ವಿಜಯಭಾಸ್ಕರ್

ಕನ್ನಡ ಚಿತ್ರ ಸಂಗೀತದ ಸಾಧ್ಯತೆಯನ್ನು ಗಮನಾರ್ಹವಾಗಿ ವಿಸ್ತರಿಸಿದ ಹೆಗ್ಗಳಿಕೆಯ ಸಂಗೀತ ನಿದೇಶಕ ವಿಜಯಭಾಸ್ಕರ್.(೧೯೩೧-೨೦೦೨)

ವಿಜಯಭಾಸ್ಕರ್

ವಿಜಯಭಾಸ್ಕರ್ ಜನಿಸಿದ್ದು ಬೆಂಗಳೂರಿನಲ್ಲಿ ೧೯೩೧ರ ಸೆಪ್ಟೆಂಬರ್ ೭ ರಂದು.ತಂದೆ ಕೃಷ್ಣ ಮೂರ್ತಿ ,ತಾಯಿ ಜೀಜಾಬಾಯಿ,ಮನೆಯಲ್ಲಿ ಸದಾ ಸಂಗೀತದ ವಾತಾವರಣ.ಮನೆಯ ಹತ್ತಿರದಲ್ಲಿ ಸದಾ ಹರಿಕತೆ,ಭಜನೆ,ಭಕ್ತಿಗೀತೆಗಳ ಅನುರಣನ.ಸಂಗೀತದತ್ತ ಆಸಕ್ತಿ ಸಹಜವಾಗಿಯೇ ಬೆಳೆಯಿತು..ಸೌತ್ ಪೆರೇಡ್ ಮೈದಾನದಲ್ಲಿ ನಡೆಯುತಿದ್ದ ಪಾಶ್ಚಿಮಾತ್ಯ ಮಾದರಿಯ ಬ್ರಾಸ್ ಬ್ಯಾಂಡ್ ಇದಕ್ಕೆ ಇಂಬು ನೀಡಿತು.ತಂದೆಯ ಆಸೆಯಂತೆ ಇಂಜಿನಿಯರಿಂಗ್ ಓದಿದರು,ನಡುವೆಯೇ ಸಂಗೀತ ಕಲಿತರು.ನಾರಾಯಣ ಸ್ವಾಮಿಗಳ ಬಳಿ ಕರ್ನಾಟಕ ಸಂಗೀತ ,ಜಿ,ವಿ,ಭಾವೆಯವರ ಬಳಿ ಹಿಂದೂಸ್ತಾನಿ,ಲೀನೀ ಹಂಟ್ ಬಳಿ ಪಾಶ್ಚಾತ್ಯ ಸಂಗೀತ ಕಲಿತ ಅವರು,ಮ್ಯಕಾನಿಕಲ್ ಇಂಜಿನಿಯರಿಂಗ್ ಮುಗಿಸುವ ವೇಳೆಗೆ ಸಂಗೀತದಲ್ಲಿಯೂ ಪ್ರೌಡಿಮೆ ಪಡೆದಿದ್ದರು.ಈಗ ಆಯ್ಕೆಯ ಪ್ರಶ್ನೆ ಬಂದಾಗ ವಿಜಯಭಾಸ್ಕರ್ ಸಂಗೀತವನ್ನೇ ಆರಿಸಿಕೊಂಡರು.ಭವಿಷ್ಯವನ್ನು ಅರಸಿ ಮುಂಬೈಗೆ ತೆರಳಿದರು.ಅಲ್ಲಿ ನೌಷಾದ್ ಸಹಾಯಕರಾಗಿ ಪ್ರೌಡಿಮೆಯನ್ನು ಪಡೆದರು.ಪಿಯಾನೊ ನುಡಿಸುವುದರಲ್ಲಿ ಪರಿಣತಿ ಹೊಂದಿದ್ದ ಇವರು, ಪ್ರಖ್ಯಾತ ಸಾಹಿತಿಗಳಾದ ದ.ರಾ.ಬೇಂದ್ರೆ, ಕುವೆಂಪು, ಜಿ.ಎಸ್.ಎಸ್, ಅವರ ಕೃತಿಗಳನ್ನು ಚಲನಚಿತ್ರಕ್ಕೆ ಅಳವಡಿಸಿದವರಲ್ಲಿ ಪ್ರಮುಖರು.

೧೯೫೪ರಲ್ಲಿ ತೆರೆಕಂಡ "ಶ್ರೀ ರಾಮ ಪೂಜಾ "ಇವರಿಗೆ ಸ್ವತಂತ್ರ್ಯ ಸಂಗೀತ ನಿರ್ದೇಶನಕ್ಕೆ ಅವಕಾಶ ಕಲ್ಪಿಸಿದ ಮೊದಲ ಚಿತ್ರ.ಈ ಚಿತ್ರಕ್ಕೆ ಅಚ್ಹ ಕನ್ನಡಿಗರದ್ದೇ ಆದ "ಜಯ ಮಾರುತಿ ವಾದ್ಯ ವ್ರಂದ"ವನ್ನು ಬಳಸಿದರು.ಕನ್ನಡ ವಾದ್ಯಗಾರನ್ನೇ ಸಂಪೂರ್ಣ ಬಳಸಿಕೊಂಡು ಸಂಗೀತ ನಿರ್ದೇಶನ ಮಾಡಿದ ಮೊದಲಿಗರು ವಿಜಯಭಾಸ್ಕರ್.ನಂತರ "ಭಾಗ್ಯ ಚಕ್ರ"ಚಿತ್ರಕ್ಕೆ ಅವರು ಸಂಗೀತ ಮಾತ್ರವಲ್ಲ ಚಿತ್ರ ಕಥೆ -ಸಂಭಾಷಣೆ ಕೂಡಾ ಬರೆದರು.ಹಿಂದಿ ಚಿತ್ರ ರಂಗದ ನಿಕಟ ಪರಿಚಯವಿದ್ದ ಅವರು ಶಾಟ್ ಡಿವಿಜನ್ ಅನ್ನು ಈ ಚಿತ್ರದ ಮೂಲಕ ಕನ್ನಡ ಚಿತ್ರ ರಂಗಕ್ಕೆ ಪರಿಚಯಿಸಿದ್ದರು."ರಾಣಿ ಹೊನ್ನಮ್ಮ " ಅವರಿಗೆ ಹೆಸರು ತಂದು ಕೊಟ್ಟಿತು.ಅವರ ಸಾಮರ್ಥ್ಯವನ್ನೆಲ್ಲಾ ಸಾಕಾರಗೊಳಿಸಿದಂತಹ ಚಿತ್ರ "ಸಂತ ತುಕಾರಾಂ".ಚಿತ್ರದ ಗೀತೆಗಳೆಲ್ಲವೂ ಜನಪ್ರೀಯವಾಗುವುದರ ಜೊತೆಗೆ ವಿಜಯಭಾಸ್ಕರ್ ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರಾದರು.ಪ್ರಯೋಗಶೀಲರಾಗಿದ್ದ ಅವರು"ಮನ ಮೆಚ್ಹಿದ ಮಡದಿ "ಚಿತ್ರದ ಟೈಟಲ್ ನಲ್ಲಿ ರಾಷ್ಟ್ರ ಕವಿ ಕುವೆಂಪು ಅವರ "ಜೈ ಭಾರತ ಜನನಿಯ ತನುಜಾತೆ "ಯನ್ನು ಹಿನ್ನೆಲೆ ಗೀತೆಯಾಗಿ ಬಳಸಿದ್ದರು.ಮುಂದೆ ಈ ಗೀತೆ ನಾಡ ಗೀತೆಯಾಗಲು ಈ ಪ್ರಯೋಗವೇ ಕಾರಣವಾಯಿತು.

"ನಾಂದಿ" ಚಿತ್ರದಲ್ಲಿ ವಾದ್ಯದ ಅಬ್ಬರವಿಲ್ಲದೆ ಸುಕೋಮಲತೆಯಿಂದ ಅವರು ಮೂಡಿಸಿದ ಸಂಗೀತ ಇನ್ನೂಂದು ಹೆಗ್ಗಳಿಕೆಯಾಯಿತು.ಇದರಲ್ಲಿನ "ಹಾಡೊಂದ ಹಾಡುವೆ "ವಿಶಿಷ್ಟ ಗೀತೆಯಾಗಿ ಇಂದಿಗೂ ಉಳಿದಿದೆ.೧೯೬೭ರಲ್ಲಿ ತೆರೆ ಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಬೆಳ್ಳಿ ಮೋಡ"ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನೀಡಿದರು,ಅಲ್ಲಿಂದ ಒಂದು ಅನುಪಮ ಚಿತ್ರ ಯಾತ್ರೆ ಆರಂಭವಾಯಿತು.ಪುಟ್ಟಣ್ಣನವರ ೧೮ ಚಿತ್ರಗಳಿಗೆ ವಿಜಯಭಾಸ್ಕರ್ ಸಂಗೀತ ನೀಡಿದ್ದಾರೆ.ಮಾತ್ರವಲ್ಲ ಕೆ,ಎಸ್,ಎಲ್, ಸ್ವ್ವಾಮಿ ಮತ್ತು ಗೀತಪ್ರಿಯ ಅವರ ಬಹುತೀಕ ಚಿತ್ರಗಳಿಗೆ ವಿಜಯಭಾಸ್ಕರ್ ಅವರದೇ ಸಂಗೀತ.ವ್ಯಾಪಾರಿ ಚಿತ್ರಗಳಿಗೆ ಮಾತ್ರವಲ್ಲದೆ ಕಲಾತ್ಮಕ ಚಿತ್ರಗಳಿಗೂ ವಿಜಯಭಾಸ್ಕರ್ ಪರಿಣಾಮಕಾರಿ ಸಂಗೀತ ನಿರ್ದೇಶನ ಮಾಡಿದ್ದಾರೆ."ಸಂಕಲ್ಪ,""ಅನ್ವೇಷಣೆ',"ಎಲ್ಲಿಂದಲೂ ಬಂದವರು","ಬ್ಯಾಂಕರ್ ಮಾರ್ಗಯ್ಯ",ಹಾವು ಏಣಿ ಆಟ","ಸೂರ್ಯ","ಸಂಗ್ಯಾ ಬಾಳ್ಯ', ಮೊದಲಾದ ಚಿತ್ರಗಳು ಅದಕ್ಕೆ ಉದಾಹರಣೆ.

ಕನ್ನಡ ಮಾತ್ರವಲ್ಲದೆ ಹಲವು ಭಾಷೆಗಳ ಕಲಾತ್ಮಕ ಚಿತ್ರಗಳನ್ನೂ ತಮ್ಮ ಸಂಗೀತದಿಂದ ಮಹತ್ವವನ್ನಾಗಿಸಿದ ವಿಜಯಭಾಸ್ಕರ್ "ಅಡೂರ್ ಗೋಪಾಲ ಕೃಷ್ಣನ್ "ಅವರ ಎಲ್ಲ ಚಿತ್ರಗಳಿಗೂ ಸಂಗೀತ ನೀಡಿದ ವಿಶಿಷ್ಟ ಹೆಗ್ಗಲ್ಲಿಕೆ ಇವರದ್ದು.'ಮಲಯ ಮಾರುತ"ಅವರು ಸಂಗೀತದ ಹಲವು ಸಾಧ್ಯತೆಯನ್ನು ಬಿಂಬಿಸಿದ ವಿಶಿಷ್ಟ ಚಿತ್ರ ಗಳಲ್ಲಿ ಒಂದು,.ಇವರಿಗೆ 'ಮಲಯ ಮಾರುತ"ಮತ್ತು "ಮುರಳಿ ಗಾನ ಅಮೃತ ಪಾನ"ಚಿತ್ರಗಳಿಗೆ ಪ್ರತಿಷ್ಟಿತ "ಸುರ್ ಸಿಂಗಾರ್"ಗೌರವ ದೊರೆತಿದೆ.ಈ ಗೌರವ ಪಡೆದ ದಕ್ಷಿಣ ಭಾರತದ ಮೊದಲ ಸಂಗೀತ ನಿರ್ದೇಶಕರು ಎಂಬ ಹೆಗ್ಗಳಿಕೆ ಇವರದ್ದು.ಕಸ್ತೂರಿ ಶಂಕರ್, ಬಿ.ಆರ್.ಛಾಯ, ಬಿ.ಕೆ.ಸುಮಿತ್ರ ಅವರನ್ನು ಕನ್ನಡ ಚಿತ್ರರಂಗ ಕ್ಕೆ ಪರಿಚಯಿಸಿದ್ದಾರೆ. ನಿರ್ದೇಶಕ ಗೀತಪ್ರಿಯ ಅವರಿಗೆ ಆ ಹೆಸರನ್ನು ವಿಜಯಭಾಸ್ಕರ್ ಅವರೇ ಸೂಚಿಸಿದರು.

ಬೆಳ್ಳಿ ಮೋಡ,ಯಾವ ಜನ್ಮದ ಮೈತ್ರಿ,ಸಂಕಲ್ಪ,ಧರಣಿ ಮಂಡಲ ಮದ್ಯದೊಳಗ್ಫೆ,ಮುರಳಿ ಗಾನ ಅಮೃತ ಪಾನ,ಪತಿತ ಪಾವನಿ ಹೀಗೆ ಆರು ಚಿತ್ರಗಳಿಗೆ ಶ್ರೀಷ್ಠ ಸಂಗೀತ ನಿರ್ದೇಶಕ ರಾಜ್ಯಪ್ರಶಷ್ಟಿ ಪಡೆದು ದಾಖಲೆ ಸ್ತಾಪಿಸಿರುವ ಅವರು ಕನ್ನಡದ ೧೭೪ ಚಿತ್ರಗಳೂ ಸೇರಿದಂತೆ ಆರು ಭಾಷೆಗಳ ೪೮೪ ಚಿತ್ರಗಳಿಗೆ ಸಂಗೀತ ನೀಡಿದ ವಿಶಿಷ್ಟವಾದ ದಾಖಲೆಯನ್ನು ಹೊಂದಿದ್ದಾರೆ.೧೯೮೫ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ೨೦೦೧ ರಲ್ಲಿ ಜೀವಮಾನದ ಸಾಧನೆಗೆ ಡಾ.ರಾಜ್ ಕುಮಾರ್ ಪ್ರಶಸ್ತಿಯನ್ನು ಪಡೆದ ವಿಜಯ್ ಭಾಸ್ಕರ್ ಸಂಗೀತ ನೀಡಿದ ಕೊನೆಯ ಚಿತ್ರ "ಶ್ರಾವಣ ಸಂಬ್ರಮ'. ಬಹುಕಾಲ ಮದರಾಸು ನಿವಾಸಿಯಾಗಿದ್ದ ಅವರು ಹಲವು ಕನಸುಗಳನ್ನು ಇಟ್ಟುಕೊಂಡು ಜೀವನ ಸಂದ್ಯೆಯಲ್ಲಿ ಸ್ವಂತ ಮನೆ ಕಟ್ಟಿಕೊಂಡು ಬೆಂಗಳೂರಿಗೆ ಬಂದರು,ಆದರೆ ವಿಧಿಗೆ ಇದು ಸಹನೆಯಾಗಲಿಲ್ಲವೂ ಏನೋ ಇದಾದ ಕೆಲವೇ ದಿನಗಳಲ್ಲಿ (೨೦೦೨) ವಿಜಯ ಭಾಸ್ಕರ್ ತೀವ್ರ ಹೃದಯಾಘಾತದಿಂದ ನಮ್ಮನ್ನು ಅಗಲಿದರು.ಅವರು ಕೊಟ್ಟಿರುವ ಸಾವಿರಾರು ಅಮರ ಗೀತೆಗಳು ಸಂಗೀತ ದಿಗ್ಗಜರ ನೆನಪನ್ನು ಚಿರವಾಗಿ ಉಳಿಸಿದೆ. "ನಮನ"

ವಿಜಯಭಾಸ್ಕರ್ ಅವರುಮಾರ್ಚ್ ೩, ೨೦೦೨ ರಂದು ಬೆಂಗಳೂರಿನಲ್ಲಿ ನಿದನ ಹೊಂದಿದರು.

ವಿಜಯಭಾಸ್ಕರ್ ಸಂಗೀತ ನೀಡಿರುವ ಕನ್ನಡ ಚಲನಚಿತ್ರಗಳು

ಬದಲಾಯಿಸಿ
#ವರ್ಷಚಿತ್ರ
೧೯೫೫ಶ್ರೀರಾಮ ಪೂಜ
೧೯೫೬ಭಾಗ್ಯಚಕ್ರ
೧೯೬೦ರಾಣಿ ಹೊನ್ನಮ್ಮ
೧೯೬೩ಮನ ಮೆಚ್ಚಿದ ಮಡದಿ
೧೯೬೩ಸಂತ ತುಕಾರಾಮ
೧೯೬೪ಪೋಸ್ಟ್ ಮಾಸ್ಟರ್
೧೯೬೪ಪತಿಯೇ ದೈವ
೧೯೬೪ನಾಂದಿ
೧೯೬೫ಬೆರೆತ ಜೀವ
೧೦೧೯೬೫ಅಮರಜೀವಿ
೧೧೧೯೬೬ತೂಗುದೀಪ
೧೨೧೯೬೭ಬೆಳ್ಳಿಮೋಡ
೧೩೧೯೬೭ಲಗ್ನಪತ್ರಿಕೆ
೧೪೧೯೬೭ಪ್ರೇಮಕ್ಕು ಪರ್ಮಿಟ್ಟೆ
೧೫೧೯೬೮ಮಂಕುದಿಣ್ಣೆ
೧೬೧೯೬೮ಮೈಸೂರು ಠಾಂಗ
೧೭೧೯೬೮ಭಾಗ್ಯದ ಬಾಗಿಲು
೧೮೧೯೬೮ಆನಂದ ಕಂದ
೧೯೧೯೬೮ಅಣ್ಣ ತಮ್ಮ
೨೦೧೯೬೮ಮಣ್ಣಿನ ಮಗ
೨೧೧೯೬೯ಸುವರ್ಣ ಭೂಮಿ
೨೨೧೯೬೯ನಮ್ಮ ಮಕ್ಕಳು
೨೩೧೯೬೯ಮಲ್ಲಮ್ಮನ ಪವಾಡ
೨೪೧೯೬೯ಎರಡು ಮುಖ
೨೫೧೯೬೯ಮಕ್ಕಳೇ ಮನೆಗೆ ಮಾಣಿಕ್ಯ
೨೬೧೯೬೯ಉಯ್ಯಾಲೆ
೨೭೧೯೬೯ಬೃಂದಾವನ
೨೮೧೯೭೦ಗೆಜ್ಜೆಪೂಜೆ
೨೯೧೯೭೦ಅರಿಶಿನ ಕುಂಕುಮ
೩೦೧೯೭೦ಅನಿರೀಕ್ಷಿತ
೩೧೧೯೭೦ಭೂಪತಿ ರಂಗ
೩೨೧೯೭೦ಠಕ್ಕ ಬಿಟ್ರೆ ಸಿಕ್ಕ
೩೩೧೯೭೦ಲಕ್ಷ್ಮಿ ಸರಸ್ವತಿ
೩೪೧೯೭೦ಬಾಳು ಬೆಳಗಿತು
೩೫೧೯೭೦ಆರು ಮೂರು ಒಂಬತ್ತು
೩೬೧೯೭೦ಸೀತ
೩೭೧೯೭೧ಶರಪಂಜರ
೩೮೧೯೭೧ಸಿಗ್ನಲ್‌ಮ್ಯಾನ್ ಸಿದ್ದಪ್ಪ
೩೯೧೯೭೧ಕಲ್ಯಾಣಿ
೪೦೧೯೭೧ಭಲೇ ಅದೃಷ್ಟವೋ ಅದೃಷ್ಟ
೪೧೧೯೭೧ಮುಕ್ತಿ
೪೨೧೯೭೨ಬಾಳ ಪಂಜರ
೪೩೧೯೭೨ಯಾವ ಜನ್ಮದ ಮೈತ್ರಿ
೪೪೧೯೭೨ಹೃದಯ ಸಂಗಮ
೪೫೧೯೭೨ನಾ ಮೆಚ್ಚಿದ ಹುಡುಗ
೪೬೧೯೭೨ನಂದಗೋಕುಲ
೪೭೧೯೭೨ಮರೆಯದ ದೀಪಾವಳಿ
೪೮೧೯೭೨ಜೀವನ ಜೋಕಾಲಿ
೪೯೧೯೭೨ನಾಗರಹಾವು
೫೦೧೯೭೩ದೇವರು ಕೊಟ್ಟ ತಂಗಿ
೫೧೧೯೭೩ಸಿ.ಐ.ಡಿ ೭೨
೫೨೧೯೭೩ಸಂಕಲ್ಪ
೫೩೧೯೭೩ಸೀತೆಯಲ್ಲ ಸಾವಿತ್ರಿ
೫೪೧೯೭೩ಜಯ ವಿಜಯ
೫೫೧೯೭೩ಮನೆ ಬೆಳಗಿದ ಸೊಸೆ
೫೬೧೯೭೩ಕೆಸರಿನ ಕಮಲ
೫೭೧೯೭೩ಅಬಚೂರಿನ ಪೋಸ್ಟ್ ಆಫೀಸ್
೫೮೧೯೭೪ಉಪಾಸನೆ
೫೯೧೯೭೫ಶುಭಮಂಗಳ
೬೦೧೯೭೫ಕಸ್ತೂರಿ ವಿಜಯ
೬೧೧೯೭೫ಭಾಗ್ಯಜ್ಯೋತಿ
೬೨೧೯೭೫ನಿನಗಾಗಿ ನಾನು
೬೩೧೯೭೫ಬಿಳಿ ಹೆಂಡ್ತಿ
೬೪೧೯೭೫ಹೆಣ್ಣು ಸಂಸಾರದ ಕಣ್ಣು
೬೫೧೯೭೬ಕಥಾಸಂಗಮ
೬೬೧೯೭೬ಮಕ್ಕಳ ಭಾಗ್ಯ
೬೭೧೯೭೬ಬೆಸುಗೆ
೬೮೧೯೭೬ಚಿರಂಜೀವಿ
೬೯೧೯೭೬ತುಳಸಿ
೭೦೧೯೭೬ಮಾಯಾ ಮನುಷ್ಯ
೭೧೧೯೭೬ಫಲಿತಾಂಶ
೭೨೧೯೭೭ಹರಕೆ
೭೩೧೯೭೭ಸಂಘರ್ಷ
೭೪೧೯೭೭ದೀಪ
೭೫೧೯೭೭ಮಾಗಿಯ ಕನಸು
೭೬೧೯೭೭ಮುಗ್ಧಮಾನವ
೭೭೧೯೭೭ಕುಂಕುಮ ರಕ್ಷೆ
೭೮೧೯೭೭ಬನಶಂಕರಿ
೭೯೧೯೭೭ದೇವರೆ ದಿಕ್ಕು
೮೦೧೯೭೭ಗಂಡ ಹೆಂಡ್ತಿ
೮೧೧೯೭೮ಹಾವಿನ ಹೆಜ್ಜೆ
೮೨೧೯೭೮ಸಿರಿತನಕ್ಕೆ ಸವಾಲ್
೮೩೧೯೭೮ಪಡುವಾರಳ್ಳಿ ಪಾಂಡವರು
೮೪೧೯೭೮ಪ್ರೇಮಾಯಣ
೮೫೧೯೭೮ತಪ್ಪಿದ ತಾಳ
೮೬೧೯೭೮ವಸಂತ ಲಕ್ಷ್ಮಿ
೮೭೧೯೭೮ಅಳುಕು
೮೮೧೯೭೮ಅಮರನಾಥ್
೮೯೧೯೭೯ಅದಲು ಬದಲು
೯೦೧೯೭೯ಸದಾನಂದ
೯೧೧೯೭೯ಮುಯ್ಯಿ
೯೨೧೯೭೯ಮಲ್ಲಿಗೆ ಸಂಪಿಗೆ
೯೩೧೯೭೯ಧಂಗೆ ಎದ್ದ ಮಕ್ಕಳು
೯೪೧೯೮೦ಅಖಂಡ ಬ್ರಹ್ಮಚಾರಿಗಳು
೯೫೧೯೮೦ಹಂತಕನ ಸಂಚು
೯೬೧೯೮೦ಕಪ್ಪು ಕೊಳ
೯೭೧೯೮೦ಎಲ್ಲಿಂದಲೋ ಬಂದವರು
೯೮೧೯೮೦ಸುಬ್ಬಿ ಸುಬ್ಬಕ್ಕ ಸುವ್ವಲಾಲಿ
೯೯೧೯೮೦ನಮ್ಮಮ್ಮನ ಸೊಸೆ
೧೦೦೧೯೮೦ಮದರ್
೧೦೧೧೯೮೦ಬಂಗಾರದ ಜಿಂಕೆ
೧೦೨೧೯೮೦ಮಿಥುನ
೧೦೩೧೯೮೦ಡ್ರೈವರ್ ಹನುಮಂತು
೧೦೪೧೯೮೧ಲೀಡರ್ ವಿಶ್ವನಾಥ್
೧೦೫೧೯೮೧ತೀರದ ಬಯಕೆ
೧೦೬೧೯೮೧ಛಲಗಾರ
೧೦೭೧೯೮೧ಗ್ರಹಣ
೧೦೮೧೯೮೧ನಾರಿ ಸ್ವರ್ಗಕ್ಕೆ ದಾರಿ
೧೦೯೧೯೮೧ಬಾಳು ಬಂಗಾರ
೧೧೦೧೯೮೧ಬಂಗಾರದ ಮನೆ
೧೧೧೧೯೮೧ಪ್ರೀತಿಸಿ ನೋಡು
೧೧೨೧೯೮೨ಜೋಡಿ ಜೀವ
೧೧೩೧೯೮೨ಜಿಮ್ಮಿಗಲ್ಲು
೧೧೪೧೯೮೨ಮಾನಸ ಸರೋವರ
೧೧೫೧೯೮೨ಸುವರ್ಣ ಸೇತುವೆ
೧೧೬೧೯೮೩ದೇವರ ತೀರ್ಪು
೧೧೭೧೯೮೩ಅನ್ವೇಷಣೆ
೧೧೮೧೯೮೩ಧರಣಿ ಮಂಡಲ ಮಧ್ಯದೊಳಗೆ
೧೧೯೧೯೮೩ಬ್ಯಾಂಕರ್ ಮಾರ್ಗಯ್ಯ
೧೨೦೧೯೮೩ಮತ್ತೆ ವಸಂತ
೧೨೧೧೯೮೩ಆನಂದಸಾಗರ
೧೨೨೧೯೮೩ಮುತ್ತೈದೆ ಭಾಗ್ಯ
೧೨೩೧೯೮೩ಸಂಚಾರಿ
೧೨೪೧೯೮೪ಶುಭಮುಹೂರ್ತ
೧೨೫೧೯೮೪ಅಮೃತಘಳಿಗೆ
೧೨೬೧೯೮೪ಹುಲಿ ಹೆಜ್ಜೆ
೧೨೭೧೯೮೪ಪವಿತ್ರ ಪ್ರೇಮ
೧೨೮೧೯೮೪ಋಣಮುಕ್ತಳು
೧೨೯೧೯೮೫ಹಾವು ಏಣಿಯಾಟ
೧೩೦೧೯೮೫ಮಾವನೊ ಅಳಿಯನೊ
೧೩೧೧೯೮೫ಮಸಣದ ಹೂವು
೧೩೨೧೯೮೬ತವರು ಮನೆ
೧೩೩೧೯೮೬ನೆನಪಿನ ದೋಣಿ
೧೩೪೧೯೮೬ಸುಂದರ ಸ್ವಪ್ನಗಳು
೧೩೫೧೯೮೬ಮಲಯ ಮಾರುತ
೧೩೬೧೯೮೭ಹುಲಿ ಹೆಬ್ಬುಲಿ
೧೩೭೧೯೮೭ತಾಳಿಯ ಆಣೆ
೧೩೮೧೯೮೭ಆಸೆಯ ಬಲೆ
೧೩೯೧೯೮೭ಅವಸ್ಥೆ
೧೪೦೧೯೮೭ಬಂಧಮುಕ್ತ
೧೪೧೧೯೮೭ಸೂರ್ಯ
೧೪೨೧೯೮೮ತಾಯಿಯ ಆಸೆ
೧೪೩೧೯೮೮ಭೂಮಿ ತಾಯಾಣೆ
೧೪೪೧೯೮೮ಗುಡುಗು ಸಿಡಿಲು
೧೪೫೧೯೮೮ತಾಯಿಗೊಬ್ಬ ಕರ್ಣ
೧೪೬೧೯೮೮ಮಿಥಿಲೆಯ ಸೀತೆಯರು
೧೪೭೧೯೮೮ಕಾಡಿನ ಬೆಂಕಿ
೧೪೮೧೯೮೯ತಾಳಿಗಾಗಿ
೧೪೯೧೯೮೯ಮಧುಮಾಸ
೧೫೦೧೯೯೦ಅಮೃತಬಿಂದು
೧೫೧೧೯೯೦ಎದುರು ಮನೆ ಮೀನಾ
೧೫೨೧೯೯೦ಪ್ರಥಮ ಉಷಾಕಿರಣ
೧೫೩೧೯೯೧ಇದುವೇ ಜೀವನ
೧೫೪೧೯೯೨ಪುಟ್ಟ ಹೆಂಡ್ತಿ
೧೫೫೧೯೯೨ಉಂಡೂ ಹೋದ ಕೊಂಡೂ ಹೋದ
೧೫೬೧೯೯೨ಹರಕೆಯ ಕುರಿ
೧೫೭೧೯೯೨ಸಂಗ್ಯಾ ಬಾಳ್ಯ
೧೫೮೧೯೯೩ಜಂಬೂಸವಾರಿ
೧೫೯೧೯೯೪ಸೂಪರ್ ನೋವ ೪೫೯
೧೬೦೧೯೯೫ಆಘಾತ
೧೬೧೧೯೯೬ಹೆತ್ತವಳ ಕೂಗು
೧೬೨೧೯೯೮ಅವಳ ಚರಿತ್ರೆ

ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್‌ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ

🔥 Top keywords: ಕಮಲಾ ಹಂಪನಾಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರವಿಶೇಷ:Searchದರ್ಶನ್ ತೂಗುದೀಪ್ಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡ ಅಕ್ಷರಮಾಲೆಕನ್ನಡಮೊದಲನೆಯ ಕೆಂಪೇಗೌಡಹಂ.ಪ.ನಾಗರಾಜಯ್ಯಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಕುದುರೆಅಂತರಾಷ್ಟ್ರೀಯ ಯೋಗ ದಿನಪೂರ್ಣಚಂದ್ರ ತೇಜಸ್ವಿಶಿವರಾಮ ಕಾರಂತಕನ್ನಡ ಸಾಹಿತ್ಯವಿಶೇಷ:RecentChangesಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕಜಿ.ಎಸ್.ಶಿವರುದ್ರಪ್ಪತೆಂಗಿನಕಾಯಿ ಮರಚಂದ್ರಶೇಖರ ಕಂಬಾರಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಇತಿಹಾಸಕನ್ನಡ ಸಂಧಿಕನಕದಾಸರುಶಾಸನಗಳುಯು.ಆರ್.ಅನಂತಮೂರ್ತಿವಿನಾಯಕ ಕೃಷ್ಣ ಗೋಕಾಕಅಕ್ಕಮಹಾದೇವಿಮಾಸ್ತಿ ವೆಂಕಟೇಶ ಅಯ್ಯಂಗಾರ್