ರಾಶಿ

ದ್ವಾದಶ ರಾಶಿಗಳು ಬದಲಾಯಿಸಿ

  • ಸೌರಮಾನ ಮಾಸಗಳು ಮತ್ತು ಹನ್ನೆರಡು ನಕ್ಷತ್ರಪುಂಜಗಳು
  • ಖಗೋಲವೃತ್ತದ ೩೬೦ ಡಿಗ್ರಿ(ಅಂಶ) ಗಳನ್ನು ಅಶ್ವಿನಿ ನಕ್ಷತ್ರದ ಆರಂಭದ ಬಿಂದು ೦ ಡಿಗ್ರಿಯಿಂದ ಆರಂಭಿಸಿ ೩೦ ಡಿಗ್ರಿಗಳಂತೆ ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ, ಮೀನ, (ಇವು ಸೌರಮಾನ ತಿಂಗಳುಗಳ ಹೆಸರುಗಳೂ ಆಗಿವೆ) ಹೀಗೆ, ಪ್ರತಿ ೩೦ ಡಿಗ್ರಿಗಳ(೩೦ ಅಂಶ) ೧೨ ರಾಶಿಗಳಾಗಿ ವಿಂಗಡಿಸಿರುವುದೇ ಸೌರಮಾನ ತಿಂಗಳು. ಈ ಮೇಷಾದಿ ರಾಶಿಗಳಿಗೆ ಪ್ರತಿಯೊಂದಕ್ಕೂ ಒಂದೊಂದು ನಕ್ಷತ್ರಗಳ ಪುಂಜ(ಗುಂಪು) ಇದೆ. ಅದನ್ನು ಆಕಾಶದಲ್ಲಿ ಸುಲಭವಾಗಿ ಗುರುತಿಸಬಹುದು. [೧] [೨]

ಜ್ಯೋತಿಷ್ಯ ಶಾಸ್ತ್ರದಲ್ಲಿ ಆಕಾಶದಲ್ಲಿ ಸೂರ್ಯನ ಪಥವನ್ನು (ಕ್ರಾಂತಿವೃತ್ತ) ೧೨ ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ ವಿಂಗಡನೆಗಳೇ ರಾಶಿಗಳು. ಪಾಶ್ಚಾತ್ಯ ಮತ್ತು ಹಿಂದೂ ಜೋತಿಷ್ಯಗಳಲ್ಲಿ ಈ ರಾಶಿಗಳು ಹೀಗಿವೆ:[೩]

ಕ್ರಮಾಂಕಸಂಸ್ಕೃತ ಹೆಸರುಪಾಶ್ಚಾತ್ಯ ಹೆಸರುತತ್ವ
1ಮೇಷAries ("ram")Fire
2ವೃಷಭTaurus ("bull")Earth
3ಮಿಥುನGemini ("twins")Air
4ಕರ್ಕಾಟಕCancer (("crab")Water
5ಸಿಂಹLeo ("lion")Fire
6ಕನ್ಯಾVirgo ("virgin", "girl")Earth
7ತುಲಾLibra ("balance")Air
8ವೃಶ್ಚಿಕScorpio ( "scorpion")Water
9ಧನುಸ್Sagittarius ("archer", "bow")Fire
10ಮಕರ:(ಮೊಸಳೆ-ಭಾರತೀಯ)Capricorn ("goat-horned", "sea-monster")Earth
11ಕುಂಭAquarius ("water-pourer", "pitcher")Air
12ಮೀನPisces ("fish")Water

ಇದನ್ನೂ ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. ಶ್ರೀ ಸೃಂಗೇರಿ ಮಠಿಯ ಪಂಚಾಂಗ ೨೦೧೭-೧೮.
  2. ಜ್ಯೋತಿರ್ಗನ್ನಡಿ -ಲೇಖಕ ; ರಮಾಕಾಂತ.
  3. Astrology For Beginners: B. V. Raman: 9788185674223: Amazon.com ...