ಪಗೋಡಾ (ನಾಣ್ಯ)
ಪಗೋಡಾ ಚಲಾವಣೆಯ ಒಂದು ಏಕಮಾನವಾಗಿತ್ತು. ಈ ನಾಣ್ಯವನ್ನು ಚಿನ್ನ ಅಥವಾ ಅರ್ಧ ಚಿನ್ನದಿಂದ ತಯಾರಿಸಲಾಗುತ್ತಿತ್ತು. ಭಾರತೀಯ ರಾಜವಂಶಗಳು, ಜೊತೆಗೆ ಬ್ರಿಟಿಷರು, ಫ಼್ರೆಂಚರು ಮತ್ತು ಡಚ್ಚರು ಈ ನಾಣ್ಯವನ್ನು ಟಂಕಿಸುತ್ತಿದ್ದರು. ಇದನ್ನು ೪೨ ಫಣಮ್ಗಳಾಗಿ ವಿಭಜಿಸಲಾಗಿತ್ತು. ಮಧ್ಯಯುಗದ ದಕ್ಷಿಣ ಭಾರತದಲ್ಲಿನ ವಿವಿಧ ರಾಜವಂಶಗಳು ಪಗೋಡಾ ನಾಣ್ಯಗಳನ್ನು ಹೊರಡಿಸಿದ್ದವು. ಇವುಗಳಲ್ಲಿ ಹಾನಗಲ್ಲಿನ ಕದಂಬರು, ಗೋವಾದ ಕದಂಬರು, ಮತ್ತು ವಿಜಯನಗರ ಸಾಮ್ರಾಜ್ಯ ಸೇರಿವೆ.[೧]
![](http://upload.wikimedia.org/wikipedia/commons/thumb/a/a2/French_issued_gold_Pagoda_for_Southern_India_trade_cast_in_Pondicherry_1705_1780.jpg/350px-French_issued_gold_Pagoda_for_Southern_India_trade_cast_in_Pondicherry_1705_1780.jpg)
ವಿದೇಶಿ ವ್ಯಾಪಾರಿಗಳು ಟಂಕಿಸಿದ ಪಗೋಡಾಗಳಲ್ಲಿ ಎರಡು ಪ್ರಕಾರಗಳಿದ್ದವು:
- ನಕ್ಷತ್ರ ಪಗೋಡಾ ಅತ್ಯಂತ ಬೆಲೆಬಾಳುವಂಥದ್ದಾಗಿತ್ತು, ೧೦೦ ಪಗೋಡಾಗಳು ೩೫೦ ರೂಪಾಯಿಗಳಷ್ಟು ಬೆಲೆಬಾಳುತ್ತಿದ್ದವು. ಇವನ್ನು ಮದ್ರಾಸಿನಲ್ಲಿ ಈಸ್ಟ್ ಇಂಡಿಯ ಕಂಪನಿ ಹೊರಡಿಸಿತ್ತು.[೨]
- ಪೋರ್ಟೊ ನೋವೊ ಪಗೋಡಾ ಎರಡನೆ ಬಗೆಯದು. ಇದನ್ನು ಟ್ಯೂಟಿಕಾರಿನ್ನಲ್ಲಿ ಡಚ್ಚರು ಮತ್ತು ಆರ್ಕಟ್ನ ನವಾಬರು ಕೂಡ ಹೊರಡಿಸಿದ್ದರು. ಇದು ನಕ್ಷತ್ರ ಪಗೋಡಾಕ್ಕಿಂತ ಶೇಕಡ ೨೫ ರಷ್ಟು ಕಡಿಮೆ ಬೆಲೆಬಾಳುತ್ತಿತ್ತು.[೩]
ಉಲ್ಲೇಖಗಳು
ಬದಲಾಯಿಸಿ- ↑ "Southern India Coins". Med.unc.edu. Archived from the original on 2007-02-04. Retrieved 2007-03-20.
- ↑ "European East India Companies coins". Chennai Museum. Retrieved 2007-03-20.
- ↑ "glossary - pagoda". Archived from the original on 2007-01-26. Retrieved 2007-03-20.
{{cite web}}
: Unknown parameter|dead-url=
ignored (help)
🔥 Top keywords: ಕಮಲಾ ಹಂಪನಾಮುಖ್ಯ ಪುಟಕುವೆಂಪುಸಹಾಯ:ಲಿಪ್ಯಂತರವಿಶೇಷ:Searchದರ್ಶನ್ ತೂಗುದೀಪ್ಗಾದೆದ.ರಾ.ಬೇಂದ್ರೆಗೌತಮ ಬುದ್ಧಕನ್ನಡ ಅಕ್ಷರಮಾಲೆಕನ್ನಡಮೊದಲನೆಯ ಕೆಂಪೇಗೌಡಹಂ.ಪ.ನಾಗರಾಜಯ್ಯಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಬಿ. ಆರ್. ಅಂಬೇಡ್ಕರ್ಭಾರತದ ಸಂವಿಧಾನಕುದುರೆಅಂತರಾಷ್ಟ್ರೀಯ ಯೋಗ ದಿನಪೂರ್ಣಚಂದ್ರ ತೇಜಸ್ವಿಶಿವರಾಮ ಕಾರಂತಕನ್ನಡ ಸಾಹಿತ್ಯವಿಶೇಷ:RecentChangesಭಾರತದ ರಾಷ್ಟ್ರಪತಿಗಳ ಪಟ್ಟಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕರ್ನಾಟಕಜಿ.ಎಸ್.ಶಿವರುದ್ರಪ್ಪತೆಂಗಿನಕಾಯಿ ಮರಚಂದ್ರಶೇಖರ ಕಂಬಾರಮಹಾತ್ಮ ಗಾಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಇತಿಹಾಸಕನ್ನಡ ಸಂಧಿಕನಕದಾಸರುಶಾಸನಗಳುಯು.ಆರ್.ಅನಂತಮೂರ್ತಿವಿನಾಯಕ ಕೃಷ್ಣ ಗೋಕಾಕಅಕ್ಕಮಹಾದೇವಿಮಾಸ್ತಿ ವೆಂಕಟೇಶ ಅಯ್ಯಂಗಾರ್