ಕಪ್ಪೆಚಿಪ್ಪು

ಕಪ್ಪೆಚಿಪ್ಪು (ಸರಳವಾಗಿ ಚಿಪ್ಪು ಎಂದೂ ಕರೆಯಲಾಗುತ್ತದೆ) ಸಮುದ್ರದಲ್ಲಿ ವಾಸಿಸುವ ಪ್ರಾಣಿಯಿಂದ ಸೃಷ್ಟಿಸಲ್ಪಟ್ಟ ಗಟ್ಟಿಯಾದ ರಕ್ಷಣಾತ್ಮಕ ಹೊರಕವಚ. ಚಿಪ್ಪು ಪ್ರಾಣಿಯ ಶರೀರದ ಭಾಗವಾಗಿದೆ. ಬರಿದಾದ ಕಪ್ಪೆಚಿಪ್ಪುಗಳು ಹಲವುವೇಳೆ ಕಡಲತೀರಗಳ ಮೇಲೆ ತೇಲಿಕೊಂಡು ಬಂದಿರುವುದು ಕಂಡುಬರುತ್ತದೆ. ಪ್ರಾಣಿಯು ಸತ್ತುಹೋಗಿರುವುದರಿಂದ ಮತ್ತು ಮೃದು ಭಾಗಗಳನ್ನು ಮತ್ತೊಂದು ಪ್ರಾಣಿಯು ತಿಂದಿರುವುದರಿಂದ ಅಥವಾ ಅವು ಕೊಳೆತಿರುವುದರಿಂದ ಚಿಪ್ಪುಗಳು ಬರಿದಾಗಿರುತ್ತವೆ.

ಕಪ್ಪೆಚಿಪ್ಪು ಸಾಮಾನ್ಯವಾಗಿ ಒಂದು ಅಕಶೇರುಕದ ಬಾಹ್ಯಕವಚವಾಗಿರುತ್ತದೆ, ಮತ್ತು ಸಾಮಾನ್ಯವಾಗಿ ಕ್ಯಾಲ್ಷಿಯಂ ಕಾರ್ಬೊನೇಟ್ ಅಥವಾ ಕೈಟಿನ್‍ನಿಂದ ರೂಪಗೊಂಡಿರುತ್ತದೆ. ಕಡಲತೀರಗಳ ಮೇಲೆ ಕಂಡುಬರುವ ಬಹುತೇಕ ಚಿಪ್ಪುಗಳು ಭಾಗಶಃ ಕಡಲ ದ್ವಂಗಿಗಳ ಚಿಪ್ಪಾಗಿರುತ್ತವೆ. ಈ ಚಿಪ್ಪುಗಳು ಸಾಮಾನ್ಯವಾಗಿ ಕ್ಯಾಲ್ಷಿಯಂ ಕಾರ್ಬೊನೇಟ್‍ನಿಂದ ರಚಿತವಾಗಿರುತ್ತವೆ, ಮತ್ತು ಕೈಟಿನ್‍ನಿಂದ ರೂಪಗೊಂಡ ಚಿಪ್ಪುಗಳಿಗಿಂತ ಹೆಚ್ಚು ಉತ್ತಮವಾಗಿ ತಾಳಿಕೊಳ್ಳುತ್ತವೆ.

ಬಾಹ್ಯ ಸಂಪರ್ಕಗಳು ಬದಲಾಯಿಸಿ

🔥 Top keywords: ಕನ್ನಡಮುಖ್ಯ ಪುಟದಶಾವತಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕುವೆಂಪುಕನ್ನಡ ಅಕ್ಷರಮಾಲೆಗಾದೆಬಸವೇಶ್ವರಕನ್ನಡ ಗುಣಿತಾಕ್ಷರಗಳುಸಹಾಯ:ಲಿಪ್ಯಂತರವಿಶೇಷ:Searchಕರ್ನಾಟಕಹವಾಮಾನಸತ್ಯವತಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ಸಂವಿಧಾನಅವತಾರಬಿ. ಆರ್. ಅಂಬೇಡ್ಕರ್ಕನ್ನಡ ಸಾಹಿತ್ಯ ಪರಿಷತ್ತುರಾಯಲ್ ಚಾಲೆಂಜರ್ಸ್ ಬೆಂಗಳೂರುದ.ರಾ.ಬೇಂದ್ರೆಪ್ರಜ್ವಲ್ ರೇವಣ್ಣಕರ್ನಾಟಕದ ಇತಿಹಾಸಶಿವರಾಮ ಕಾರಂತಕನ್ನಡ ಸಂಧಿಕರ್ನಾಟಕದ ಜಿಲ್ಲೆಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಎಚ್.ಡಿ.ರೇವಣ್ಣರಾಮಾಯಣಕನ್ನಡ ಸಾಹಿತ್ಯಯಶವಂತ ಚಿತ್ತಾಲಯು.ಆರ್.ಅನಂತಮೂರ್ತಿಅಕ್ಕಮಹಾದೇವಿತಾಪಮಾನನರೇಂದ್ರ ಮೋದಿಮಹಾತ್ಮ ಗಾಂಧಿಚಂದ್ರಶೇಖರ ಕಂಬಾರಬೆಂಗಳೂರುಜ್ಯೋತಿಷ ಶಾಸ್ತ್ರದ ನಕ್ಷತ್ರಗಳು