ಉತ್ಪಲ ಮಾಲಾ ವೃತ್ತ

ಉತ್ಪಲಮಾಲಾವೃತ್ತದ ಪ್ರತಿ ಸಾಲಿನಲ್ಲೂ ೨೦ ಅಕ್ಷರಗಳಿರುತ್ತವೆ. ಅವುಗಳ ವಿನ್ಯಾಸದಲ್ಲಿ "ಭರನಭಭರಲಗ" ಗಣವಿನ್ಯಾಸವಿರುತ್ತದೆ.(ಲ-ಲಘು, ಗು-ಗುರು)
ಸೂತ್ರ ಪದ್ಯ ಹೀಗಿದೆ
"ಉತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿರಲ್"
ಈ ಪದ್ಯಕ್ಕೆ ಪ್ರಸ್ತಾರ ಹಾಕಿದರೂ ಸಹ ಉತ್ಪಲಮಾಲಾ ವೃತ್ತದ ಲಕ್ಷಣ ಗೊತ್ತಾಗುತ್ತದೆ

ಉತ್ಪಲಮಾಲಾ
ಲಗಂ
_UU_U_U U U_ U U_ U U_ U _U _
ತ್ಪಲಮಾಲೆಯಪ್ಪುದುಭರಂನಭಭಂರಲಗಂ ನೆಗಳ್ದಿ ರಲ್

ಕನ್ನಡದ ಆದಿ ಕವಿ ಪಂಪನ ಕೃತಿಯಿಂದಾದಿಯಾಗಿ ಅನೇಕ ಕಡೆಗಳಲ್ಲಿ ಈ ಛಂದಸ್ಸು ಬಳಸಲ್ಪಟ್ಟಿದೆ.
ಉದಾಹರಣೆಗೆ ವಿಕ್ರಮಾರ್ಜುನ_ವಿಜಯ ದಲ್ಲಿನ:-
ಶ್ರೀಯನರಾತಿ ಸಾಧನಪಯೋನಿಧಿಯೊಳ್ ಪಡೆದುಂ ಧರಿತ್ರಿಯಂ
ಜೀಯನೆ ಬೇಡಿಕೊಳ್ಳದೆ ವಿರೋಧಿ ನರೇಂದ್ರರನೊತ್ತಿಕೊಂಡುಮಾ
ತ್ಮೀಯ ಸುಪುಷ್ಪಪಟ್ಟಮನೊಡಂಬಡೆ ತಾಳ್ಡಿಯುಮಿಂತುದಾತ್ತ ನಾ
ರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ||
(ವಿಕ್ರಮಾರ್ಜುನವಿಜಯ ೧-೧)

🔥 Top keywords: ಕನ್ನಡ ಅಕ್ಷರಮಾಲೆಕುವೆಂಪುಸಹಾಯ:ಲಿಪ್ಯಂತರಮುಖ್ಯ ಪುಟವಿಶೇಷ:Searchವಿಶ್ವ ಪರಿಸರ ದಿನನಾಲ್ವಡಿ ಕೃಷ್ಣರಾಜ ಒಡೆಯರುಕನ್ನಡಗಾದೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಕನ್ನಡ ಗುಣಿತಾಕ್ಷರಗಳುಕರ್ನಾಟಕ ವಿಧಾನ ಪರಿಷತ್ದ.ರಾ.ಬೇಂದ್ರೆಶಿವರಾಮ ಕಾರಂತಬಸವೇಶ್ವರಕರ್ನಾಟಕದ ಜಿಲ್ಲೆಗಳುವರ್ಗೀಯ ವ್ಯಂಜನಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಗೌತಮ ಬುದ್ಧಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕನ್ನಡ ಸಂಧಿಭಾರತದ ಸಂವಿಧಾನಚಂದ್ರಶೇಖರ ಕಂಬಾರಬಿ. ಆರ್. ಅಂಬೇಡ್ಕರ್ಮಳೆಬಿಲ್ಲುಅಕ್ಕಮಹಾದೇವಿಕನ್ನಡ ವ್ಯಾಕರಣಭಾರತದ ರಾಷ್ಟ್ರಪತಿಗಳ ಪಟ್ಟಿಕನ್ನಡ ಸಾಹಿತ್ಯಜಿ.ಎಸ್.ಶಿವರುದ್ರಪ್ಪಗಿರೀಶ್ ಕಾರ್ನಾಡ್ವಿಭಕ್ತಿ ಪ್ರತ್ಯಯಗಳುಕರ್ನಾಟಕಯು.ಆರ್.ಅನಂತಮೂರ್ತಿವ್ಯಂಜನವಿಜಯನಗರ ಸಾಮ್ರಾಜ್ಯಲೋಕಸಭೆ