ಇತರ ಪ್ರಾಣಿಗಳಲ್ಲಿ ಗರ್ಭಪಾತ ಬದಲಾಯಿಸಿ

ಗರ್ಭವನ್ನು ಧರಿಸುವ ಎಲ್ಲಾ ಪ್ರಾಣಿಗಳಲ್ಲೂ ಗರ್ಭಪಾತವು ಕಂಡುಬರುತ್ತದೆ. ಮಾನವನನ್ನು ಹೊರತು ಪಡಿಸಿ ಪ್ರಾಣಿಗಳಲ್ಲಿ ವಿವಿಧ ತಿಳಿದ ಅಪಾಯದ ಅಂಶಗಳಿವೆ. ಉದಾ, ಕುರಿಗಳಲ್ಲಿ ಗುಂಪಾಗಿ ಬಾಗಿಲಲ್ಲಿ ನುಗ್ಗುವುದು, ಅಥವಾ ನಾಯಿಯು ಅಟ್ಟಿಸಿಕೊಂಡು ಹೋಗುವಾಗ ಓಡುವುದು.[೫೦] ದನಗಳಲ್ಲಿ, ಗರ್ಭಪಾತವು (ಅದೆಂದರೆ ಸಹಜ ಗರ್ಭಪಾತ) ಸೋಂಕುರೋಗಗಳಿಂದುಂಟಾಗಬಹುದು, ಅವೆಂದರೆ ಬ್ರುಸೆಲ್ಲೊಸೊಸ್ ಅಥವಾ ಕ್ಯಾಂಪಿಲೊಬ್ಯಾಕ್ಟರ್‌, ಆದರೆ ಲಸಿಕೆಯಿಂದ ನಿಯಂತ್ರಿಸಬಹುದು.[೫೧] ಇನ್ನಿತರ ಕಾಯಿಲೆಗಳೂ ಗರ್ಭಪಾತವುಂಟುಮಾಡಬಹುದು. ಗರ್ಭ ಧರಿಸಿದ ಪ್ರೈರಿ ಇಲಿಗಳಲ್ಲಿ ತನ್ನ ಸಂಗಾತಿಯನ್ನು ತೊರೆದು ಬೇರೆ ಗಂಡಿಲಿಯೊಂದಿಗೆ[೫೨] ಇದ್ದಾಗ ಸಹಜ ಗರ್ಭಪಾತವು ಉಂಟಾಗುತ್ತದೆ, ಉದಾ:ಬ್ರೂಸ್ ಪರಿಣಾಮ, ಇದು ಪ್ರಯೋಗಾಲಯಕ್ಕಿಂತ ಹೊರಭಾಗದಲ್ಲಿ ಕಡಿಮೆ ಕಂಡುಬರುತ್ತದೆ.[೫೩] ಹೆಣ್ಣಿಲಿಯು ಅಪರಿಚಿತ ಗಂಡಿಲಿಯೊಂದಿಗೆ ಇದ್ದಾಗ ಸಹಜ ಗರ್ಭಪಾತವಾಗುವ ಸಂಖ್ಯೆಯು ಹೆಚ್ಚಾಗುತ್ತದೆ.[೫೪]

ICD10 ಸಂಕೇತಗಳು ಬದಲಾಯಿಸಿ

ಅಗಲ=20%
  • ರೂಢಿಯ ಗರ್ಭಪಾತ
  • ಅಸಂಪೂರ್ಣ ಗರ್ಭಪಾತ
  • ತಪ್ಪಿದ ಗರ್ಭಪಾತ
  • ಭಯದಿಂದಾಗುವ ಗರ್ಭಪಾತ
ಅಗಲ=80%N96
O03.0-O06.4
O02.1
O20.0

ಇವನ್ನೂ ಗಮನಿಸಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಕೊಂಡಿಗಳು ಬದಲಾಯಿಸಿ

🔥 Top keywords: ಕನ್ನಡಮುಖ್ಯ ಪುಟಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕನ್ನಡ ಅಕ್ಷರಮಾಲೆಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡ ಗುಣಿತಾಕ್ಷರಗಳುಬಸವೇಶ್ವರಗಾದೆಬೆಳೆ ವಿಮೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕಮತದಾನದ.ರಾ.ಬೇಂದ್ರೆಬಿ. ಆರ್. ಅಂಬೇಡ್ಕರ್ಲೋಕಸಭೆಹವಾಮಾನರಾಜಸ್ಥಾನ್ ರಾಯಲ್ಸ್ಕನ್ನಡ ಸಂಧಿಪೂರ್ಣಚಂದ್ರ ತೇಜಸ್ವಿರವೀಂದ್ರನಾಥ ಠಾಗೋರ್ಭಾರತದ ಸಂವಿಧಾನಶಿವರಾಮ ಕಾರಂತನರೇಂದ್ರ ಮೋದಿಗಣಗಲೆ ಹೂಅಕ್ಕಮಹಾದೇವಿಪ್ರಜಾಪ್ರಭುತ್ವಕರ್ನಾಟಕದ ಜಿಲ್ಲೆಗಳುಚಂದ್ರಶೇಖರ ಕಂಬಾರಮಾಸ್ತಿ ವೆಂಕಟೇಶ ಅಯ್ಯಂಗಾರ್ಗೌತಮ ಬುದ್ಧಚುನಾವಣೆವಚನ ಸಾಹಿತ್ಯಜಿ.ಎಸ್.ಶಿವರುದ್ರಪ್ಪಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಹಾತ್ಮ ಗಾಂಧಿನಾಲ್ವಡಿ ಕೃಷ್ಣರಾಜ ಒಡೆಯರು