ಗವಿಸಿದ್ದೇಶ್ವರ ಮಠ

ಗವಿಮಠ
ಶ್ರೀ ಗವಿಸಿದ್ದೇಶ್ವರ ಮಹಾಸಂಸ್ಥಾನ
ಮಠ
ಶ್ರೀ ಗವಿಸಿದ್ದೇಶ್ವರ ಮಠ
ಕೊಪ್ಪಳ, ಕರ್ನಾಟಕ
ಕೊಪ್ಪಳ, ಕರ್ನಾಟಕ
Founded byಶ್ರೀ ರುದ್ರಮುನಿ ಶಿವಯೋಗಿಗಳು
Named forಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು - ೧೧ ನೇ ಪೀಠಾಧೀಪತಿಗಳು

ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ

ಬದಲಾಯಿಸಿ

ಶ್ರೀ ಗವಿಸಿದ್ದೇಶ್ವರ ಮಠ ಅಥವಾ ಗವಿಮಠವು ಕೊಪ್ಪಳದ ಪೂರ್ವ ಬೆಟ್ಟದ ಮೇಲಿರುವ ಸುಮಾರು ಒಂದು ಸಾವಿರ ವರ್ಷಗಳ ಭವ್ಯ ಇತಿಹಾಸ ಹೊಂದಿ ಇಂದಿಗೂ ಜನಮಾನಸದಲ್ಲಿ ಭಕ್ತಿ, ಭಾವ, ಅಭಿಮಾನಗಳನ್ನು ಉಳಿಸಿಕೊಂಡು ಬೆಳೆಸಿಕೊಂಡು ಮುನ್ನೇಡೆಯುತ್ತಿರುವ ಮಹಾಸಂಸ್ಥಾನ. ತ್ರಿವಿಧ ದಾಸೋಹದ (ಅನ್ನ, ಅರಿವು, ಆಧ್ಯಾತ್ಮ) ಗಂಗೋತ್ರಿ. ಕರ್ನಾಟಕದ ಅಗ್ರಮಾನ್ಯ ಮಠ ಪರಂಪರೆಯ ಸಂಸ್ಥಾನಗಳಲ್ಲಿ ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಠವು ಒಂದು.

ಜಾತ್ರೆ

ಬದಲಾಯಿಸಿ

ದಕ್ಷಿಣ ಭಾರತದ ಕುಂಭಮೇಳವೇಂದೆ ಖ್ಯಾತವಾಗಿರುವ ಜಾತ್ರ ಮಹೋತ್ಸವವು ದಾಸೋಹ, ಜಾಗೃತಿ ಮತ್ತು ಸರ್ವಧರ್ಮ ಸಮನ್ವಯದ ಸಮಾಗಮನ. ಧಾರ್ಮಿಕ ಆಚರಣೆಗಳೊಂದಿಗೆ ಪ್ರತಿ ಜಾತ್ರೆಯಲ್ಲಿಯು ಭಕ್ತರಲ್ಲಿ, ಅಭಿಮಾನಿಗಳಲ್ಲಿ ಹಾಗೂ ಜನರಲ್ಲಿ ವಿಶಿಷ್ಟ ರೀತಿಯ ಜಾಗೃತಿ ಮೂಡಿಸುತ್ತ ಜಾತ್ರೆಗೊಂದು ಹೊಸರೂಪ-ಹೊಸಮೆರುಗು ನೀಡುವ ಮೂಲಕ ಶ್ರೀ ಮಠವು ದೇಶ, ವಿದೇಶಗಳ ಗಮನ ಸೆಳೆದಿದೆ.

ಪ್ರತಿ ವರ್ಷ ಪುಷ್ಯ ಬಹುಳ ಬಿದಿಗೆ[೧]ಯಂದು ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವವು ಆಚರಿಸಲ್ಪಡುತ್ತದೆ. ಸುಮಾರು ೪ ರಿಂದ ೮ ಲಕ್ಷ ಭಕ್ತಸಮೂಹವು ಈ ಉತ್ಸವಕ್ಕೆ ಸಾಕ್ಷಿಯಾಗಲು ರಾಜ್ಯ, ನೆರೆರಾಜ್ಯಗಳಿಂದ ಆಗಮಿಸುತ್ತದೆ. ಪ್ರತಿ ವರ್ಷವು ಬಸವ ಪಟ ಆರೋಹಣ ಮಾಡುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸಂಪ್ರದಾಯದಂತೆ ಬನದ ಹುಣ್ಣಿಮೆಯದಿನ ಪಲ್ಲಕ್ಕಿ ಮಹೋತ್ಸವ ನೆರವೇರುತ್ತದೆ. ಅದೇ ದಿನ ರಥದ ಮೇಲಿನ ಕಳಸವನ್ನು ಹಲಗೇರಿ ಗ್ರಾಮದ ಭಕ್ತ ಲಿಂಗೈಕ್ಯ ಶ್ರೀ ವೀರನಗೌಡ ಲಿಂಗನಗೌಡ ಪಾಟೀಲರ ಮನೆಯಿಂದ ಬರಮಾಡಿಕೊಳ್ಳಲಾಗುತ್ತದೆ.[೧]

ಮೆರವಣಿಗೆ

ಬದಲಾಯಿಸಿ

೧೧ ನೇ ಪೀಠಧೀಪತಿಗಳಾಗಿದ್ದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಶ್ರೀ ಗವಿಮಠಕ್ಕೆ ಬರುವ ಮುನ್ನ ಮಂಗಾಳಪುರದ ಸಮೀಪದ ಊರಗೌಡರ ಮನೆಯಲ್ಲಿ ಲಿಂಗಾನುಷ್ಠಾನ ನಿರತರಾಗಿದ್ದು, ಗವಿಮಠಕ್ಕೆ ಹೊರಟು ನಿಂತಾಗ ತಮ್ಮ ಜಡೆಯನ್ನು ಕತ್ತರಿಸಿ ಆ ಮನೆಯ ಗೌಡಸಾನಿಗೆ ನೀಡುತ್ತಾರೆ. ಸಂತಾನವಿಲ್ಲದ ಆ ಗೌಡ ದಂಪತಿಗಳು ಆ ಜಡೆಯನ್ನು ಪೂಜಿಸಿದ ಫಲವಾಗಿ ಒಂದು ಗಂಡು ಸಂತಾನವನ್ನು ಪಡೆಯುತ್ತಾರೆ. ಆ ಮಗುವಿಗೆ ಜಡೇಗೌಡನೆಂದು ಹೆಸರಿಡುತ್ತಾರೆ ಹೀಗೆ ಆ ಕುಟುಂಬವು ಜಡೆಗೌಡ್ರ ಮನೆತನವೆಂದು ಹೆಸರು ಪಡೆಯುತ್ತದೆ. ಈ ಹಿನ್ನಲೆಯಲ್ಲಿ ಮಠದಲ್ಲಿ ಪೂಜೆಗೊಂಡ ಶ್ರೀ ಗವಿಸಿದ್ದೇಶ್ವರರ ಮೂರ್ತಿಯನ್ನು ತಂದು ಜಡೆಗೌಡ್ರ ಮನೆಯಲ್ಲಿ ಮೂಹುರ್ತಗಳಿಸಿ ಪೂಜಿಸಲ್ಪಟ್ಟ ನಂತರ ಸಕಲ ವಾದ್ಯಗಳೊಂದಿಗೆ ಕೊಪ್ಪಳ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ನೆಡೆದು ಗವಿಮಠಕ್ಕೆ ಬರಮಾಡಿಕೊಳ್ಳಲಾಗುತ್ತದೆ.

ಉಚ್ಛಾಯ

ಬದಲಾಯಿಸಿ

ಪ್ರತೀತಿಯಂತೆ, ಮಹಾರಥೋತ್ಸವವು ನಿರಾಂತಕವಾಗಿ, ನಿರ್ವಿಘ್ನತೆಯಿಂದ ಸಾಂಗವಗಿ ನೆಡೆಯಲೆಂದು ಮುನ್ನದಿನ ಲಘು ರಥೋತ್ಸವ ನೆರವೇರುತ್ತದೆ. ಈ ಲಘು ರಥೋತ್ಸವಕ್ಕೆ ಉಚ್ಛಾಯ ಎಂಬ ಹೆಸರಿದೆ.[೧]

ಜಾತ್ರೆಗೊಂದು ಹೊಸರೂಪ-ಹೊಸಮೆರುಗು

ಬದಲಾಯಿಸಿ

ಪ್ರತಿವರ್ಷವು ಜಾತ್ರೆಯಲ್ಲಿ ಸಮಾಜಿಕ ಅರಿವು ಮೂಡಿಸಿ ಜನರನ್ನು ಜಾಗೃತಗೊಳಿಸುವ ವಿಶಿಷ್ಟ ಕಾರ್ಯಕ್ರಮ ನೆಡೆಯುತ್ತದೆ.

೨೦೧೬ರಿಂದ ನೆಡೆದ ಜಾಗೃತಿ ಕಾರ್ಯಗಳ ವಿಷಯಗಳು[೧]

ಬದಲಾಯಿಸಿ
  1. ೨೦೧೬ ರಲ್ಲಿ ಬಾಲ್ಯವಿವಾಹ
  2. ೨೦೧೭ ರಲ್ಲಿ ಜಲದೀಕ್ಷೆ
  3. ೨೦೧೮ ರಲ್ಲಿ ಸಶಕ್ತ ಮನ - ಸಂತ್ರಪ್ತ ಜೀವನ
  4. ೨೦೧೯ ರಲ್ಲಿ ಕೃಪಾದೃಷ್ಠಿ - ನೇತ್ರದಾನ ಜಾಗೃತಿ
  5. ೨೦೨೦ ರಲ್ಲಿ ಲಕ್ಷ ವೃಕ್ಸೋತ್ಸವ
  6. ೨೦೨೧ ರಲ್ಲಿ ಸರಳ ಜಾತ್ರೆ - ಸಮಾಜಮುಖಿ ಜಾತ್ರೆ
  7. ೨೦೨೨ ರಲ್ಲಿ ಅಡವಿಹಳ್ಳಿ ಗ್ರಾಮ ದತ್ತು, ಕ್ಯಾನ್ಸರ್ ರೋಗ ತಪಾಸಣೆ, ಗಿಣಗೇರಿ ಕೆರೆ ಊಳೆತ್ತುವುದು
  8. ೨೦೨೩ ರಲ್ಲಿ ಅಂಗಾಂಗ ದಾನ ಜಾಗೃತಿ[೧]

ಜಾತ್ರೆಯಲ್ಲಿ ದಾಸೋಹ

ಬದಲಾಯಿಸಿ

೨೦೨೩ ರ ಮಹಾರಥೋತ್ಸವಕ್ಕೆ ೫-೬ ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿ ೪ ಲಕ್ಷ ಶೇಂಗಾ ಹೋಳಿಗೆ ಮತ್ತು ೨೭೫ ಕ್ವಿಂಟಾಲ್ ಮಾದಲಿಯನ್ನು ತಯಾರಿಸಲಾಗಿತ್ತು.[೨]

ಜಾತ್ರೆಯ ವಿಶೇಷ ದಾಸೋಹಕ್ಕಾಗಿ ಸುತ್ತಮತ್ತಲಿನ ಗ್ರಾಮಸ್ಥರು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ದವಸ-ಧಾನ್ಯ, ಹಣ, ರೊಟ್ಟಿ, ಮೊದಲಾದ ರೂಪದಲ್ಲಿ ದಾನ ಹರಿದುಬರುತ್ತದೆ.

ಗಂಗಾರತಿ

ಬದಲಾಯಿಸಿ

೨೦೨೩ರ ಜಾತ್ರೆಯಲ್ಲಿ ಪ್ರಥಮ ಬಾರಿಗೆ ಗವಿಮಠದ ಪರಂಪರೆಯಲ್ಲಿ ಕೆರೆಯ ಮಧ್ಯಭಾಗದಲ್ಲಿರುವ ಈಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಶಿಸ್ತುಬದ್ಧವಾಗಿ ನಿಂತಿದ್ದ ಐದು ಜನ ಭಕ್ತರತ್ತ ಮುಖ ಮಾಡಿ ಸಂಭ್ರಮದಿಂದ ಗಂಗೆಗೆ ಆರತಿ ಮಾಡುವ ಮೂಲಕ ಗಂಗಾರತಿ ನೇರವೆರಿದೆ.[೨]

ಶ್ರೀ ಗವಿಸಿದ್ದೇಶ್ವರ ಮಠ, ಕೊಪ್ಪಳ - ಪೀಠಾಧ್ಯಕ್ಷರ ಪಟ್ಟಿ

ಬದಲಾಯಿಸಿ
ಕ್ರ.ಸಂಹೆಸರುಕಾಲಪ್ರಮುಖ ಕಾರ್ಯಗಳು
ಶ್ರೀ ರುದ್ರಮುನಿ ಶಿವಯೋಗಿಗಳು
ಶ್ರೀ ಸಂಗನಬಸವ ಮಹಾಸ್ವಾಮಿಗಳು
ಶ್ರೀ ಶಿವಲಿಂಗ ಮಹಾಸ್ವಾಮಿಗಳು
ಶ್ರೀ ಚನ್ನವೀರ ಮಹಾಸ್ವಾಮಿಗಳು
ಶ್ರೀ ಕಾಶಿ ಕರಿಬಸವ ಮಹಾಸ್ವಾಮಿಗಳು
ಶ್ರೀ ಶಿವಲಿಂಗ ಮಹಾಸ್ವಾಮಿಗಳು
ಶ್ರೀ ಪುಟ್ಟ ಸುಚನ್ನವೀರ ಮಹಾಸ್ವಾಮಿಗಳು
ಶ್ರೀ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು
ಶ್ರೀ ಸಂಗನಬಸವ ಮಹಾಸ್ವಾಮಿಗಳು
೧೦ಶ್ರೀ ಚನ್ನಬಸವ ಮಹಾಸ್ವಾಮಿಗಳು
೧೧ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು
೧೨ಶ್ರೀ ಹಿರಿಶಾಂತವೀರ ಮಹಾಸ್ವಾಮಿಗಳು
೧೩ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು
೧೪ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು
೧೫ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು
೧೬ಶ್ರೀ ಮರಿಶಾಂತವೀರ ಮಹಾಸ್ವಾಮಿಗಳು
  • ಬಡವಿದ್ಯಾರ್ಥಿಗಳಿಗೆ ಜಾತ್ಯಾತೀತವಾಗಿ ವಿದ್ಯಾರ್ಥಿನಿಲಯ ಸ್ಥಾಪನೆ[೩]
  • ೧೯೫೧ ರಲ್ಲಿ ಹೈ-ಕ ಭಾಗದ ಮೊದಲ ಖಾಸಗಿ ಶಾಲೆ - ಗವಿಸಿದ್ದೇಶ್ವರ ಪ್ರೌಢಶಾಲೆ ಸ್ಥಾಪನೆ[೩]
  • ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ ಸ್ಥಾಪನೆ[೩]
  • ೧೯೬೩ ರಲ್ಲಿ ಶ್ರೀ ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ ಅಡಿಯಲ್ಲಿ ಶ್ರೀ ಗವಿಸಿದ್ದೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು ಸ್ಥಾಪನೆ[೩]
೧೭ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು
  • ರಾಜ್ಯದ ಶಾಖಾ ಮಠಗಳ ಪುನರುಜ್ಜೀವನಗೊಳಿಸುವಿಕೆ[೩]
  • ೧೯೯೮ ರಲ್ಲಿ ಅಂದಾಜು ೬ ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸ್ಥಾಪನೆ[೩]
  • ಇತರೆ ಅನೇಕ ಶಿಕ್ಷಣ ಸಂಸ್ಥೆಗಳ ಸ್ಥಾಪನೆ[೩]
೧೮ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಪಟ್ಟಾಭಿಷೇಕ: ೧೩ನೇ ಡಿಸೆಂಬರ್ ೨೦೦೨[೪]
  • ೨೦೦೦ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಪ್ರಸಾದ ವ್ಯವಸ್ಥೆಗಾಗಿ ೮ ಕೋಟಿ ರೂಪಾಯಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯ ಸ್ಥಾಪನೆ.
  • ಡಿ.ಎಡ್, ಬಿ.ಎಡ್ ಮತ್ತು ಬಿ.ಬಿ.ಎಮ್ ಕಾಲೇಜುಗಳ ಸ್ಥಾಪನೆ.[೩]
  • ವಸತಿ ಶಾಲೆ ಸ್ಥಾಪನೆ - ಸಿ.ಬಿ.ಎಸ್.ಸಿ ಪಠ್ಯಕ್ರಮದೊಂದಿಗೆ[೩]
  • ಪೂರ್ವ ಪ್ರಾಥಮಿಕದಿಂದ ಸ್ನಾತಕೋತ್ತರ ಪದವಿ ಶಿಕ್ಷಣದವರೆಗೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆ[೩]
  • ಹಿರೇಹಳ್ಳ ಪುನಚ್ಸೇತನ ಟ್ರಸ್ಟ ಸ್ಥಾಪನೆಯೊಂದಿಗೆ 'ಜಲ ದೀಕ್ಷ'[೩] ಕಾರ್ಯದಲ್ಲಿ ಸಕ್ರೀಯ - ಜಲಋಷಿ[೪] ಎಂದೇ ಖ್ಯಾತಿ.
  • ತ್ರಿವಿಧ ದಾಸೋಹದೊಂದಿಗೆ ವೃಕ್ಷ ದಾಸೋಹ ಪ್ರಾರಂಭ[೪]
  • ಜಾತ್ರೆಗೊಂದು ಹೊಸರೂಪ-ಹೊಸಮೆರುಗು
ಗವಿಮಠ, ಕೊಪ್ಪಳ

ಉಲ್ಲೇಖಗಳು

ಬದಲಾಯಿಸಿ
  1. ೧.೦ ೧.೧ ೧.೨ ೧.೩ ೧.೪ "ಆರ್ಕೈವ್ ನಕಲು". Archived from the original on 2023-01-10. Retrieved 2023-01-10.
  2. ೨.೦ ೨.೧ https://tv9kannada.com/karnataka/koppal/koppal-gavisiddeshwara-matha-festival-275-quintal-madali-sweet-ready-for-devotees-koppal-news-in-kannada-vkb-au55-497143.html
  3. ೩.೦೦ ೩.೦೧ ೩.೦೨ ೩.೦೩ ೩.೦೪ ೩.೦೫ ೩.೦೬ ೩.೦೭ ೩.೦೮ ೩.೦೯ ೩.೧೦ "SGVVT Founder – Shri Gavisiddeshwara College of Education". Shri Gavisiddeshwara College of Education – Gavimath Campus, Gavimath Road, Koppal. Retrieved 2023-08-04.
  4. ೪.೦ ೪.೧ ೪.೨ https://kannada.asianetnews.com/karnataka-districts/koppals-shri-gavisiddeshwara-swamiji-coronation-19-years-completed-grg-r41pyz
🔥 Top keywords: ಮುಖ್ಯ ಪುಟದರ್ಶನ್ ತೂಗುದೀಪ್ಕುವೆಂಪುಸಹಾಯ:ಲಿಪ್ಯಂತರವಿಶೇಷ:Searchರಾಷ್ಟ್ರೀಯ ಸೇವಾ ಯೋಜನೆಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಕನ್ನಡದ.ರಾ.ಬೇಂದ್ರೆಗೌತಮ ಬುದ್ಧಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಭಾರತದ ರಾಷ್ಟ್ರಪತಿಗಳ ಪಟ್ಟಿಶಿವರಾಮ ಕಾರಂತಜಿ.ಎಸ್.ಶಿವರುದ್ರಪ್ಪಬಸವೇಶ್ವರಭಾರತೀಯ ಮೂಲಭೂತ ಹಕ್ಕುಗಳುಕನ್ನಡ ಸಾಹಿತ್ಯಕನ್ನಡ ಸಂಧಿಚೇ ಗುವಾರತತ್ಸಮ-ತದ್ಭವಕರ್ನಾಟಕಪೂರ್ಣಚಂದ್ರ ತೇಜಸ್ವಿವಚನಕಾರರ ಅಂಕಿತ ನಾಮಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಾಸ್ತಿ ವೆಂಕಟೇಶ ಅಯ್ಯಂಗಾರ್ಕನ್ನಡ ಗುಣಿತಾಕ್ಷರಗಳುಜಲ ಮಾಲಿನ್ಯಮಹಾತ್ಮ ಗಾಂಧಿಕರ್ನಾಟಕದ ಜಿಲ್ಲೆಗಳುಯು.ಆರ್.ಅನಂತಮೂರ್ತಿಸ್ವಾಮಿ ವಿವೇಕಾನಂದಅಂಗವಿಕಲತೆಚಂದ್ರಶೇಖರ ಕಂಬಾರಮೊಸಳೆಗಿರೀಶ್ ಕಾರ್ನಾಡ್