ಅಟ್ಟೋ ಸ್ಟರ‍್ನ್

ಜರ್ಮನಿಯಲ್ಲಿ ಹುಟ್ಟಿದ ಮತ್ತು ಅಮೇರಿಕದ ಭೌತವಿಜ್ಞಾನಿಯಾಗಿದ್ದ ಅಟ್ಟೋ ಸ್ಟರ‍್ನ್‌ರವರು ೧೮೮೮ರ ಫೆಬ್ರವರಿ ೧೭ರಂದು ಅಪ್ಪರ್ ಸಿಲೇಸಿಯಾದ ಸೊಹ್ರಾದಲ್ಲಿ (ಈಗ ಪೋಲೆಂಡಿನ ಝೋರಿಯಲ್ಲಿ) ಜನಿಸಿದರು. ಲೂಯಿ ಡುನೋಯರ್‌ರವರು (೧೮೮೦-೧೯೬೩) ೧೯೧೧ರಲ್ಲಿ ‘ಆಣ್ವಿಕ ಧೂಲ ವಿಧಾನ’ವನ್ನೂ (molecular beam method), ಅದಕ್ಕೆ ಸಂಬಂಧಿಸಿದ ಸಾಧನವನ್ನೂ ಕಂಡುಹಿಡಿದಿದ್ದರು. ಆ ಸಾಧನವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರು ಡುನೋಯರ್‌ರವರ ಆಣ್ವಿಕ ಧೂಲ ವಿಧಾನವನ್ನು ಪರಿಷ್ಕರಿಸಿದರು. ಅದರ ತಂತ್ರವನ್ನು ಉಪಯೋಗಿಸಿಕೊಂಡ ಸ್ಟರ‍್ನ್‌ರವರಿಗೆ ಧೂಲದಲ್ಲಿರುವ ಕಣಗಳ ತರಂಗ ಸ್ವಭಾವಗಳನ್ನು ಗುರುತಿಸಲು ಅವರಿಗೆ ಸಾಧ್ಯವಾಯಿತು.[೧]ಲೋಹದ ಪರಮಾಣುಗಳ ಕಾಂತ ಮಹತ್ವವನ್ನು (magnetic moment) ಅಳೆಯುವ ಪ್ರಕ್ರಿಯೆಯನ್ನು ಸ್ಟರ‍್ನ್‌ರವರು ಆರಂಭಿಸಿದರು. ಬೆಳ್ಳಿಯ ಪರಮಾಣುವಿನ ಕಾಂತ ಮಹತ್ವವನ್ನು ಕಂಡುಹಿಡಿಯಲು ಅವರು ಸಮೀಕರಣವೊಂದನ್ನು ರೂಪಿಸಿದರು. ಮುಂದೆ ಅವರು ಪ್ರೋಟಾನ್ ಮತ್ತು ಡ್ಯೂಟೆರಾನ್‌ಗಳ ಕಾಂತ ಮಹತ್ವವನ್ನು ೧೯೩೩ರಲ್ಲಿ ಕಂಡುಹಿಡಿದರು. ಸ್ಟರ‍್ನ್‌ರವರು ೧೯೬೯ರ ಆಗಸ್ಟ್ ೧೭ರಂದು ಬಕ್ಲೀಯಲ್ಲಿ ನಿಧನರಾದರು.

ಅಟ್ಟೋ ಸ್ಟರ‍್ನ್
ಅಟ್ಟೋ ಸ್ಟರ‍್ನ್
ಜನನ
ಅಟ್ಟೋ ಸ್ಟರ‍್ನ್

೧೭ ಫೆಬ್ರವರಿ ೧೮೮೮
ಜರ್ಮನಿ
ರಾಷ್ಟ್ರೀಯತೆಜರ್ಮನಿ

ಉಲ್ಲೇಖಗಳು

ಬದಲಾಯಿಸಿ
🔥 Top keywords: ಕಮಲಾ ಹಂಪನಾಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರವಿಶೇಷ:Searchದರ್ಶನ್ ತೂಗುದೀಪ್ಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡ ಅಕ್ಷರಮಾಲೆಕನ್ನಡಮೊದಲನೆಯ ಕೆಂಪೇಗೌಡಹಂ.ಪ.ನಾಗರಾಜಯ್ಯಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಕುದುರೆಅಂತರಾಷ್ಟ್ರೀಯ ಯೋಗ ದಿನಪೂರ್ಣಚಂದ್ರ ತೇಜಸ್ವಿಶಿವರಾಮ ಕಾರಂತಕನ್ನಡ ಸಾಹಿತ್ಯವಿಶೇಷ:RecentChangesಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕಜಿ.ಎಸ್.ಶಿವರುದ್ರಪ್ಪತೆಂಗಿನಕಾಯಿ ಮರಚಂದ್ರಶೇಖರ ಕಂಬಾರಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಇತಿಹಾಸಕನ್ನಡ ಸಂಧಿಕನಕದಾಸರುಶಾಸನಗಳುಯು.ಆರ್.ಅನಂತಮೂರ್ತಿವಿನಾಯಕ ಕೃಷ್ಣ ಗೋಕಾಕಅಕ್ಕಮಹಾದೇವಿಮಾಸ್ತಿ ವೆಂಕಟೇಶ ಅಯ್ಯಂಗಾರ್