ಆರ್ಮಡಿಲ್ಲೊ

ಆರ್ಮಡಿಲೊ
Temporal range: Paleocene-Recent, 58.7–0 Ma
Nine-banded armadillo, Dasypus novemcinctus
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಮೇಲ್ಗಣ:
ಗಣ:
ಕುಟುಂಬ:
Dasypodidae

Gray, 1821
Type genus
Dasypus

ಕವಚಧಾರಿ ಅದಂತಿ (ಈಡೇಂಟು). ಹೆಗ್ಗಣದಂತೆ ನೆಲಕೊರೆಯುವ ಒಂದು ಜಾತಿಯ ಪ್ರಾಣಿ. ಈ ಜಾತಿಯ ಪ್ರಾಣಿಗಳೆಲ್ಲ ಅಮೆರಿಕದ ನಿವಾಸಿ.

ಗುರುತು

ಬದಲಾಯಿಸಿ

ಇವುಗಳ ಹಲವಾರು ಮೂಳೆಚಿಕ್ಕೆಗಳು ಹೆಚ್ಚು ಕಡಿಮೆ ಮೈಯನ್ನೆಲ್ಲ ಪೂರ್ಣವಾಗಿ ಮುಚ್ಚುವ ಕವಚದಂತಿದೆ. ಹೆಗಲಿನಲ್ಲಿ ಒಂದು ಮೂಳೆಯ ಗುರಾಣಿ ಇದೆ. ಸೊಂಟದಲ್ಲಿ ಮತ್ತೊಂದಿದೆ. ಇವುಗಳ ನಡುವೆ ಚಲಿಸುವಂಥ ಹಲವಾರು ಮೂಳೆಯ ಒಡ್ಯಾಣ ಅಥವಾ ಚುಕ್ಕೆಗಳು ಇದ್ದು ಮೈ ಬಾಗಿ ಬಳುಕಲು ಸಾಕಷ್ಟು ಅವಕಾಶವಿದೆ. ತಲೆಯಮೇಲೆ ಮತ್ತೊಂದು ಮೂಳೆಯ ಗುರಾಣಿ ಇದೆ. ಬಾಲದುದ್ದಕ್ಕೂ ಚಿಕ್ಕ ಮೂಳೆಗಳಿವೆ. ಇವನ್ನು ಬಿಟ್ಟರೆ ಚರ್ಮದಮೇಲೆ ಮೂಳೆಪಟ್ಟಿಗಳ ಲೆಕ್ಕವನ್ನವಲಂಬಿಸಿದೆ. ಉದಾಹರಣೆಗೆ ಮೂರು ಪಟ್ಟೆ, ಆರು ಪಟ್ಟೆ, ಒಂಬತ್ತುಪಟ್ಟೆ ಇತ್ಯಾದಿ. ಹೊರ ಕವಚ ಬಹಳ ಬಲವಾಗಿರುವುದಲ್ಲದೆ ಅದರೊಳಕ್ಕೆ ಪ್ರಾಣಿ ತನ್ನ ತಲೆಯನ್ನೂ ಬಾಲವನ್ನೂ ಎಳೆದುಕೊಂಡು ಒಂದು ದುರ್ಭೇದ್ಯವಾದ ಚೆಂಡಿನಂತೆ ಗುಂಡಾಗಿ ಉರುಳುತ್ತಿರುಬಲ್ಲದು.

ಆರ್ಮಡಿಲ್ಲೊದ ಅಸ್ತಿ ಪಂಜರ

ಇದು ಸ್ಲಾತ್ ಎಂಬ ಪ್ರಾಣಿಯ ಗುಂಪಿಗೆ ಸೇರಿದೆ. ಸ್ಲಾತ್ ಮರದ ರೆಂಬೆಗಳನ್ನು ಆಶ್ರಯಿಸಿದ್ದರೆ, ಇದು ತನ್ನ ಕವಚವನ್ನೂ ತೋಡುವ ಸಾಮಥ್ರ್ಯವನ್ನೂ ಅವಲಂಬಿಸಿ ನೆಲವನ್ನು ಆಶ್ರಯಿಸಿದೆ. ಇದಕ್ಕೆ ಒಳ್ಳೆಯ ಬಲವಾದ ಉಗುರುಗಳಿರುವುದರಿಂದ ನೆಲವನ್ನು ಬೇಗನೆ ತೋಡಿ ನೆಟ್ಟನೆ ಒಳಕ್ಕಿಳಿದು ಕಣ್ಮರೆಯಾಗಬಲ್ಲದು. ಕವಚದ ರಕ್ಷಣೆಯ ಜೊತೆಗೆ ಇದು ವೇಗವಾಗಿ ಓಡಲೂಬಲ್ಲದು; ಚುರುಗುಟ್ಟುವಂತೆ ಕಡಿಯಲೂ ಬಲ್ಲದು. ಸಾಮಾನ್ಯವಾಗಿ ಇದು ದುಷ್ಟ ಜಂತುವಲ್ಲ. ಬೆದೆಗಾಲದಲ್ಲಿ ಹೊರತು, ಮಿಕ್ಕ ಸಮಯಗಳಲ್ಲಿ ಒಂಟಿಯಾಗಿಯೇ ಇರುತ್ತದೆ. ತಗ್ಗು ಏರು ಇಲ್ಲದ ಬಯಲು ಕಾಡುಗಳಲ್ಲೂ ನೆಲಗಳಲ್ಲೂ ಇರಲು ಇದಕ್ಕೆ ಇಷ್ಟ. ನಸುಹಳಸಿದ ಮಾಂಸವೆಂದರೆ ಅದಕ್ಕೆ ತುಂಬ ಪ್ರೀತಿ. ಕೆಲವು ಆರ್ಮಡಿಲ್ಲೊಗಳು ಹಾವುಗಳನ್ನು ತಿನ್ನುತ್ತವೆ. ರೋಮಭರಿತ ಆರ್ಮಡಿಲ್ಲೊ ತಿನ್ನದ ವಸ್ತುವಿಲ್ಲ. ಯಾವ ರೀತಿಯ ಆಹಾರವನ್ನೂ ತಿನ್ನುತ್ತದೆ.

ಇವು ರಾತ್ರಿಯಲ್ಲಿ ತಮ್ಮ ಗೂಡುಗಳಿಂದ ಹೊರಬಿದ್ದು ಹುಳು ಹುಪ್ಪಟೆ, ಸಣ್ಣದಂಶಕ ಪ್ರಾಣಿಗಳು ಮತ್ತು ಸತ್ತ ಪ್ರಾಣಿಗಳನ್ನು ಹುಡುಕಿಕೊಂಡು ಹೊರಡುತ್ತವೆ.

ರಾಕ್ಷಸ ಆರ್ಮಡಿಲ್ಲೊ

ಬದಲಾಯಿಸಿ
ರಾಕ್ಷಸ ಆರ್ಮಡಿಲ್ಲೊ

ತಲೆಯಿಂದ ಬಾಲದ ಕೊನೆಯವರೆಗೆ ಐದು ಅಡಿಗಳಷ್ಟಿರುವ ರಾಕ್ಷಸ ಆರ್ಮಡಿಲ್ಲೊ ಈ ಜಾತಿಯಲ್ಲಿ ಅತ್ಯಂತ ದೊಡ್ಡ ಪ್ರಾಣಿ. ಒಂಬತ್ತು ಪಟ್ಟೆಗಳುಳ್ಳ ಆರ್ಮಡಿಲ್ಲೊ ಒಂದೇ ದಕ್ಷಿಣ ಟೆಕ್ಸಾಸ್, ಅರಿಜೋನ, ಅಲ್ಲಿಂದ ದಕ್ಷಿಣಕ್ಕೆ ಬ್ರೆಜಿಲ್‍ವರೆಗೂ ಅರ್ಜಂಟೀನದ ಬಯಲು ಕಾಡಿನಿಂದ ಹಿಡಿದು ಪನಾಮಾದವರೆಗೂ ದಕ್ಷಿಣ ಅಮೆರಿಕದ ಎಲ್ಲೆಡೆಯಲ್ಲೂ ಹರಡಿದೆ.

ಇವು ಮನುಷ್ಯರ ಕೈಗೆ ಸಿಕ್ಕು ಅಂದರೆ ಮನುಷ್ಯರೊಂದಿಗೆ ಬಾಳಬೇಕಾಗಿ ಬಂದಾಗ ಇವುಗಳಲ್ಲಿ ಅನೇಕವು ಕೊಚ್ಚಿದ ಮಾಂಸ, ಕೋಳಿ ಮೊಟ್ಟೆ, ಅನ್ನ ಇವುಗಳನ್ನು ತಿಂದು ಬದುಕಬಲ್ಲವು.

🔥 Top keywords: ಮೊದಲನೆಯ ಕೆಂಪೇಗೌಡಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಮುಖ್ಯ ಪುಟದ.ರಾ.ಬೇಂದ್ರೆಗೌತಮ ಬುದ್ಧಕನ್ನಡ ಅಕ್ಷರಮಾಲೆಗಾದೆಶಿವರಾಮ ಕಾರಂತಕನ್ನಡಬಸವೇಶ್ವರಪೂರ್ಣಚಂದ್ರ ತೇಜಸ್ವಿಮಾಸ್ತಿ ವೆಂಕಟೇಶ ಅಯ್ಯಂಗಾರ್ಯು.ಆರ್.ಅನಂತಮೂರ್ತಿಭಾರತದ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾರತದ ಸಂವಿಧಾನಬಿ. ಆರ್. ಅಂಬೇಡ್ಕರ್ವಿನಾಯಕ ಕೃಷ್ಣ ಗೋಕಾಕಚಂದ್ರಶೇಖರ ಕಂಬಾರಕನ್ನಡ ಗುಣಿತಾಕ್ಷರಗಳುಗಿರೀಶ್ ಕಾರ್ನಾಡ್ಕರ್ನಾಟಕದ ಏಕೀಕರಣಕರ್ನಾಟಕಕನ್ನಡ ಸಾಹಿತ್ಯಮಹಾತ್ಮ ಗಾಂಧಿಅಕ್ಕಮಹಾದೇವಿಬಾವುಟಎ.ಪಿ.ಜೆ.ಅಬ್ದುಲ್ ಕಲಾಂವಚನಕಾರರ ಅಂಕಿತ ನಾಮಗಳುಕನ್ನಡ ಸಂಧಿಹಂಪೆತತ್ಸಮ-ತದ್ಭವದರ್ಶನ್ ತೂಗುದೀಪ್ಸಲಿಂಗ ಕಾಮವಚನ ಸಾಹಿತ್ಯ