ಆವೇಗ (ಭೌತಶಾಸ್ತ್ರ)

ಭೌತಶಾಸ್ತ್ರದಲ್ಲಿ, ಆವೇಗ(ಸಂವೇಗ) ಎಂದರೆ ಒಂದು ವಸ್ತುವಿನ ದ್ರವ್ಯರಾಶಿ ಹಾಗೂ ವೇಗದ ಗುಣಲಬ್ಧ. ಇದು ಒಂದು ಮೂರು ಆಯಾಮದ ಸದಿಶ ಪರಿಮಾಣವಾಗಿದ್ದು, ಪರಿಮಾಣ ಮತ್ತು ದಿಕ್ಕು ಎರಡನ್ನು ಹೊಂದಿರುತ್ತದೆ. m ವಸ್ತುವಿನ ದ್ರವ್ಯರಾಶಿಯಾಗಿದ್ದರೆ ಮತ್ತು v ವೇಗವಾಗಿದ್ದರೆ, ಆವೇಗ (ಸಂವೇಗವು) p

ಸ್ಟ್ರೈಕ್ ಚೆಂಡು ಅಪ್ಪಳಿಸಿದ ನಂತರ ಪೂಲ್ ಆಟದ ಕ್ಯೂ ಚೆಂಡಿನ ಆವೇಗವು ರ‍್ಯಾಕ್ ಮಾಡಿದ ಚೆಂಡುಗಳಿಗೆ ವರ್ಗಾವಣೆಗೊಳ್ಳುತ್ತದೆ

p =m.v ,

ಎಸ್‍ಐ ಏಕಮಾನದಲ್ಲಿ, ಇದನ್ನು ಸೆಕೆಂಡಿಗೆ ಕೆ.ಜಿ. ಮೀಟರ್‌ನಲ್ಲಿ ಅಳೆಯಲಾಗುತ್ತದೆ (kg⋅m/s). ಒಂದು ಕಾಯದ ಆವೇಗದ ಬದಲಾವಣೆಯ ದರವು ಅದರ ಮೇಲೆ ವರ್ತಿಸುತ್ತಿರುವ ನಿವ್ವಳ ಬಲಕ್ಕೆ ಸಮಾನವಾಗಿರುತ್ತದೆ ಎಂದು ನ್ಯೂಟನ್‍ನ ಎರಡನೇ ಚಲನಾ ನಿಯಮ ಹೇಳುತ್ತದೆ.

ಸಂವೇಗವು ಅದನ್ನು ಅಳೆಯಲು ಬಳಸಲ್ಪಡುವ ಆಯಾಮ ಚೌಕಟ್ಟನ್ನು ಅವಲಂಭಿಸಿರುತ್ತದೆ. ಸ್ಥಿರವಾಗಿರುವ ಆಯಾಮ ಚೌಕಟ್ಟಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಸಂವೇಗವು ಸಂರಕ್ಷಿತ ಪರಿಮಾಣವಾಗಿದೆ, ಅಂದರೆ ಒಂದು ಮುಚ್ಚಿದ ವ್ಯವಸ್ಥೆಯಲ್ಲಿ ಒಂದು ವಸ್ತುವು ಬಾಹ್ಯ ಬಲಗಳಿಂದ ಬಾಧಿತವಾಗದಿದ್ದರೆ, ಅದರ ಒಟ್ಟು ರೇಖೀಯ ಸಂವೇಗವು ಬದಲಾಗುವುದಿಲ್ಲ. ಆವೇಗವು ವಿಶೇಷ ಸಾಪೇಕ್ಷತೆಯಲ್ಲೂ ಸಂರಕ್ಷಿತವಾಗಿರುತ್ತದೆ, ಮತ್ತು ಬದಲಾದ ರೂಪದಲ್ಲಿ, ವಿದ್ಯುದ್ಬಲವಿಜ್ಞಾನ (electrodynamics), ಕ್ವಾಂಟಮ್ ಯಂತ್ರಶಾಸ್ತ್ರ ([[quantum mechanics]]), ಕ್ವಾಂಟಮ್ ಕ್ಷೇತ್ರ ಸಿದ್ಧಾಂತ, ಮತ್ತು ಸಾಮಾನ್ಯ ಸಾಪೇಕ್ಷತೆ (general relativity)ಯಲ್ಲೂ ಸಂರಕ್ಷಿತವಾಗಿರುತ್ತದೆ. ಇದು ದೇಶ ಮತ್ತು ಕಾಲದ ಮೂಲಭೂತ ಸಮ್ಮಿತಿಗಳಲ್ಲಿ ಒಂದಾದ ರೂಪಾಂತರ ಸಮ್ಮಿತಿಯ ಅಭಿವ್ಯಕ್ತಿಯಾಗಿದೆ.

🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್